Helmet ದುರ್ವಾಸನೆಗೆ ಹೇಳಿ ಗುಡ್‌ಬೈ! ಮಳೆಗಾಲದಲ್ಲಿ ಹೆಲ್ಮೆಟ್ ನಿಂದ ಬ್ಯಾಕ್ಟೀರಿಯಾ, ದುರ್ವಾಸನೆ ತಡೆಯಲು ಇಲ್ಲಿದೆ 7 ಸರಳ ಉಪಾಯ!
ಮಳೆಗಾಲ ಬಂತು ಅಂದ್ರೆ ಹೆಲ್ಮೆಟ್ ಒಳಗೆ ಬೆವರೂ ಆಗುತ್ತೆ, ತೇವವೂ ಆಗುತ್ತೆ. ಪರಿಣಾಮ? 2 ದಿನದಲ್ಲೇ ಹೆಲ್ಮೆಟ್‌ನಿಂದ ವಾಸನೆ, ಫಂಗಸ್, ತಲೆ ತುರಿಕೆ. ಬೈಕ್ ಓಡಿಸೋ ಪ್ರತಿಯೊಬ್ಬರ ಸಮಸ್ಯೆ ಇದು. ಆದರೆ, ಈ ಸಿಂಪಲ್ 7 ಟಿಪ್ಸ್ ಫಾಲೋ ಮಾಡಿದ್ರೆ ನಿಮ್ಮ ಹೆಲ್ಮೆಟ್ ವರ್ಷಪೂರ್ತಿ ಫ್ರೆಶ್ ಆಗಿ ಇರುತ್ತೆ.

Rainy Season Helmet Care: ಮಳೆಗಾಲ ಬಂತು ಅಂದ್ರೆ ಹೆಲ್ಮೆಟ್ ಒಳಗೆ ಬೆವರೂ ಆಗುತ್ತೆ, ತೇವವೂ ಆಗುತ್ತೆ. ಪರಿಣಾಮ? 2 ದಿನದಲ್ಲೇ ಹೆಲ್ಮೆಟ್‌ನಿಂದ ಸೊಂಕು ವಾಸನೆ, ಫಂಗಸ್, ತಲೆ ತುರಿಕೆ. ಬೈಕ್ ಓಡಿಸೋ ಪ್ರತಿಯೊಬ್ಬರ ಸಮಸ್ಯೆ ಇದು. ಹೆಲ್ಮೆಟ್ ತೊಳೆಯೋಕೂ ಆಗಲ್ಲ, ಹಾಗೇ ಬಿಟ್ರೆ ವಾಸನೆ ಜಾಸ್ತಿ. ಆದರೆ, ಟೆನ್ಷನ್ ಬೇಡ. ಈ ಸಿಂಪಲ್ 7 ಟಿಪ್ಸ್ ಫಾಲೋ ಮಾಡಿದ್ರೆ ನಿಮ್ಮ ಹೆಲ್ಮೆಟ್ ವರ್ಷಪೂರ್ತಿ ಫ್ರೆಶ್ ಆಗಿ ಇರುತ್ತೆ. ಅದೇನು ಗೊತ್ತಾ?
ಮಳೆಗಾಲದಲ್ಲಿ ಹೆಲ್ಮೆಟ್ ವಾಸನೆ ಬರೋಕೆ ಕಾರಣ ಏನು?
