ಕೇಂದ್ರ ಬಜೆಟ್

ಕೇಂದ್ರ ಬಜೆಟ್ 2018: ದೇಶದ ವಿಮಾನ ನಿಲ್ದಾಣ ಸಾಮರ್ಥ್ಯ 5 ಪಟ್ಟು ಹೆಚ್ಚಳಕ್ಕೆ ಜೇಟ್ಲಿ ಕ್ರಮ!

ದೇಶದ ವಿಮಾನ ನಿಲ್ದಾಣಗಳ ಸಾಮರ್ಥ್ಯವನ್ನು 5 ಪಟ್ಟು ಹೆಚ್ಚಳ ಮಾಡುವ ಕುರಿತು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಯೋಜನೆ ರೂಪಿಸಿದ್ದು, ಈ ಬಗ್ಗೆ ಬಜೆಟ್ ಮಂಡನೆ ವೇಳೆ ಮಾಹಿತಿ ನೀಡಿದರು.

ಕೇಂದ್ರ ಬಜೆಟ್ 2018: ದೇಶದ ವಿಮಾನ ನಿಲ್ದಾಣ ಸಾಮರ್ಥ್ಯ 5 ಪಟ್ಟು ಹೆಚ್ಚಳಕ್ಕೆ ಜೇಟ್ಲಿ ಕ್ರಮ!
ಸಂಗ್ರಹ ಚಿತ್ರ
Published On :
ನವದೆಹಲಿ: ದೇಶದ ವಿಮಾನ ನಿಲ್ದಾಣಗಳ ಸಾಮರ್ಥ್ಯವನ್ನು 5 ಪಟ್ಟು ಹೆಚ್ಚಳ ಮಾಡುವ ಕುರಿತು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಯೋಜನೆ ರೂಪಿಸಿದ್ದು, ಈ ಬಗ್ಗೆ ಬಜೆಟ್ ಮಂಡನೆ ವೇಳೆ ಮಾಹಿತಿ ನೀಡಿದರು.
ಈ ವೇಳೆ ಮಾತನಾಡಿದ ಅರುಣ್ ಜೇಟ್ಲಿ, "ಹವಾಯಿ ಚಪ್ಪಲಿ ಧರಿಸುವವರು ಕೂಡ ಹವಾಯಿ ಜಹಾಜ್ (ವಿಮಾನದಲ್ಲಿ) ಹೋಗುವಂತಾಗಿದೆ. ಭಾರತ ಏರ್ಪೋರ್ಟ್ ಪ್ರಾಧಿಕಾರದಡಿಯಲ್ಲಿ ಪ್ರಸ್ತುತ 124 ವಿಮಾನ ನಿಲ್ದಾಣಗಳಿವೆ.  ಇವುಗಳ ಸಾಮರ್ಥ್ಯವನ್ನು 5 ಪಟ್ಟು ಹೆಚ್ಚಳ ಮಾಡುವ ಕುರಿತು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅಂತೆಯೇ ಪ್ರತಿವರ್ಷ 1 ಬಿಲಿಯನ್ ಟ್ರಿಪ್ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಹೇಳಿದರು.
ದೇಶದಲ್ಲಿ ಪ್ರಸ್ತುತ ನಾಗರೀಕ ಸೇವೆಯಿಂದ ದೂರವಿರುವ 56 ವಿಮಾನ ನಿಲ್ದಾಣಗಳು ಅಂತೆಯೇ ನಾಗರೀಕ ಸೇವೆಯಿಂದ ದೂರವಿರುವ 31 ಹೆಲಿಪಾಡ್ ಗಳಿವೆ. ಅಂತೆಯೇ ನಾಗರೀಕ ವಿಮಾನಯಾನ ಪ್ರಾಧಿಕಾರದಡಿಯಲ್ಲಿ 124  ವಿಮಾನ ನಿಲ್ದಾಣಗಳಿದ್ದು, ಈ ಎಲ್ಲ ನಿಲ್ದಾಣಗಳ ಸಾಮರ್ಥ್ಯವನ್ನು 5 ಪಟ್ಟು ಹೆಚ್ಚಳ ಮಾಡಲಾಗುತ್ತದೆ. ಇದಕ್ಕಾಗಿ ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ 14.34 ಲಕ್ಷ ಕೋಟಿ ಹಣವನ್ನು ಮೀಸಲಿರಿಸಿದೆ. ಅಂತೆಯೇ ಈ  ವಿಮಾನ ನಿಲ್ದಾಣಗಳಿಂದ ವಾರ್ಷಿಕ 1 ಬಿಲಿಯನ್ ಟ್ರಿಪ್ ಗುರಿ ಹೊಂದಲಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.