ವಾಣಿಜ್ಯ

ಜನವರಿಯಲ್ಲಿ ಎಲೆಕ್ರಾಮ 2014

ವಿಶ್ವದ ಅತಿದೊಡ್ಡ ವಿದ್ಯುತ್ ಪೂರೈಕೆ ಮತ್ತು ಸರಬರಾಜು ಸಂಬಂಧಿತ ಸಮ್ಮೇಳನ ELECRAMA-2014...

Published On :

ವಿಶ್ವದ ಅತಿದೊಡ್ಡ ವಿದ್ಯುತ್ ಪೂರೈಕೆ ಮತ್ತು ಸರಬರಾಜು ಸಂಬಂಧಿತ ಸಮ್ಮೇಳನ ELECRAMA-2014 ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರ ಜ.8-12 2014ರವರೆಗೂ ನಡೆಯಲಿದೆ. ಇದು, ಭಾರತೀಯ ಉತ್ಪನ್ನಗಳು ಜಾಗತಿಕ ಸ್ಪರ್ಧೆಯನ್ನು ಎದುರಿಸಲು, ಸ್ಥಳೀಯ ಉತ್ಪಾದಕರು ತಮ್ಮ ಸಾಮರ್ಥ್ಯವನ್ನು ಬಿಂಬಿಸಲು ವೇದಿಕೆ ಕಲ್ಪಿಸಲಿದೆ. ಇದೇ ಮೊದಲ ಬಾರಿಗೆ ELECRAMA-2014 ಸಮ್ಮೇಳನ ಬೆಂಗಳೂರಿನಲ್ಲಿ ನಡೆಯಲಿದ್ದು, ಸೇವೆ ಸೌಲಭ್ಯ, ಉತ್ಪನ್ನಗಳಲ್ಲಿ ಉನ್ನತ ಗುಣಮಟ್ಟ ಹೊಂದಿರುವ ELECRAMA-2014 ಪ್ರದರ್ಶನ ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿ ಇರಲಿದೆ ಎಂದು ಕರ್ನಾಟಕ ಸರ್ಕಾರದ ಮುಖ್ಯಕಾರ್ಯದರ್ಶಿ ಎಸ್.ವಿ. ರಂಗನಾಥ್ ಅಭಿಪ್ರಾಯಪಟ್ಟರು.

ಟಿ.ಜಾನ್ ಸಂಸ್ಥೆಯಿಂದ ಕ್ಯಾಂಪಸ್ ಸಂದರ್ಶನ

ಬೆಂಗಳೂರಿನ ಟಿ.ಜಾನ್ ಸಮೂಹ ಸಂಸ್ಥೆ ವತಿಯಿಂದ ಅಂತಿಮ ವರ್ಷದ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವವರಿಗಾಗಿ ಭಾರತದಲ್ಲೇ ಮೊಟ್ಟ ಮೊದಲನೇ ಬಾರಿಗೆ ಕ್ಯಾಂಪಸ್ ಪ್ರದರ್ಶನವನ್ನು ಇತ್ತೀಚಿಗೆ ಏರ್ಪಡಿಸಿತ್ತು. 'ಪ್ರಾಜೆಕ್ಟ್ ಎಕ್ಸ್ಪೋ-2013' ಎಂಬ ಶೀರ್ಷಿಕೆಯಡಿ ಆಯೋಜಿಸಲಾಗಿದ್ದ ಈ ಪ್ರದರ್ಶನದಲ್ಲಿ ಬಿಎಂಎಸ್ ಕಾಲೇಜ್ ಆಫ್ ಎಂಜಿನಿಯರಿಂಗ್, ಸಿಎಂಆರ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ, ಪಿಇಎಸ್‌ಸಿಇ ಮಂಡ್ಯ, ಮುಂತಾದ 30ಕ್ಕೂ ಹೆಚ್ಚಿನ ಕಾಲೇಜುಗಳು ಭಾಗವಹಿಸಿದ್ದವು. ಪ್ರದರ್ಶನವು ಐಟಿ ಎಂಇ ಹಾಗೂ ಎಲೆಕ್ಟ್ರಿಕಲ್ 3 ವಿಭಾಗಗಳಲ್ಲಿ ಏರ್ಪಡಿಸಿ, ವಿದ್ಯಾರ್ಥಿಗಳ ಕೌಶಲ್ಯ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿತ್ತು. ಉತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಮೆ.ಗರಿಡ್‌ನ ಸಿಇಒ ಎಸ್.ಎಸ್.ಪ್ರಸಾದ್, ಟಿ. ಜಾನ್. ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ನಿರ್ದೇಶಕ, ಟಿ.ಜಾನ್ ಬಹುಮಾನ ವಿತರಿಸಿದರು.

