ವಾಣಿಜ್ಯ

'ಕೆಫೆ ಬೆಂಗಳೂರು' ಆರಂಭ

'ಕೆಫೆ ಬೆಂಗಳೂರು' ಆರಂಭ
Published On :

ಜಯನಗರದಲ್ಲಿ ನೂತನವಾಗಿ ಪ್ರಾರಂಭಿಸಿರುವ 'ಕೆಫೆ ಬೆಂಗಳೂರು' ಹೊಟೇಲ್‌ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಹೊಟೇಲ್ ಉದ್ಯಮ ಗುಣಮಟ್ಟ ಹಾಗೂ ಗ್ರಾಹಕರ ಸೌಕರ್ಯಗಳನ್ನು ಹೆಚ್ಚಿಸುವತ್ತ ಗಮನವಹಿಸಬೇಕು. ನಗರದ ಆರ್ಥಿಕ ಅಭಿವೃದ್ಧಿಗೆ ಬಹಳಷ್ಟು ಕೊಡುಗೆ ನೀಡುತ್ತಿದೆ. ಗುಣಮಟ್ಟ ಹಾಗೂ ಸ್ವಚ್ಛತೆಯಂತಹ ಸೌಕರ್ಯಗಳನ್ನು ಹೆಚ್ಚಿಸಿದಲ್ಲಿ ಇನ್ನು ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಬಹುದಾಗಿದೆ ಎಂದರು. ಇದೇ ಸಂದರ್ಭದಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎನ್. ವಿಜಯಕುಮಾರ್ ಮಾತನಾಡಿ, ಕೆಫೆ ಬೆಂಗಳೂರು ನಂತಹ ಸುಸಜ್ಜಿತ ಹೊಟೇಲ್‌ಗಳು ನಗರದ ಸೌಂದರ್ಯವನ್ನು ಹೆಚ್ಚಿಸುತ್ತವೆ. ಅಲ್ಲದೆ, ಆರೋಗ್ಯದ ಬಗ್ಗೆ ಕಾಳಜಿ ಇರುವ ಜನರಿಗೆ ಅನುಕೂಲಕರವಾಗಿರುವ ತಿಂಡಿಗಳನ್ನು ತಯಾರಿಸುವ ಮೂಲಕ ಗ್ರಾಹಕರಿಗೂ ಅತ್ಯುತ್ತಮ ಸೇವೆ ನೀಡುತ್ತಿವೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

'ನೆಟ್ ಕನೆಕ್ಟ್ ಪ್ಲಸ್ ಹ್ಯಾಪಿ  ಅವರ್ಸ್‌'
ರಿಲಾಯನ್ಸ್ ಕಮ್ಯುನಿಕೇಷನ್ಸ್ ದಕ್ಷಿಣ ಭಾರತದ ಎಲ್ಲಾ ಪ್ರೀಪೇಯ್ಡ್ ಗ್ರಾಹಕರಿಗಾಗಿ 'ನೆಟ್ ಕನೆಕ್ಟ್ ಪ್ಲಸ್ ಹ್ಯಾಪಿ ಅವರ್ಸ್‌' ಇದರಿಂದಾಗಿ ಪ್ರೀಪ್ರೇಯ್ಡ್ ಗ್ರಾಹಕರು ರಾತ್ರಿ 1 ಗಂಟೆಯಿಂದ ಬೆಳಗ್ಗೆ 8 ಗಂಟೆಯವರೆಗೆ ಅನಿಯಮಿತ ಇಂಟರ್‌ನೆಟ್ ಬ್ರೌಸಿಂಗ್ ಸೌಲಭ್ಯವನ್ನು ಪಡೆಯಬಹುದಾಗಿದೆ. ಈ ವಿಶೇಷ ಕೊಡಗೆ 650 ಆರಂಭಿಕ ರೀಚಾರ್ಜ್ ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತದ ರೀಚಾರ್ಜ್‌ಗಳಲ್ಲಿ ಲಭ್ಯವಿದೆ.  ಈ ವಿಶೇಷ ಕೊಡುಗೆ ಕುರಿತು ಮಾತನಾಡಿದ, ರಿಲಾಯನ್ಸ್ ಕಮ್ಯುನಿಕೇಷನ್ಸ್ ದಕ್ಷಿಣ ವಿಭಾಗದ ಪ್ರಾದೇಶಿಕ ಮುಖ್ಯಸ್ಥ ಐವಿಜೆ ಪ್ರದೀಪ್ ಅವರು 'ದಕ್ಷಿಣ ಭಾರತದ ಎಲ್ಲ ರಾಜ್ಯಗಳ ಗ್ರಾಹಕರಿಗೆ ಈ ಯೋಜನೆಯನ್ನು ಪರಿಚಯಿಸಿದ್ದೇವೆ. ಗ್ರಾಹಕರು ಅತ್ಯುತ್ತಮ ನೆಟ್‌ವರ್ಕ್ ಮೂಲಕ ಇಂಟರ್‌ನೆಟ್ ಅನ್ನು ಬ್ರೌಸ್ ಮಾಡಲು ಬಯಸುವುದರಿಂದ ಈ ಕೊಡುಗೆ ನೀಡುತ್ತಿದ್ದೇವೆ. 2014 ಜ.7ರಿಂದ ಲಭ್ಯವಿದ್ದು, ಒಂದು ಬಾರಿ ರೀಚಾರ್ಜ್ ಮಾಡಿಸಿದರೆ, 30 ದಿನಗಳವರೆಗೂ ಲಭ್ಯವಿರುತ್ತದೆ ಎಂದರು.

