ಬುಕ್ ಸೈಟ್

ಕ್ಯಾಮರಾ ಕಣ್ಣಲ್ಲಿ ರಾಜ್

ಡಾ ರಾಜ್ ಸೂಕ್ಷ್ಮಗ್ರಾಹಿ. ತಮ್ಮ ಮನಸ್ಸಿಗೆ ಹಿಡಿಸಿದ ವಿಷಯಗಳ ಬಗ್ಗೆ ಒಮ್ಮೆಗೇ ಆಸಕ್ತರಾಗುತ್ತಿದ್ದರು. ಅವರು ಫೋಟೋಗ್ರಾಫಿ...

ಕ್ಯಾಮರಾ ಕಣ್ಣಲ್ಲಿ ರಾಜ್
Published On :

ನಾ ಕಂಡ ರಾಜಕುಮಾರ
ಡಾ ರಾಜ್ ಸೂಕ್ಷ್ಮಗ್ರಾಹಿ. ತಮ್ಮ ಮನಸ್ಸಿಗೆ ಹಿಡಿಸಿದ ವಿಷಯಗಳ ಬಗ್ಗೆ ಒಮ್ಮೆಗೇ ಆಸಕ್ತರಾಗುತ್ತಿದ್ದರು. ಅವರು ಫೋಟೋಗ್ರಾಫಿ ಕಲಿತದ್ದು ಕೂಡಾ ಹಾಗೆಯೇ. ಆರಂಭದಲ್ಲಿ ನನ್ನ ಕ್ಯಾಮೆರಾ ಕಣ್ಣಲ್ಲಿ ಕಣ್ಣಿಟ್ಟು ಕುತೂಹಲದಿಂದ ನೋಡುತ್ತಿದ್ದರು. ಮುಂದಿನ ಕೆಲವೇ ದಿನಗಳಲ್ಲಿ ಅವರಿಗೆ ಛಾಯಾಗ್ರಹಣದ ತಂತ್ರಗಾರಿಕೆಗಳು ಮನವರಿಕೆಯಾಗಿದ್ದವು. ಶೂಟಿಂಗ್‌ಗೆ ಹೋಗುವಾಗ ಯಾವಾಗಲೂ ನಾನು ಎರಡು- ಮೂರು ಕ್ಯಾಮೆರಾಗಳನ್ನು ಒಯ್ಯುತ್ತಿದ್ದೆ. ಅವುಗಳಲ್ಲೊಂದು ಕ್ಯಾಮೆರಾ ರಾಜ್‌ಗೆ . ಬಿಡುವಿನ ವೇಳೆಯಲ್ಲಿ ಅವರು ಕೊರಳಿಗೆ ಕ್ಯಾಮೆರಾ ಹಾಕಿಕೊಂಡು ಫೋಟೋ ಕ್ಲಿಕ್ಕಿಸುತ್ತಿದ್ದರು. ಈ ಮೇಲಿನ ಫೋಟೋ ಅಂಥದ್ದೇ ಒಂದು ಸಂದರ್ಭ. ನಂದಿಬೆಟ್ಟದಲ್ಲಿ ರಾಜ್‌ರ 'ಒಲವು ಗೆಲುವು' ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ಎಂದಿನಂತೆ ರಾಜ್ ಕ್ಯಾಮೆರಾ ಕೈಗೆತ್ತಿಕೊಂಡಿದ್ದರು. ಅಂದು ಅವರು ತುಂಬಾ ಖುಷಿಯ ಮೂಡ್‌ನಲ್ಲಿದ್ದಂತಿತ್ತು. ನನ್ನನ್ನು ಎದುರು ನಿಲ್ಲಿಸಿಕೊಂಡು 'ಸ್ಮೈಲ್ ' ಎಂದರು. ನನ್ನ ಬಳಿಯೇ ಇದ್ದ ಮತ್ತೊಂದು ಕ್ಯಾಮೆರಾವನ್ನು ಚಿತ್ರತಂಡದ ವ್ಯಕ್ತಿಯೊಬ್ಬರಿಗೆ ಕೊಟ್ಟು ಕ್ಲಿಕ್ಕಿಸುವಂತೆ ಹೇಳಿದರು. ರಾಜ್ ಕಣ್ಣಿನಲ್ಲಿ ನಾನು ಸೆರೆಯಾದ ಅಪರೂಪದ ಸಂದರ್ಭ ದಾಖಲಾಯಿತು.

-ಭವಾನಿ ಎನ್.ಲಕ್ಷ್ಮೀನಾರಾಯಣ

ಈ ವಾರದ ಹೊತ್ತಗೆ: ಕ್ಯಾಮರಾ ಕಣ್ಣಲ್ಲಿ ರಾಜ್
ನಿರೂಪಣೆ: ಶಶಿಧರ ಚಿತ್ರದುರ್ಗ
ಪ್ರಕಾಶಕರು: ಪಲ್ಲವ ಪ್ರಕಾಶನ
ಬೆಲೆ: 160 ರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.