ಪ್ರಧಾನಿ ಮೋದಿಯವರ ಬಜೆಟ್ ಪೂರ್ವ ಸಮಾಲೋಚನೆ ಬಂಡವಾಳಶಾಹಿ ಸ್ನೇಹಿತರಿಗೆ ಸೀಮಿತವಾಗಿತ್ತು: ರಾಹುಲ್ ಗಾಂಧಿ
ಪ್ರಧಾನಿ ನರೇಂದ್ರ ಮೋದಿಯವರ ಬಜೆಟ್ ಪೂರ್ವಭಾವಿ ಸಮಾಲೋಚನೆ ಅವರ ಆಪ್ತವಲಯದ ಉದ್ಯಮಿ ಸ್ನೇಹಿತರು ಮತ್ತು ಅತಿ ಶ್ರೀಮಂತರ ಜೊತೆ ನಡೆಸಿದ್ದಾರೆಯೇ ಹೊರತು ರೈತರು, ವಿದ್ಯಾರ್ಥಿಗಳು,ಯುವಕರು, ಮಹಿಳೆಯರು ಮತ್ತು ಮಧ್ಯಮ ವರ್ಗದವರ ಜೊತೆ ಅಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದು, ಅವರ ಬಜೆಟ್ ಪೂರ್ವಭಾವಿ ಸಮಾಲೋಚನೆಯನ್ನು ಅವರ ಆಪ್ತವಲಯದ ಉದ್ಯಮಿ ಸ್ನೇಹಿತರು ಮತ್ತು ಅತಿ ಶ್ರೀಮಂತರ ಜೊತೆ ನಡೆಸಿದ್ದಾರೆಯೇ ಹೊರತು ರೈತರು, ವಿದ್ಯಾರ್ಥಿಗಳು,ಯುವಕರು, ಮಹಿಳೆಯರು ಮತ್ತು ಮಧ್ಯಮ ವರ್ಗದವರ ಜೊತೆ ಅಲ್ಲ ಎಂದು ಟೀಕಿಸಿದ್ದಾರೆ.
ನಿನ್ನೆ ದೆಹಲಿಯ ನೀತಿ ಆಯೋಗ ಕಚೇರಿಯಲ್ಲಿ ಪ್ರಧಾನಿ ಮೋದಿಯವರು ಖಾಸಗಿ ಷೇರುದಾರರು, ಆರ್ಥಿಕ ತಜ್ಞರು, ಉದ್ಯಮದ ಬಂಡವಾಳ ಹೂಡಿಕೆದಾರರು, ಉದ್ಯಮಿಗಳು, ಕೃಷಿ ತಜ್ಞರ ಜೊತೆ ಸಭೆ ಸೇರಿ ಚರ್ಚಿಸಿ 2024ರಲ್ಲಿ ಭಾರತದ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್ ಗೆ ಹೆಚ್ಚಿಸಲು ಮಾಡಬೇಕಾದ ಸಾಧನೆ ಕುರಿತು ಅಭಿಪ್ರಾಯ ಕೇಳಿದ್ದರು.
ಅದಕ್ಕೆ ಇಂದು ರಾಹುಲ್ ಗಾಂಧಿ ಸೂಟ್ ಬೂಟ್ ಸರ್ಕಾರ್ ಎಂದು ಹ್ಯಾಶ್ ಟಾಗ್ ಕೊಟ್ಟು ಮೋದಿಯವರಿಗೆ ದೇಶದ ಮಧ್ಯಮ, ಬಡ ವರ್ಗದ ಜನರು, ರೈತರು, ಮಕ್ಕಳು, ಮಹಿಳೆಯರ ಸಮಸ್ಯೆಗಳು, ಅಭಿಪ್ರಾಯಗಳನ್ನು ಆಲಿಸಲು ಆಸಕ್ತಿಯಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


