ಸೂಟ್ ಕೇಸ್ ಬದಲಿಗೆ ಕೆಂಪು ಬಣ್ಣದ ಬಟ್ಟೆಯಲ್ಲಿ ಸುತ್ತಿದ ಬಜೆಟ್ ಪ್ರತಿ: ಏನಿದರ ವಿಶೇಷ?
ಈ ಬಾರಿಯ ಕೇಂದ್ರ ವಿತ್ತೀಯ ಬಜೆಟ್ ನಲ್ಲಿ ಒಂದು ವಿಶೇಷತೆಯಿದೆ. ಸಾಮಾನ್ಯವಾಗಿ ವಿತ್ತೀಯ ಬಜೆಟ್ ಮಂಡಿಸುವಾಗ ಕೇಂದ್ರ ಹಣಕಾಸು...
Published On :
ನವದೆಹಲಿ: ಈ ಬಾರಿಯ ಕೇಂದ್ರ ವಿತ್ತೀಯ ಬಜೆಟ್ ನಲ್ಲಿ ಕೆಲವು ವಿಶೇಷತೆಯಿದೆ.
ಸಾಮಾನ್ಯವಾಗಿ ವಿತ್ತೀಯ ಬಜೆಟ್ ಮಂಡಿಸುವಾಗ ಕೇಂದ್ರ ಹಣಕಾಸು ಸಚಿವರು ಸೂಟ್ ಕೇಸ್ ನಲ್ಲಿ ಬಜೆಟ್ ಪ್ರತಿಯನ್ನು ಸಂಸತ್ತಿಗೆ ಹೊತ್ತು ತರುತ್ತಾರೆ. ಆದರೆ ಈ ಬಾರಿ ವಿತ್ತೀಯ ಸಚಿವೆ ನಿರ್ಮಲಾ ಸೀತಾರಾಮನ್ ಕೆಂಪು ಬಟ್ಟೆಯಲ್ಲಿ ಬಜೆಟ್ ಪ್ರತಿಯನ್ನು ಸುತ್ತಿ ಸಂಸತ್ತಿಗೆ ಆಗಮಿಸುತ್ತಿದ್ದಾರೆ.
ಇದು ಭಾರತದ ಆರ್ಥಿಕ, ಸಾಂಪ್ರದಾಯಿಕ ಲೆಕ್ಕಪತ್ರ ಆಗಿರುವುದರಿಂದ ಸಾಂಪ್ರದಾಯಿಕ ಶೈಲಿಯಲ್ಲೇ ಸಂಸತ್ಗೆ ತರಲಾಗಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಸೂಟ್ಕೇಸ್ಗೆ ಮುಕ್ತಿ ನೀಡಲಾಗಿದೆ. ಬಜೆಟ್ ಮಂಡನೆಯಲ್ಲೂ ಭಾರತೀಯ ಸಂಸ್ಕೃತಿಗೆ ಆದ್ಯತೆ ನೀಡಲಾಗಿದೆ. ಪಾಶ್ಚಾತ್ಯ ಚಿಂತನೆಯ ದಾಸ್ಯದಿಂದ ನಾವು ಹೊರಬಂದಿದ್ದೇವೆ ಎಂಬುದರ ಸಂಕೇತವಿದು ಎಂದು ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಹ್ಮಣ್ಯನ್ ಮಾಹಿತಿ ನೀಡಿದ್ದಾರೆ.