ಪ್ರೆಸ್ಟೀಜ್ ಐರನ್ ಬೋರ್ಡ್
ಗಿಮಿ ಇಂಡಿಯಾ ಇದೀಗ ನೂತನ ಪ್ರೆಸ್ಟೀಜ್ ಐರನ್ ಬೋರ್ಡ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ವಿಶೇಷ ಶೈಲಿಯನ್ನು ಮತ್ತು ಅನುಕೂಲಗಳನ್ನು ಹೊಂದಿರುವ ಈ ಐರನ್ ಬೋರ್ಡ್ ನಿಮ್ಮ ಉಡುಪುಗಳನ್ನು ಇಸ್ತ್ರಿ ಮಾಡುವಲ್ಲಿ ಅತ್ಯಂತ ಆರಾಮದಾಯಕ ಅನುಭವ ನೀಡಲಿದೆ. ಹಗುರವಾದ ಟೂಬ್ಯುಲಾರ್ ಕಾಲುಗಳನ್ನು ಹೊಂದಿರುವ ಈ ಪ್ರೆಸ್ಟಿಜ್ ಐರನ್ ಬೋರ್ಡ್ ಪ್ಯಾಡೆಡ್ ಫೀಟ್‌ಗಳನ್ನು ಹೊಂದಿದ್ದು ಅವು ನೆಲದ ಮೇಲೆ ಕರೆ ಉಂಟು ಮಾಡದಂತೆ ಮತ್ತು ಮಡಿಚಿಕೊಳ್ಳದಂತೆ ತಯಾರಿಸಲಾಗಿದೆ. ಐರನ್ ಬಾಕ್ಸ್‌ನ ವೈರ್ ನಿಮ್ಮ ಉಡುಪುಗಳಿಗೆ ಸ್ಪರ್ಶಿಸದಂತೆ ದೂರವಿಡಲು ಕಾರ್ಡ್ ಮೈಂಡರ್ ಹೊಂದಿರುತ್ತದೆ. ಚೈಲ್ಡ್ ಆ್ಯಂಡ್ ಟ್ರಾನ್ಯ್‌ಪೋರ್ಟ್ ಲಾಕ್‌ನಿಂದ ಐರನ್ ಬೋರ್ಡ್ ಆಕಸ್ಮಿಕವಾಗಿ ಕುಸಿಯುವುದನ್ನು ತಪ್ಪಿಸುತ್ತದೆ. ಇದರ ಬೆಲೆ 2940.

