ಸಾಲಮನ್ನಾ ಮಾಡಿದ್ದಕ್ಕೆ ಬಿಜೆಪಿ ನನಗೆ ಸ್ವಲ್ಪ ಕ್ರೆಡಿಟ್ ಕೊಡಲಿ: ಎಚ್.ಡಿ. ಕುಮಾರಸ್ವಾಮಿ
ರೈತರ ಸಾಲ ಮನ್ನಾದಂತಹ ದೊಡ್ಡ ಸವಾಲನ್ನು ಸ್ವೀಕರಿಸಿದ ಬಳಿಕವೂ ಉಳಿತಾಯದ ಬಜೆಟ್ ಮಂಡಿಸಲಾಗಿದೆ. ಇದಕ್ಕೆ ಬಿಜೆಪಿಯವರು ನನಗೆ ಕ್ರೆಡಿಟ್ ಕೊಡಬೇಕು ...

Published On :
ಬೆಂಗಳೂರು: ರೈತರ ಸಾಲ ಮನ್ನಾದಂತಹ ದೊಡ್ಡ ಸವಾಲನ್ನು ಸ್ವೀಕರಿಸಿದ ಬಳಿಕವೂ ಉಳಿತಾಯದ ಬಜೆಟ್ ಮಂಡಿಸಲಾಗಿದೆ. ಇದಕ್ಕೆ ಬಿಜೆಪಿಯವರು ನನಗೆ ಕ್ರೆಡಿಟ್ ಕೊಡಬೇಕು ಎಂದು ಸಿಎಂ ಕುಮಾರ ಸ್ವಾಮಿ ಹೇಳಿದ್ದಾರೆ.
ಬಜೆಟ್ ಮಂಡನೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಕುಮಾರ ಸ್ವಾಮಿ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದರು. ಪಕ್ಕದ ರಾಜ್ಯಗಳಿಗೆ ಹೋಲಿಸಿದರೇ ನಮ್ಮ ಕರ್ನಾಟಕದಲ್ಲಿ ತೆರಿಗೆ, ಇಂಧನದರಗಳು ಕಡಿಮೆ ಇದೆ, ಕೇಂದ್ರ ಸರ್ಕಾರ ಇಂಧನ ದರವನ್ನು ಶೇ.230 ರಷ್ಟು ಏರಿಸುತ್ತಿದೆ, ಹೀಗಿರುವಾಗ ನನ್ನ ಬಜೆಟ್ ನಲ್ಲಿ ಇಂಧನ ದರ ಏರಿಕೆಯನ್ನು ಪ್ರಶ್ನಿಸುವ ನೈತಿಕತೆ ಬಿಜೆಪಿಗಿಲ್ಲ ಎಂದು ಕಿಡಿ ಕಾರಿದರು.
ಬಿಜೆಪಿಯವರ ಆಧಾರರಹಿತ ಆರೋಪಗಳು ಸಮಾಜದ ನೆಮ್ಮದಿಯನ್ನು ಕೆಡಿಸುತ್ತಿವೆ, ಬಿಜೆಪಿಯವರ ಬೆಂಕಿ ಹಚ್ಚುವ ಪ್ರವೃತ್ತಿಗೆ ಅವಕಾಶ ನೀಡದಂತೆ ಕರಾವಳಿ ಜನರಲ್ಲೂ ಮನವಿ ಮಾಡಿಕೊಳ್ಳುತ್ತೇನೆ, ಸಮ್ಮಿಶ್ರ ಸರ್ಕಾರ ಇಡೀ ರಾಜ್ಯದ ಅಭಿವೃದ್ಧಿಗಾಗಿ ಇದೆ ಎಂದು ಹೇಳಿದ್ದಾರೆ.
ನಾವು ಪ್ರಿಂಟಿಂಗ್ ಮೆಷಿನ್ ಇಟ್ಟಿಲ್ಲವೆಂದು ವಿಧಾನ ಪರಿಷತ್‌ನಲ್ಲಿ ಯಡಿಯೂರಪ್ಪ ಹೇಳಿದಂತೆ ನಾವು ಹೇಳಿಲ್ಲ ಸಿಎಂ ಕಟುಕಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
bjpಬಿಜೆಪಿH.D Kumara swamyರೈತರ ಸಾಲಮನ್ನಾKarnataka State budget-2018farm loan waiver.ಎಚ್.ಡಿ ಕುಮಾರ ಸ್ವಾಮಿಕರ್ನಾಟಕ ರಾಜ್ಯ ಬಜೆಟ್-2018
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