ಬೆವರು + ತೇವ: ಮಳೆ ಮತ್ತು ಬೆವರು ಸೇರಿ ಬ್ಯಾಕ್ಟೀರಿಯಾ, ಫಂಗಸ್ ಬೆಳೆಯುತ್ತದೆ
ಒಣಗಿಸದಿರುವುದು: ಒದ್ದೆ ಹೆಲ್ಮೆಟ್ ಅನ್ನು ಬ್ಯಾಗ್‌ನಲ್ಲಿ ಹಾಕೋದರಿಂದ ವಾಸನೆ ಡಬಲ್ ಆಗುತ್ತದೆ
ಕೊಳಕು ಪ್ಯಾಡ್: ತಲೆಹೊಟ್ಟು, ಧೂಳು, ಎಣ್ಣೆ ಎಲ್ಲಾ ಸೇರಿ ದುರ್ವಾಸನೆ ಬರುತ್ತದೆ
ದುರ್ವಾಸನೆ ತಡೆಯಲು 7 ಬೆಸ್ಟ್ ಟಿಪ್ಸ್:
1. ಪ್ರತಿ ರೈಡ್ ನಂತರ ಗಾಳಿ ಆಡಿಸಿ
ಬೈಕ್ ನಿಲ್ಲಿಸಿದ ತಕ್ಷಣ ಹೆಲ್ಮೆಟ್ ಅನ್ನು ನೇರವಾಗಿ ಬ್ಯಾಗ್‌ನಲ್ಲಿ ಹಾಕಬೇಡಿ. ಅದರ ಬದಲು, ಮನೆಗೆ ಬಂದು 30 ನಿಮಿಷ ನೆರಳಲ್ಲಿ, ಗಾಳಿ ಬೀಸುವ ಜಾಗದಲ್ಲಿ ತಲೆಕೆಳಗಾಗಿ ಇಡಿ. ಇವಾಗ ಒಳಗಿನ ತೇವ ಹೊರಗೆ ಹೋಗುತ್ತದೆ.
2. ವಾರಕ್ಕೆ 1 ಬಾರಿ ಹೆಲ್ಮೆಟ್ ಲೈನರ್ ತೊಳೆಯಿರಿ
ಹೆಚ್ಚಿನ ಹೆಲ್ಮೆಟ್‌ನ ಪ್ಯಾಡ್ ತೆಗೆಯಬಹುದು. ಅದನ್ನು ಬಿಚ್ಚಿ ಸೌಮ್ಯವಾದ ಶಾಂಪೂ ಅಥವಾ ಬೇಬಿ ಶಾಂಪೂದಲ್ಲಿ ಕೈಯಿಂದ ತೊಳೆಯಿರಿ. ಆದ್ರೆ, ತೊಳೆದ ನಂತರ, ಬಿಸಿಲಲ್ಲಿ ಒಣಗಿಸಬೇಡಿ. ಫ್ಯಾನ್ ಗಾಳಿಯಲ್ಲಿ ನೆರಳಲ್ಲಿ ಒಣಗಿಸಿ. ಹೀಗೆ ಮಾಡಿದರೆ ವಾಸನೆ 80% ಕಡಿಮೆಯಾಗುತ್ತದೆ.

3. ಬೇಕಿಂಗ್ ಸೋಡಾ ಪೌಡರ್ ಟ್ರಿಕ್
ರಾತ್ರಿ ಮಲಗುವ ಮುನ್ನ ಹೆಲ್ಮೆಟ್ ಒಳಗೆ 2 ಚಮಚ ಬೇಕಿಂಗ್ ಸೋಡಾ ಸಿಂಪಡಿಸಿ. ಅದಾದ ನಂತರ ಬೆಳಿಗ್ಗೆ ವ್ಯಾಕ್ಯೂಮ್ ಕ್ಲೀನರ್ ಅಥವಾ ಒಣ ಬಟ್ಟೆಯಿಂದ ಒರೆಸಿ. ಇದು, ವಾಸನೆಯನ್ನು ಹೀರಿಕೊಳ್ಳುತ್ತದೆ. ಅದರಂತೆ, ಈ ಕೆಲಸವನ್ನ ವಾರಕ್ಕೆ 2 ಬಾರಿ ಮಾಡಿ.
4. ವಿನೆಗರ್ + ನೀರಿನ ಸ್ಪ್ರೇ
1 ಭಾಗ ಬಿಳಿ ವಿನೆಗರ್ + 3 ಭಾಗ ನೀರು ಮಿಕ್ಸ್ ಮಾಡಿ ಸ್ಪ್ರೇ ಬಾಟಲಲ್ಲಿ ಇಡಿ. ಅದರಂತೆ, ರೈಡ್ ನಂತರ ಹೆಲ್ಮೆಟ್ ಒಳಗೆ 2-3 ಸ್ಪ್ರೇ ಮಾಡಿ. ಹೀಗೆ ಮಾಡಿದರೆ ಬ್ಯಾಕ್ಟೀರಿಯಾ ಸಾಯುತ್ತದೆ ಮತ್ತು ವಾಸನೆ ಹೋಗುತ್ತದೆ. ಅದರಲ್ಲೂ, ವಿನೆಗರ್ ಕಾರಣದಿಂದ ವಾಸನೆ 10 ನಿಮಿಷದಲ್ಲಿ ಹಾರಿ ಹೋಗುತ್ತದೆ.