ಮರದ ಟೈಲ್ಸ್ ಬಿಡುಗಡೆ
ಪಿಗ್ರೋ ಇಂಡಿಯಾ ಕಂಪನಿ ನೈಸರ್ಗಿಕ ವಿನ್ಯಾಸ ಹೊಂದಿರುವ ಮರದ ಟೈಲ್ಸ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರಿಂದ ಕೊಠಡಿಗಳ ಪ್ಲೋರಿಂಗ್ ಮತ್ತಷ್ಟು ಅಕರ್ಷಕವಾಗಿಸಿಕೊಳ್ಳಬಹುದಾಗಿದೆ. ಈ ಕುರಿತು ಮಾತನಾಡಿದ ಪಿಗ್ರೋ ಇಂಡಿಯಾ ಕಂಪನಿ ಕಾರ್ಯಕಾರಿ ನಿರ್ವಾಹಕ ಅಧಿಕಾರಿ ನರೇಶ್ ಮಹೇಶ್ವರಿ, ಈ ನೂತನ ನೈಸರ್ಗಿಕ ವಿನ್ಯಾಸ ಹೊಂದಿರುವ ಮರದ ಟೈಲ್ಸ್‌ಗಳು ಅತ್ಯಾಕರ್ಷಕವಾಗಿ ಕಾಣಲಿವೆ. ನೋಡಲು ನಿಜವಾದ ಮರದ ಹಲಗೆಯನ್ನೇ ಜೋಡಿಸಿರುವಂತೆ ಕಾಣಲಿದೆ. ಧೀರ್ಘಕಾಲಿಕ ಬಾಳಿಕೆ ಹೊಂದಿದ್ದು, ಗ್ರಾಹಕರ ಮನಗೆಲ್ಲಲಿದೆ ಎಂದರು. ನೂತನ ತಾಂತ್ರಿಕತೆ ಅಳವಡಿಸಿಕೊಂಡು ಈ ಮರದ ಟೈಲ್ಸ್‌ಗಳನ್ನು ತಯಾರಿಸಿದ್ದು, (1222-400 ಎಂಎಂ) ಒಂದು ಅಡಿಗೆ 235 ಮೌಲ್ಯ ಹೊಂದಿದೆ.

ಪೂರ್ಣಪುರದಲ್ಲಿ ಐ-ಮಾರ್ಟ್ ಆರಂಭ
ಬೆಂಗಳೂರು: ನಗರದ ಪೂರ್ಣಪುರದಲ್ಲಿ ಐ-ಮಾರ್ಟ್ ತನ್ನ ನೂತನ ಮಳಿಗೆ ಪ್ರಾರಂಭಿಸಿದೆ. ಮಳಿಗೆಯನ್ನು ಲಕ್ಷ್ಮೀಪ್ರಿಯಾ ಮತ್ತು ಅರುಣ್ ಕುಮಾರ್ ಉದ್ಘಾಟಿಸಿದರು. ಐದು ಸಾವಿರ ಚದರ ಅಡಿ ವಿಸ್ತೀರ್ಣ ಹೊಂದಿರುವ ಈ ಮಳಿಗೆಯಲ್ಲಿ ರಿಯಾಯಿತಿ ಹಾಗೂ ಸಗಟು ದರದಲ್ಲಿ ದವಸ-ಧಾನ್ಯ ದೊರೆಯಲಿವೆ. ಈ ಹಿಂದೆ ಜಗದೀಶ್ ಖಾರ ಕಾಂಡಿಮೆಂಟ್ಸ್ ಎಂಬ ತಿನಿಸು ಅಂಗಡಿ ಮೂಲಕ ಎಲ್ಲರ ಮನೆ ಮಾತಾಗಿದ್ದ ಮಹೇಶ್ವರಿ ಮತ್ತು ಕಾರ್ತಿಕೇಯನ್ ಕುಟುಂಬವೊಂದು ಇದೀಗ ಅದೇ ನಂಬಿಕೆ ಹಾಗೂ ಅನುಭವ ಅಧಾರದ ಮೇಲೆ ಐ-ಮಾರ್ಟ್  ಪ್ರಾರಂಭಿಸಿದೆ.

'ಬ್ರೇಕ್ ಫಾಸ್ಟ್ ಕಿಟ್‌' ಮಾರುಕಟ್ಟೆಗೆ
ಆಹಾರ ಉತ್ಪಾದನಾ ಸಂಸ್ಥೆಯಾದ ಗಿಟ್ಸ್ ಫೋರ್ ಇನ್ ಒನ್ ಇಂಡಿಯನ್ 'ಬ್ರೇಕ್ ಫಾಸ್ಟ್ ಕಿಟ್‌' ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ರವೆ ಇಡ್ಲಿ, ರವೆ ದೋಸೆ, ಉಪ್ಪಿಟ್ಟು ಮತ್ತು ಸಾಂಬಾರ್ ಈ ನಾಲ್ಕು ಪದಾರ್ಥಗಳನ್ನು ಒಂದೇ ಪಾಕೆಟ್‌ನಲ್ಲಿ ಹೊರತಂದಿದೆ. ಆರೋಗ್ಯದ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಈ ಪದಾರ್ಥ ರಚಿಸಲಾಗಿದೆ. ಈ ಪದಾರ್ಥದ ಬೆಲೆ 99. ಎಲ್ಲಾ ರಿಟೇಲ್ ಮಳಿಗೆಗಳಲ್ಲಿ ಲಭ್ಯವಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.