ರಾಜ್ಯ ಬಜೆಟ್

ವಿಧಾನಸಭೆ ಚುನಾವಣೆ: ಮತದಾರರ ಓಲೈಕೆ ಬಜೆಟ್ ಮಂಡನೆಗೆ ಸಿಎಂ ಸಿದ್ದರಾಮಯ್ಯ ಸಿದ್ಧತೆ!

ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಸರ್ಕಾರದ 6ನೇ ಹಾಗೂ ವಯಕ್ತಿಕವಾಗಿ 13ನೇ ಆಯವ್ಯಯ ಮಂಡಿಸಲು ಸಿದ್ದರಾಗಿದ್ದಾರೆ. 2ಲಕ್ಷ ಕೋಟಿ.ರು ಬಜೆಟ್

ವಿಧಾನಸಭೆ ಚುನಾವಣೆ: ಮತದಾರರ ಓಲೈಕೆ ಬಜೆಟ್ ಮಂಡನೆಗೆ ಸಿಎಂ ಸಿದ್ದರಾಮಯ್ಯ ಸಿದ್ಧತೆ!
ಸಿದ್ದರಾಮಯ್ಯ
Published On :
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಸರ್ಕಾರದ 6ನೇ ಹಾಗೂ ವಯಕ್ತಿಕವಾಗಿ 13ನೇ ಆಯವ್ಯಯ ಮಂಡಿಸಲು ಸಿದ್ದರಾಗಿದ್ದಾರೆ. 2ಲಕ್ಷ ಕೋಟಿ.ರು ಬಜೆಟ್ ಗಾತ್ರವಾಗಿದೆ. 
2018-19 ರಲ್ಲಿ 2.20ಲಕ್ಷ ಕೋಟಿ ರೂ ಗಾತ್ರದ ಬಜೆಟ್ ಮಂಡಿಸಲು ಸಿಎಂ ಸಿದ್ದರಾಮಯ್ಯ ತಯಾರಿ ನಡೆಸಿದ್ದಾರೆ.
ಮುಂಬರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಸಿಎಂ ಸಿದ್ದರಾಮಯ್ಯ ಬಜೆಟ್ ತಯಾರಿಸಿದ್ದಾರೆ, ಒಂದು ವೇಳೆ ಹೊಸ ಸರ್ಕಾರ ರಚನೆಯಾದರೇ  ಹಿಂದಿನ ಸರ್ಕಾರದ ಘೋಷಣೆಗಳಿಗೆ ಅಂಟಿಕೊಂಡು ಕೂರಬೇಕೆಂಬ  ಯಾವುದೇ ಕಟ್ಟು ಪಾಡುಗಳಿಲ್ಲ.
ಸಿದ್ದ ರಾಮಯ್ಯ ಅವರು ಈಗಾಗಲೇ ಹಲವು ಭಾಗ್ಯಗಳನ್ನು ಘೋಷಿಸಿದ್ದಾರೆ, ಇದಕ್ಕೆ ವಸ್ತ್ರ ಭಾಗ್ಯ ಸೇರಿದಂತೆ ಮತ್ತಷ್ಟು ಯೋಜನೆಗಳನ್ನು ಸೇರಿಸುವ ಸಾಧ್ಯತೆಯಿದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಮಹಿಳೆಯರಿಗೆ ಸೀರೆ ಹಾಗೂ ಪುರುಷರಿಗ ಧೋತಿ ನೀಡಲು ನಿರ್ಧರಿಸಲಾಗಿದೆ.
ಬಜೆಟ್ ನಲ್ಲಿ ಕೃಷಿ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಲಿದ್ದಾರೆ ಎಂದು  ನಿರೀಕ್ಷಿಸಿಲಾಗಿದೆ, ಪ್ರಕಾಶ್ ಕಮ್ಮಾರ್ಡಿ ನೇತೃತ್ವದ ಆಯೋಗಕೃಷಿ ಉತ್ಪನ್ನಗಳ ಬೆಲೆ ನಿಗದಿ ಸಂಬಂಧ ವರದಿ ನೀಡಿದೆ, ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆ ತರುವ ಸಾಧ್ಯತೆಯಿದೆ. ಟಮೋಟೊ, ಈರುಳ್ಳಿ, ಆಲೂಗೆಡ್ಡೆ, ಹಸಿರು ಮೆಣಸಿನಕಾಯಿ ಯನ್ನು ಕನಿಷ್ಠ ಬೆಂಬಲ ಬೆಲೆಯಡಿ ತರಲು ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಕೃಷಿ ಸಂಬಂಧಿತ ಪಶು ಸಾಕಣೆ, ಕುರಿ ಸಾಕಣೆ ಮಾಡುವ ಮಹಿಳೆಯರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಬೇಕು ಎಂದು ರೈತ ಸಂಘದ ಅಧ್ಯಕ್ಷ ಕುರುಬೂರು ಶಾಂತ ಕುಮಾರ್  ನೇತೃತ್ವದ ನಿಯೋಗ  ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ. 
ದೀರ್ಘಕಾಲದಿಂದ ತಡೆಹಿಡಿದಿರುವ ವಾಣಿಜ್ಯ ಪರವಾನಗಿ ವ್ಯವಸ್ಥೆಯ ಬೇಡಿಕೆಯನ್ನು ತೆಗೆದು ಹಾಕುವ ಸಾಧ್ಯತೆಯಿದೆ ಎಂದು ಎಫ್ ಕೆಸಿಸಿಐ ಅಧ್ಯಕ್ಷ ಕೆ. ರವಿ ಅಭಿಪ್ರಾಯ ಪಟ್ಟಿದ್ದಾರೆ. ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡಲು ಎಸ್ ಸ್ಸಿ ಎಸ್ ಟಿ ಸಮುದಾಯಗಳಿಗೆ  ನೀಡುವ ಅನುದಾನವನ್ನು 3 ಲಕ್ಷ ರೂ ಗಳಿಗೆ ಏರಿಸುವ ಸಾಧ್ಯತೆಯಿದೆ.
ಬಜೆಟ್ ನಲ್ಲಿ ಘೋಷಿಸಿದ ಎಲ್ಲಾ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಂಪನ್ಮೂಲ ಕ್ರೂಡೀಕರಣ ಅತ್ಯಗತ್ಯವಾಗಿದೆ. ಹಿಂದಿನ ವರ್ಷದ ಬಜೆಟ್ ಗಾಕ್ರ 18,050 ಲಕ್ಷ ಕೋಟಿ ಇದ್ದದ್ದು  ಈ ವರ್ಷದ ಚುನಾವಣೆ ಹಿನ್ನೆಲೆಯಲ್ಲಿ 20 ಲಕ್ಷ ಕೋಟಿ ಗೆ ಏರಿಸಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.