ಆನ್‌ಲೈನ್ ದಿನಸಿ ಮಳಿಗೆ ಬಿಗ್ ಬಾಸ್ಕೆಟ್ ಡಾಟ್ ಕಾಮ್
ಭಾರತದ ಮೊಟ್ಟಮೊದಲ ಸಮಗ್ರ ಆನ್‌ಲೈನ್ ದಿನಸಿ ಮಳಿಗೆಯಾಗಿ ಬಿಗ್ ಬಾಸ್ಕೆಟ್ ಡಾಟ್ ಕಾಮ್ ಹೊರಹೊಮ್ಮಿದೆ. ಸಾವಿರಕ್ಕೂ ಹೆಚ್ಚಿನ ಬ್ರಾಂಡ್‌ಗಳು ಮತ್ತು ಹತ್ತು ಸಾವಿರಕ್ಕೂ ಹೆಚ್ಚಿನ ಉತ್ಪನ್ನಗಳನ್ನು ಹೊಂದಿದೆ. ದಿನಸಿ ವಸ್ತುಗಳು, ತಾಜಾ ಹಣ್ಣುಗಳು ಮತ್ತು ತರಕಾರಿಗಳು, ಬ್ರಾಂಡೆಡ್ ಆಹಾರ ಮತ್ತು ಆಹಾರೇತರ ಉತ್ಪನ್ನಗಳು, ಬ್ರೆಡ್ ಮತ್ತು ಬೇಕರಿ, ಡೈರಿ ಉತ್ಪನ್ನಗಳು, ಮಾಂಸ ಮುಂತಾದವುಗಳನ್ನು ಈ ಮಳಿಗೆ ಹೊಂದಿದೆ. ಪ್ರತಿ ತಿಂಗಳು ನಿಮಗೆ ಬೇಕಾಗುವ ಎಲ್ಲಾ ದಿನಸಿ ವಸ್ತುಗಳು ಇಲ್ಲಿ ಲಭ್ಯ. ನಗರದಲ್ಲಿ ಕೇಂದ್ರ ಕಚೇರಿ ಹೊಂದಿರುವ ಬಿಗ್ ಬಾಸ್ಕೆಟ್ ಡಾಟ್ ಕಾಮ್, ಬೆಂಗಳೂರು, ಮುಂಬಯಿ, ಹೈದ್ರಾಬಾದ್‌ಗಳಲ್ಲಿ ಕಾರ್ಯಾಚರಣೆ ಹೊಂದಿದೆ. ಗ್ರಾಹಕರು  ಹಚ್ಚಿನ ಮಾಹಿತಿಗೆ bigbasket.com  ಸಂದರ್ಶಿಸಬಹುದು.