5. ಹೆಲ್ಮೆಟ್ ಒಳಗೆ ಡ್ರೈ ಶೀಟ್
ಮಾರುಕಟ್ಟೆಯಲ್ಲಿ ಸಿಗುವ Helmet Deodorizer ಅಥವಾ ಮನೆಯಲ್ಲೆ ಇರುವ ಟಿಶ್ಯೂ ಪೇಪರ್‌ಗೆ 2 ಹನಿ ಯೂಕಲಿಪ್ಟಸ್ ಆಯಿಲ್/ಲ್ಯಾವೆಂಡರ್ ಆಯಿಲ್ ಹಾಕಿ ಹೆಲ್ಮೆಟ್ ಒಳಗೆ ಇಡಿ. ಇದರಿಂದ ಫ್ರೆಶ್ ಸ್ಮೆಲ್ ಇರುತ್ತದೆ ಮತ್ತು ಫಂಗಸ್ ಬರುವುದಿಲ್ಲ.
6. ಹೆಲ್ಮೆಟ್ ಕವರ್
ತಲೆಗೆ ಹಾಕಿಕೊಳ್ಳುವ ತೆಳುವಾದ ಕಾಟನ್ ಬ್ಯಾಲಾಕ್ಲಾವಾ ಅಥವಾ ಹೆಲ್ಮೆಟ್ ಕ್ಯಾಪ್ ಬಳಸಿ. ಇದರಿಂದ ಬೆವರು ನೇರವಾಗಿ ಪ್ಯಾಡ್‌ಗೆ ಹೋಗುವುದಿಲ್ಲ. ಜೊತೆಗೆ ಅವುಗಳನ್ನು ಪ್ರತಿದಿನ ತೊಳೆಯಬಹುದು. ಇದರಿಂದ ಹೆಲ್ಮೆಟ್ ಕೂಡ ಕ್ಲೀನ್ ಆಗಿ ಇರುತ್ತದೆ.
7. ಒದ್ದೆಯಾದರೆ ಹೇಗೆ ಒಣಗಿಸಬೇಕು?
ಮಳೆನಲ್ಲಿ ನೆಂದರೆ ಹೇರ್ ಡ್ರೈಯರ್ ಹಚ್ಚಬೇಡಿ. ಪೇಪರ್ ಟವೆಲ್‌ನಿಂದ ಒಳಗಿನ ನೀರನ್ನು ಒರೆಸಿ. ತದ ನಂತರ ಫ್ಯಾನ್ ಮುಂದೆ ಅಥವಾ AC ರೂಮ್‌ನಲ್ಲಿ 6-8 ಗಂಟೆ ತಲೆಕೆಳಗಾಗಿ ಇಡಿ. ಅದರಲ್ಲೂ, ಬಿಸಿಲು ಅಥವಾ ಹೀಟರ್ ಬಳಸಿದರೆ ಫೋಮ್ ಹಾಳಾಗುತ್ತದೆ.
ಆದ್ರೆ, ಏನನ್ನು ಮಾಡಲೇಬಾರದು?
ಪರ್ಫ್ಯೂಮ್ ನೇರವಾಗಿ ಸಿಂಪಡಿಸಬೇಡಿ: ಕೆಮಿಕಲ್‌ನಿಂದ ಪ್ಯಾಡ್ ಹಾಳಾಗುತ್ತದೆ ಮತ್ತು ಅಲರ್ಜಿ ಬರಬಹುದು
ವಾಷಿಂಗ್ ಮೆಷಿನ್‌ನಲ್ಲಿ ಹಾಕಬೇಡಿ: ಹೆಲ್ಮೆಟ್‌ನ ಶೆಲ್ ಮತ್ತು ಫೋಮ್ ಡ್ಯಾಮೇಜ್ ಆಗುತ್ತದೆ
ಒದ್ದೆ ಹೆಲ್ಮೆಟ್ ಅನ್ನು ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಇಡಬೇಡಿ: ಫಂಗಸ್ 2 ಪಟ್ಟು ವೇಗವಾಗಿ ಬೆಳೆಯುತ್ತದೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