ಯಾವುದೇ ಶುಭ ಸಮಾರಂಭಗಳಿಗೆ ಚರ್ಮದಿಂದ ಮಾಡಿದ ಬ್ಯಾಗ್ ಅಥವಾ ಸೂಟ್ಕೇಸ್ ಕೊಂಡೊಯ್ಯುವುದು ಅಶುಭ ಎಂಬುದು ಸಚಿವೆ ನಿರ್ಮಲಾ ಸೀತಾರಾಮನ್ ಅವರ ನಂಬಿಕೆ. ಹೀಗಾಗಿ, ಸಂಸತ್ನಲ್ಲಿ ಬಜೆಟ್ ಮಂಡನೆ ಮಾಡಲು ಸಚಿವರು ಚರ್ಮದ ಬ್ಯಾಗ್ ಬದಲಾಗಿ ಬಟ್ಟೆಯಿಂದ ಸುತ್ತಲ್ಪಟ್ಟ ಲೆಕ್ಕಪತ್ರ ಪುಸ್ತಕವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನಾವು ಅವರ ನಿರ್ಧಾರವನ್ನು ಗೌರವಿಸಬೇಕು ಎಂದು ಕೃಷ್ಣಮೂರ್ತಿ ಸುಬ್ರಹ್ಮಣ್ಯನ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಬಜೆಟ್ ಮಂಡನೆಗೂ ಮುನ್ನ ರಿಬ್ಬನ್ ಕಟ್ ಮಾಡುವ ಬದಲು ಕೆಂಪು ರಿಬ್ಬನ್ಗಳನ್ನು ಕಟ್ಟುವ ಮೂಲಕ ನಿರ್ಮಲಾ ಸೀತಾರಾಮನ್ ಹೊಸ ಹೆಜ್ಜೆಯಿಟ್ಟಿದ್ದಾರೆ. ರಿಬ್ಬನ್ ಕಟ್ ಮಾಡುವುದು ಶುಭದ ಸಂಕೇತವಲ್ಲ ಎಂದು ಅವುಗಳನ್ನು ಜೋಡಿಸುವ ಮೂಲಕ ಬಜೆಟ್ ಮಂಡನೆಗೆ ಆಗಮಿಸಿದ್ದಾರೆ.
ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿಯವರು ಹಣಕಾಸು ಖಾತೆ ವಹಿಸಿಕೊಂಡಿದ್ದ ಸಂದರ್ಭದಲ್ಲಿ ಆರ್ಥಿಕ ಬಜೆಟ್ ನ್ನು ಮಂಡಿಸಿದ್ದರು. ಅವರ ನಂತರ ಪೂರ್ಣ ಪ್ರಮಾಣದಲ್ಲಿ ಬಜೆಟ್ ಮಂಡಿಸುತ್ತಿರುವ ಮಹಿಳೆ ನಿರ್ಮಲಾ ಸೀತಾರಾಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಸರ್ಕಾರದ 2019-20ನೇ ಸಾಲಿನ ವಿತ್ತೀಯ ಬಜೆಟ್ ನ್ನು ಅರ್ಥ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುತ್ತಿದ್ದಾರೆ. 90ರಿಂದ 120 ನಿಮಿಷಗಳ ಅವಧಿಯ ಬಜೆಟ್ ನ್ನು ನಿರ್ಮಲಾ ಸೀತಾರಾಮನ್ ಮಂಡಿಸುತ್ತಿದ್ದು ಸ್ವಾತಂತ್ರ್ಯ ನಂತರ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಮಂಡನೆಯಾಗುತ್ತಿರುವ 89ನೇ ಕೇಂದ್ರೀಯ ಬಜೆಟ್ ಇದಾಗಿದೆ.
ಕೇಂದ್ರ ಸರ್ಕಾರದ ಆರ್ಥಿಕ ಹೇಳಿಕೆಗಳು, ಹಿಂದಿನ ವರ್ಷದ ಆದಾಯ ಮತ್ತು ವೆಚ್ಚದ ವಿವರ, ಮುಂದಿನ ವರ್ಷದ ಸರ್ಕಾರದ ಅಂದಾಜು ವೆಚ್ಚ ಮತ್ತು ಯೋಜನೆಗಳ ಪ್ರಕಟಣೆಗಳನ್ನು ಆರ್ಥಿಕ ಬಜೆಟ್ ಒಳಗೊಂಡಿರುತ್ತದೆ. ಕೇಂದ್ರ ಬಜೆಟ್ ಜೊತೆಗೆ ರೈಲ್ವೆ ಬಜೆಟ್ ಕೂಡ ಮಂಡನೆಯಾಗುತ್ತಿದೆ.