17ರಿಂದ ತೈಲವರ್ಣ ಚಿತ್ರ ಪ್ರದರ್ಶನ
ಗ್ಯಾಲರಿ- ಜಿ ವತಿಯಿಂದ ಕಲಾವಿದ ವಿನೋದ್ ಬನೈಕ್‌ರವರಿಂದ ಜು.17ರಿಂದ ಒಂದು ವಾರದ ತೈಲವರ್ಣ ಚಿತ್ರ ಪ್ರದರ್ಶನವನ್ನು ಹಮ್ಮಿಕೊಂಡಿದೆ. ಈ  ಪ್ರದರ್ಶನ ಇನ್ಫಿನಿಟಿ-ಡಿವೈನಿಟಿ ಎಂಬ ಏಕವ್ಯಕ್ತಿ ಪ್ರದರ್ಶನವಾಗಿದ್ದು, ಬೆ.11ಕ್ಕೆ ಗ್ಯಾಲರಿ-ಜಿಯಲ್ಲಿ ಕಲಾವಿದ ವಿನೋದ್ ಬನೈಕ್‌ರವರೊಂದಿಗೆ ಸಂವಾದ ಕಾರ್ಯಕ್ರಮದೊಂದಿಗೆ ಆರಂಭವಾಗಲಿದೆ. 76ವರ್ಷ ವಯೋವಾನದ ಹಿರಿಯ, ಅನುಭವಿ, ಕಲಾವಿದೆ ವಿನೋದ್ ಬನೈಕ್ ಅವರು ಈ ಅದ್ಬುತ ನಿಸರ್ಗವನ್ನು ಆಧರಿಸಿ ತಮ್ಮ ಕಲೆಯನ್ನು ತೈಲಚಿತ್ರಗಳಲ್ಲಿ ಪ್ರದರ್ಶಿಸಲಿದ್ದಾರೆ.

ಮಾರುಕಟ್ಟೆಯಲ್ಲಿ ಫೋರ್ಡ್‌ನ ಇಕೊಸ್ಪೋರ್ಟ್ ಕಾರು

ಫೋರ್ಡ್ ಇಂಡಿಯಾದಿಂದ ನಗರದಲ್ಲಿ ಇಕೊಸ್ಪೋರ್ಟ್ ವಿತರಣೆಯನ್ನು ನಿರ್ಮಲ್ ಮ್ಯಾಥ್ಯೂ ಮತ್ತು ಗುಂಜನ್ ಅಭಿಷೇಕ್ ಮಾಡಿದರು. ಕಂಪನಿ ಅಧಿಕೃತವಾಗಿ ಇಕೊಸ್ಪೋರ್ಟ್‌ನ್ನು ಕಳೆದ ವಾರ ಬಿಡುಗಡೆ ಮಾಡಿದ್ದು, ಗ್ರಾಹಕರಿಗೆ ತನ್ನ ಆಕರ್ಷಕ ನೋಟದ ಅತ್ಯುತ್ತಮ ಮೌಲ್ಯದ ಉತ್ಪನ್ನ ನೀಡುವ ಭರವಸೆಯನ್ನು ಈಡೇರಿಸಿದೆ. ಫೋರ್ಡ್ ಇಕೊಸ್ಪೋರ್ಟ್ ಪ್ರಾರಂಭಿಕ ಹಂತದ ಬೆಲೆ 5.69 ಲಕ್ಷ. ಪೋರ್ಡ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಜೋಗಿಂದರ್ ಸಿಂಗ್, 'ಇಂದು ನಮಗೆ ಮಹತ್ತರ ದಿನವಾಗಿದ್ದು ಅತ್ಯಂತ ನಿರೀಕ್ಷೆಯ ಅರ್ಬನ ಎಸ್‌ಯುವಿ ಫೋರ್ಡ್ ಇಕೋಸ್ಪೋರ್ಟ್ ಪೂರೈಕೆಯಾಗುತ್ತಿದೆ. ಇದರಿಂದ ಭಾರತದಲ್ಲಿ ಉತ್ತಮ ಕಾರು ಒದಗಿಸುವ ಫೋರ್ಡ್ ಸಂಸ್ಥೆಯ ಬದ್ಧತೆ ಪೂರೈಸಿದ್ದೇವೆ' ಎಂದರು.

