ಕೇಂದ್ರ ಬಜೆಟ್

ತೆರಿಗೆದಾರರಿಗೆ ಬಂಪರ್ ರಿಲೀಫ್: ಆದಾಯ ತೆರಿಗೆಯಲ್ಲಿ ಭಾರೀ ಕಡಿತ

ತೆರಿಗೆ ಸುಧಾರಣೆ ಮಂತ್ರ ಪಠಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್‌ ಆದಾಯ ತೆರಿಗೆ ಕಡಿತ ಘೋಷಿಸುವುದರ ಮೂಲಕ ಮಧ್ಯಮ ವರ್ಗದವರಿಗೆ ಬಂಪರ್ ಆಫರ್ ನೀಡಿದ್ದಾರೆ. ತೆರಿಗೆ ಪಾವತಿ ವಿಧಾನ ಸರಳಗೊಳಿಸಿದ್ದಾರೆ.

ತೆರಿಗೆದಾರರಿಗೆ ಬಂಪರ್ ರಿಲೀಫ್: ಆದಾಯ ತೆರಿಗೆಯಲ್ಲಿ ಭಾರೀ ಕಡಿತ
ನಿರ್ಮಲಾ ಸೀತರಾಮನ್
Published On :

ದೆಹಲಿ: ತೆರಿಗೆ ಸುಧಾರಣೆ ಮಂತ್ರ ಪಠಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್‌ ಆದಾಯ ತೆರಿಗೆ ಕಡಿತ ಘೋಷಿಸುವುದರ ಮೂಲಕ ಮಧ್ಯಮ ವರ್ಗದವರಿಗೆ ಬಂಪರ್ ಆಫರ್ ನೀಡಿದ್ದಾರೆ. ತೆರಿಗೆ ಪಾವತಿ ವಿಧಾನ ಸರಳಗೊಳಿಸಿದ್ದಾರೆ.

2.5 ಲಕ್ಷದ ವರೆಗೆ ಆದಾಯ ತೆರಿಗೆಯಿಲ್ಲ  ಆದರೆ 2.5 ರಿಂದ 5 ಲಕ್ಷದ ವರೆಗೆ ಶೇಕಡ   5 ರಷ್ಟು  ತೆರಿಗೆ ಕೊಡಬೇಕಾಗುತ್ತದೆ. 5 ರಿಂದ 7.5 ಲಕ್ಷದವರೆಗೆ ಶೇ. 10ರಷ್ಟು ತೆರಿಗೆ, 7.5ರಿಂದ 10 ಲಕ್ಷದವರೆಗೆ ಶೇ.15ರಷ್ಟು ತೆರಿಗೆ,  10 ರಿಂದ 12.5ರವರೆಗೆ ಶೇ.20ರಷ್ಟು ತೆರಿಗೆ , 12.5ರಿಂದ 15 ಲಕ್ಷದವರೆಗೆ ಶೇ. 25ರಷ್ಟು ತೆರಿಗೆ, 15 ಲಕ್ಷಕ್ಕಿಂತ ಹೆಚ್ಚಿನ ಆದಾಯಕ್ಕೆ ಶೇ. 30ರಷ್ಟು ತೆರಿಗೆ ವಿಧಿಸಿದ್ದಾರೆ.

Story image

ತೆರಿಗೆದಾರರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಲು ಕ್ರಮ ಕೈಗೊಳ್ಳಲು ನಿರ್ದರಿಸಿದ್ದು  ರಾಷ್ಟ್ರೀಯ ನೇಮಕಾತಿ ಏಜೆನ್ಸಿ ಸ್ಥಾಪನೆ ಮಾಡಿರುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಉತ್ಪಾದನಾ ವಲಯದಲ್ಲಿ ಕಾರ್ಪೋರೇಟ್ ತೆರಿಗೆ ಶೇ.15ರಷ್ಟು ಇಳಿಕೆ ಮಾಡಿದೆ. ಇದರಿಂದ ಹೊಸದಾಗಿ ಹೂಡಿಗೆ ಮಾಡುವ ಕಂಪನಿಗಳಿಗೆ ರಿಲೀಫ್ ಸಿಕ್ಕಂತಾಗಿದೆ.

ಹೊಸ ಆದಾಯ ತೆರಿಗೆ ನೀತಿ ಜಾರಿಗೆ ತರಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ವೈಯಕ್ತಿಕ ತೆರಿಗೆ ಆದಾಯದಿಂದ 40 ಸಾವಿರ ಕೋಟಿ ರೂಪಾಯಿ ನಿರೀಕ್ಷೆ ಮಾಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಈ ಸಂದರ್ಭದಲ್ಲಿ ಹೇಳಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.