ವಾಹನ

ಎರಡು ವರ್ಷಗಳಲ್ಲಿ 2 ಲಕ್ಷ ಕಿಯಾ ಕಾರುಗಳು ಮಾರಾಟ

ದೇಶದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕಾರು ಕಂಪನಿಗಳಲ್ಲಿ ಒಂದಾದ ಕಿಯಾಇಂಡಿಯಾ, ದೇಶದಲ್ಲಿ ಸತತ ಮೂರು ಮೈಲಿಗಲ್ಲುಗಳನ್ನು ದಾಖಲಿಸಿದೆ.

ಎರಡು ವರ್ಷಗಳಲ್ಲಿ 2 ಲಕ್ಷ ಕಿಯಾ ಕಾರುಗಳು ಮಾರಾಟ
ಕಿಯಾ ಕಾರು
Published On :

ನವದೆಹಲಿ: ದೇಶದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕಾರು ಕಂಪನಿಗಳಲ್ಲಿ ಒಂದಾದ ಕಿಯಾಇಂಡಿಯಾ, ದೇಶದಲ್ಲಿ ಸತತ ಮೂರು ಮೈಲಿಗಲ್ಲುಗಳನ್ನು ದಾಖಲಿಸಿದೆ.

ಭಾರತದಲ್ಲಿ ಅತಿ ಶೀಘ್ರ 3 ಲಕ್ಷ ಕಾರುಗಳನ್ನು ಮಾರಾಟ ಮಾಡಿದ ದಾಖಲೆಯ ಬೆನ್ನಲ್ಲೇ ಕಿಯಾ, ಸೆಲ್ಟೋಸ್‌ ಕಾರಿನ 2 ಲಕ್ಷ ಮಾರಾಟವನ್ನು ಸಂಭ್ರಮಿಸುತ್ತದೆ. ಜೊತೆಗೆ, ಸಂಪರ್ಕಿತ ಕಾರುಗಳ ವಲಯದಲ್ಲಿ ಕೂಡ 1.5 ಲಕ್ಷ ಕಾರುಗಳ ಮಾರಾಟ ದಾಖಲಿಸಿದೆ.

ಕಿಯಾದ ಒಟ್ಟು ಮಾರಾಟದಲ್ಲಿ ಸೆಲ್ಟೋಸ್‌ ಶೇ.66 ಕ್ಕಿಂತಲೂ ಹೆಚ್ಚಿನ ಕೊಡುಗೆ ನೀಡುತ್ತಿದೆ. ಮಿಡ್-ಎಸ್‌ಯುವಿ ವಿಭಾಗದಲ್ಲಿ ಹೊಸತನ ಪರಿಚಯಿಸಿದೆ. ಸೆಲ್ಟೋಸ್‌ನ ಉನ್ನತ ರೂಪಾಂತರ ಮಾರಾಟದಲ್ಲಿ ಶೇ.58ರಷ್ಟು ಹಾಗೂ ವಾಹನದ ಸ್ವಯಂಚಾಲಿತ ಆಯ್ಕೆಗಳು 35% ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತವೆ.

ಈ ಕುರಿತು ಮಾತನಾಡಿದ, ಕಿಯಾ ಇಂಡಿಯಾಸೈಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಮುಖ್ಯ ಮಾರಾಟ ಮತ್ತು ವ್ಯಾಪಾರ ಕಾರ್ಯತಂತ್ರದ ಅಧಿಕಾರಿ ಟೇ-ಜಿನ್ ಪಾರ್ಕ್, ಈ ಸತತ ಮೈಲಿಗಲ್ಲುಗಳು ಆಟೋ ಉದ್ಯಮದಲ್ಲಿ ಒಂದು ಕ್ರಾಂತಿ ಉಂಟುಮಾಡಿದೆ. ಬದಲಾಗುತ್ತಿರುವ ಗ್ರಾಹಕರ ಪ್ರವೃತ್ತಿಗಳು,  ಇತ್ತೀಚಿನ ವೈಶಿಷ್ಟ್ಯಗಳ ಹೆಚ್ಚಿದ ಬಯಕೆ ಮತ್ತು ಅತ್ಯಾಧುನಿಕ ಸಂಪರ್ಕಿತ-ಕಾರ್ ತಂತ್ರಜ್ಞಾನದಿಂದಾಗಿ ಭಾರತೀಯ ಪಿವಿ ಮಾರುಕಟ್ಟೆಯು ರೂಪಾಂತರಕ್ಕೆ ಒಳಗಾಗುತ್ತಿದೆ" ಎಂದರು.

ಕಂಪನಿಯು ಇತ್ತೀಚೆಗೆ 'ಕಿಯಾ ಡಿಜಿ-ಕನೆಕ್ಟ್' ಎಂಬ ಸಮಗ್ರ ಪರಿಹಾರ ಅಪ್ಲಿಕೇಶನ್ ಅನ್ನು ಪರಿಚಯಿಸಿತು, ಇದು ಉದ್ಯಮದ ಮೊದಲ ವೀಡಿಯೊ ಆಧಾರಿತ ನೇರ ಮಾರಾಟ ಸಮಾಲೋಚನೆ ಪರಿಹಾರವಾಗಿದೆ. ತನ್ನ ಗ್ರಾಹಕ-ಕೇಂದ್ರಿತತೆ ಮತ್ತು ನಾವೀನ್ಯತೆ-ಮೊದಲ ವಿಧಾನದೊಂದಿಗೆ, ಕಿಯಾ ವರ್ಧಿತ  ಮಾಲೀಕತ್ವದ ಅನುಭವಕ್ಕಾಗಿ ಹಲವು ಆಯ್ಕೆಗಳನ್ನು ನೀಡುತ್ತದೆ. ಇದರ ಮೂರು ವಿಭಾಗ-ಪ್ರಮುಖ ಉತ್ಪನ್ನಗಳು ಅದರ 300 ಟಚ್ ಪಾಯಿಂಟ್‌ಗಳನ್ನು ಹೊಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.