ಇಥೋಸ್ ಸಮಿತ್‌ನಿಂದ ಕೈಗಡಿಯಾರ ಬಿಡುಗಡೆ  
ಇಥೋಸ್ ಸಮಿತ್‌ನಿಂದ ಪುರುಷರಿಗಾಗಿ ಲೂಯಿ ಎರಾರ್ಡ್ ಹಾಗೂ ಒಮೆಗಾ ಮಾನ್ಸೂನ್ ನೂತನ ಶ್ರೇಣಿ ಕೈಗಡಿಯಾರಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಒಮೆಗಾ, ಲೂಯಿ ಎರಾರ್ಡ್, ಟ್ಯಾಗ್ ಹ್ಯೂಯರ್, ರೊಲೆಕ್ಸ್, ಕಾರ್ಟಿಯರ್, ಬ್ರೆಟ್‌ಲಿಂಗ್, ರಾಡೊ, ಲಾಂಗಿನ್ಸ್ ಇತ್ಯಾದಿ 50 ವಿವಿಧ ಐಷರಾಮಿ ಶ್ರೇಣಿ ಕೈಗಡಿಯಾರಗಳ ಮಾರಾಟದ ಅಧಿಕೃತ ಮಳಿಗೆಗಳನ್ನು ಇಥೋಸ್ ಹೊಂದಿವೆ.  ಹೆಚ್ಚಿನ ಮಾಹಿತಿಗೆ http://www.ethoswatches.com/locatestore#Bangalore.

ಸ್ನಾಪ್ ಫಿಟ್‌ನೆಸ್‌ನಿಂದ ಎಫ್‌ಒಡಿ ಕಾರ್ಯಕ್ರಮ
ಸ್ನಾಪ್ ಫಿಟ್‌ನೆಸ್, ಫಿಟ್‌ನೆಸ್ ಆನ್ ಡಿಮ್ಯಾಂಡ್ (ಎಫ್‌ಒಡಿ) ಕಾರ್ಯಕ್ರಮವನ್ನು ಪರಿಚಯಿಸುತ್ತಿದೆ. ಇದು ಭಾರತೀಯ ಉದ್ಯಮದಲ್ಲೇ ಮೊದಲ ಕಾರ್ಯಕ್ರಮವಾಗಿದ್ದು, ಕಾರ್ಯಕ್ರಮ ಮೊದಲ ಸಲ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಫಿಟ್ನೆಸ್ ಆಸಕ್ತರೊಂದಿಗೆ ಆರಂಭಗೊಂಡಿದೆ. ಅಂತಾರಾಷ್ಟ್ರೀಯ ತರಬೇತುದಾರರು ಆನ್‌ಲೈನ್‌ನಲ್ಲಿ ತರಬೇತಿ ನೀಡುತ್ತಿದ್ದು, ಪ್ರತಿ 15 ದಿನಕ್ಕೆ ಸೆಷನ್ ಬದಲಾಗುತ್ತದೆ. ಜಿಮ್, ಕಾರ್ಪೊರೇಟ್, ಅಪಾರ್ಟ್‌ಮೆಂಟ್ಸ್, ಶಾಲೆ, ಕಾಲೇಜು, ಹೋಟೆಲ್‌ಗಳಲ್ಲಿನ ತಂಡದೊಂದಿಗೆ ಸಂಸ್ಥೆ ಸಹಭಾಗಿತ್ವ ಮಾಡಿಕೊಂಡು ತರಬೇತಿ ನಡೆಸುತ್ತಿದೆ. ಪ್ರತಿಕ್ರಿಯಿಸಿದ ಸ್ನಾಪ್ ಫಿಟ್ನೆಸ್ ಇಂಡಿಯಾ ಸಂಸ್ಥಾಪಕ ಮತ್ತು ಸಿಇಒ ಡಾ. ವಿಕ್ರಂ, ಭಾರತದಲ್ಲಿ ಈ ಮಾದರಿಯಲ್ಲಿ ಪರಿಚಯಿಸುತ್ತಿರುವ ಮೊದಲ ಕಾರ್ಯಕ್ರಮ ಇದಾಗಿದ್ದು, ಗ್ರಾಹಕರಿಗೆ ಅವರ ಸ್ಥಳದಲ್ಲೇ ಅತ್ಯುತ್ತಮ ತರಬೇತಿ ಒದಗಿಸಲಾಗುತ್ತದೆ. ಅತ್ಯುತ್ತಮ ತರಬೇತುದಾರಿಂದ ತರಬೇತಿ ನಡೆಯಲಿದೆ ಎಂದರು.