Finance Minister Nirmala Sitharaman, MoS Finance Anurag Thakur, Finance Secretary S C Garg, Chief Economic Advisor Krishnamurthy Subramanian and other officials outside Finance Ministry. #Budget2019 to be presented at 11 am in Lok Sabha today pic.twitter.com/oCyrMSNg7N
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಬ್ರೇಕಿಂಗ್ ನ್ಯೂಸ್
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ಮುಖ್ಯ ಚುನಾವಣಾ ಆಯುಕ್ತರನ್ನ ವಜಾ ಮಾಡೊದು ಅಷ್ಟು ಸುಲಭನಾ? ಯಾರಿಗಿದೆ ಆ ಪವರ್? ಸಂವಿಧಾನ ಹೇಳುವುದೇನು?ರಾಹುಕಾಲ ಎಂದರೇನು? ಮದುವೆಗೆ ಅನ್ವಯಿಸುತ್ತದೆಯೇ? ರಾಹು ಶಾಂತಿಗಾಗಿ ನಿಂಬೆ ಹಣ್ಣು ದೀಪ ಹಚ್ಚುವುದು ಸೂಕ್ತವೇ?ಗೌರಿಬಿದನೂರಿನ ಮಣ್ಣಲ್ಲಿ ಅರಳಿದ ಮರುಭೂಮಿ ಹಣ್ಣು: ಅಸಾಧ್ಯವನ್ನು ಸಾಧ್ಯವಾಗಿಸಿದ ಹಠವಾದಿ; ಸ್ವಾವಲಂಬಿ ಕೃಷಿಗೆ ಹೊಸ ಭಾಷ್ಯ ಬರೆದ ದಿವಾಕರ್ ಚನ್ನಪ್ಪ..!ಕರ್ನಾಟಕದ ನಂ.1 ಶ್ರೀಮಂತ ಯಾರು ಗೊತ್ತಾ? ಅಂಬಾನಿ, ಅದಾನಿ ಬಿಡಿ; ಇಲ್ಲಿದೆ ನಮ್ಮ ಕರುನಾಡ ಸಿರಿವಂತರ ಟಾಪ್ ಲಿಸ್ಟ್!ಫ್ಯಾಟ್ ನಿಂದ ಫಿಟ್ ವರೆಗೆ: ಸಾಹೇಬಲಾಲ್ ಛಪ್ಪರ್ಬಂದ್ ಸ್ಫೂರ್ತಿದಾಯಕ ಪಯಣವಿದೇಶಿ ಪ್ರವಾಸದ ಪ್ಲ್ಯಾನ್ ಇದೆಯೇ? ಒಂದು ಸಣ್ಣ ತಪ್ಪು ಭಾರೀ ದಂಡಕ್ಕೆ ಕಾರಣವಾಗಬಹುದು; ಪ್ರವಾಸಿಗರು ತಿಳಿದಿರಲೇಬೇಕಾದ ನಿಯಮಗಳಿವು...!ಮನಸ್ಸಿದ್ದರೆ ಮಾರ್ಗ ಎಂಬುದನ್ನು ರುಜುವಾತು ಮಾಡಿದ ಛಲವಾದಿ; 27 ವರ್ಷಗಳ ಹೋರಾಟದಲ್ಲಿ 26 ಬಾರಿ ಸೋತು 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕರಾದ ವಿಜಯ್ಪಶ್ಚಿಮ ಘಟ್ಟಗಳ ESA - ಕಸ್ತೂರಿರಂಗನ್ ವರದಿ ಇನ್ನೂ ಏಕೆ ಜಾರಿಗೆ ಬಂದಿಲ್ಲ?