ರಾನ್‌ಬ್ಯಾಕ್ಸಿ ತಂಡದ ಮರುಜೋಡಣೆ
ಫೋರತದ ಫಾರ್ಮಸುಟಿಕಲ್ ಕಂಪನಿ ಆಗಿರುವ ರಾನ್‌ಬ್ಯಾಕ್ಸಿ ಲ್ಯಾಬೋರೇಟೋರಿಸ್ ಲಿ, ತನ್ನ ಪ್ರಕ್ರಿಯೆಗಳು ಮತ್ತು ಗುಣಮಟ್ಟ ಮಾನದಂಡಗಳನ್ನು ಇನ್ನಷ್ಟು ಬಲಪಡಿಸಲು ಇತ್ತೀಚಿನ ವರ್ಷಗಳಲ್ಲಿ ತೆಗೆದುಕೊಂಡಿರುವ ಕೆಲವು ನಿರ್ದಿಷ್ಟ ಕ್ರಮಗಳನ್ನು ಪರಿಚಯಿಸಿದೆ. ಅನುಸರಣೆ ವಿಧಾನ ಮತ್ತು ಪಾಲಿಸಿಗಳನ್ನು ವರ್ಧಿಸುವುದು, ವ್ಯಾಪಾರ ಮತ್ತು ತಯಾರಿಕೆ ಪ್ರಕ್ರಿಯೆ ಉನ್ನತೀಕರಣ, ಸಂಸ್ಥೆಯ ಎಲ್ಲ ಮಟ್ಟಗಳಲ್ಲಿ ಹೊಣೆಗಾರಿಕೆ ಮತ್ತು ಪ್ರಾವೀಣ್ಯ ಸಂಸ್ಕೃತಿ ಬೆಳೆಸುವುದು, ಬೋರ್ಡ್‌ಆಫ್ ಡೈರೆಕ್ಟರ್‌ಗಳು ಮತ್ತು ಎಕ್ಸಿಕ್ಯುಟಿವ್ ಮ್ಯಾನೇಜ್‌ಮೆಂಟ್ ತಂಡದ ಸಂಪೂರ್ಣ ಮರು ಸಂಯೋಜನೆಯ ಉದ್ದೇಶ ಹೊಂದಿದೆ ಎಂದು ಸಂಸ್ಥೆಯ ಸಿಇಒ ಮತ್ತು ಎಂ.ಡಿ. ಅರುಣ್ ಸಾವ್‌ನೀ ಹೇಳಿದ್ದಾರೆ.

3ನೇ ಸ್ಥಾನದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್
ಎಚ್‌ಡಿಎಫ್‌ಸಿ ಏಷ್ಯಾದ, ಒಂದು ಜಾಗತಿಕ ನಿಯತಕಾಲಿಕೆಯಾದ institutional investor (http://www.institutionalinvestor.com/Institutional-Investor-Magazine.html) ನಡೆಸಿದ ಸಮೀಕ್ಷೆಯಲ್ಲಿ ಏಷ್ಯಾದ ಅತ್ಯುತ್ತಮ ರಿಲೇಶನ್ಸ್ ಕಂಪನಿಗಳ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಈ ಸಮೀಕ್ಷೆಯು ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ಭಾರತದ ಅತ್ಯುತ್ತಮ ಕಂಪನಿಗಳ ಪಟ್ಟಿಯಲ್ಲಿ 3ನೇ ಸ್ಥಾನವನ್ನು ಪಡೆದಿದೆ. ಏಷ್ಯಾದ ಅತ್ಯಂತ ಗೌರವಾನ್ವಿತ ಕಂಪನಿಗಳ ಪಟ್ಟಿಯಲ್ಲಿ ಭಾರತದ ಇನ್ಫೋಸಿಸ್ 4ನೇ ಸ್ಥಾನ ಪಡೆದಿದ್ದು, 9ನೇ ಸ್ಥಾನವನ್ನು ಎಚ್‌ಡಿಎಫ್‌ಸಿ ಬ್ಯಾಂಕ್ ಪಡೆದುಕೊಂಡಿದೆ. ಎಚ್‌ಡಿಎಫ್‌ಸಿ ಬ್ಯಾಂಕಿನ ಸಿಇಒ ಆದಿತ್ಯ ಪುರಿಯವರನ್ನು ಏಷ್ಯಾದ ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಅತ್ಯುತ್ತಮ ಸಿಇಒ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ 1500 ವ್ಯಕ್ತಿಗಳ ಪೈಕಿ ಆರಿಸಲಾಗಿದೆ.

ಡಾ.ಮುಖೇಶ್ ಬಾತ್ರಗೆ 2013ರ ಜಾಗತಿಕ ಭಾರತೀಯ ಪ್ರಶಸ್ತಿ

ಇಇಂಡಿಯನ್ ಅಫೇರ್ಸ್ ವಾರ್ಷಿಕ ನಾಯಕತ್ವ ಸಮ್ಮೇಳನದಲ್ಲಿ ಡಾ.ಮುಖೇಶ್ ಬಾತ್ರ ಅವರಿಗೆ 2013ರ ಜಾಗತಿಕ ಭಾರತೀಯ ಪ್ರಶಸ್ತಿ ನೀಡಲಾಯಿತು. ನೆಟ್‌ವರ್ಕ್ 7 ಮೀಡಿಯಾ ಸಮೂಹದ ಅಧ್ಯಕ್ಷ ಸತ್ಯ ಬ್ರಹ್ಮ ಸೇರಿದಂತೆ ಶ್ರೇಷ್ಠ ವ್ಯಕ್ತಿಗಳನ್ನು ಒಳಗೊಂಡ ಒಂದು ತೀರ್ಪುಗಾರರ ತಂಡವು ಡಾ. ಬಾತ್ರ ಅವರನ್ನು 'ಗ್ಲೋಬಲ್ ಮ್ಯಾನ್ ಆಪ್ ದ ಇಯರ್ 2013' ಎಂದು ತೀರ್ಮಾನಿಸಿತು. ಇದು ಹೋಮಿಯೋಪತಿಯ ಮೂಲಕ ಆರೋಗ್ಯ ರಕ್ಷಣಾ ಕ್ಷೇತ್ರಕ್ಕೆ ಅವರು ನೀಡಿರುವ ಅನುಪಮ ಕೊಡುಗೆಗಾಗಿ ರತನ್ ಟಾಟಾ, ಮುಖೇಶ್ ಅಂಬಾನಿ ಮತ್ತು ಪ್ರಿಯಾಂಕಾ ಚೋಪ್ರಾ ಕಾನ್‌ಕ್ಲೇವ್‌ನಲ್ಲಿ ತಮ್ಮ ತಮ್ಮ ಕ್ಷೇತ್ರಗಳಿಗೆ ನೀಡಿರುವ ಅಸಾಧಾರಣ ಕೊಡುಗೆಗೆ ಪ್ರತಿಷ್ಠಿತ ಪ್ರಶಸ್ತಿಗಳನ್ನು ಗಳಿಸಿದ ಇತರರಾಗಿದ್ದಾರೆ. ಡಾ.ಬಾತ್ರ ಮಾತನಾಡಿ, ವಿಶ್ವದ 2ನೇ ಅತಿದೊಡ್ಡ ವೈದ್ಯಕೀಯ ವ್ಯವಸ್ಥೆಯಾದ ಹೋಮಿಯೋಪತಿಯನ್ನು ಉಚಿತವಾದ ರೀತಿಯಲ್ಲಿ ಗುರುತಿಸಿರುವುದಕ್ಕೆ ವ್ಯವಸ್ಥಾಪಕರಿಗೆ ಧನ್ಯವಾದಗಳನ್ನು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.