2019ರ ಡಿಸೆಂಬರ್ ನಲ್ಲಿ ಟಿವಿಎಸ್ ಕಂಪೆನಿಯ 231,57 ವಾಹನ ಮಾರಾಟ
2019ರ ಡಿಸೆಂಬರ್ ನಲ್ಲಿ ಟಿವಿಎಸ್ ಕಂಪೆನಿಯ 231,57 ವಾಹನಗಳು ಮಾರಾಟವಾಗಿವೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

ಹೊಸೂರು: 2019ರ ಡಿಸೆಂಬರ್ ನಲ್ಲಿ ಟಿವಿಎಸ್ ಕಂಪೆನಿಯ 231,57 ವಾಹನಗಳು ಮಾರಾಟವಾಗಿವೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.
ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ತಯಾರಕ ಕಂಪೆನಿ ಟಿವಿಎಸ್ ಮೋಟಾರ್ ಕಂಪೆನಿ ಕಳೆದ ಡಿಸೆಂಬರ್ ನಲ್ಲಿ 231,571 ವಾಹನ ಮಾರಾಟ ಮಾಡಿದೆ. 2018ರ ಡಿಸೆಂಬರ್ ನಲ್ಲಿ 2,71,395 ವಾಹನಗಳು ಮಾರಾಟವಾಗಿದ್ದವು. ಸಂಸ್ಥೆಯ ಟಿವಿಎಸ್ ಅಪಾಚೆ ಆರ್‍ಟಿಆರ್ ಸೀರೀಸ್, ಟಿವಿಎಸ್ ಜುಪಿಟರ್ ಕ್ಲಾಸಿಕ್ ಮತ್ತು ಟಿವಿಎಸ್ ಎಕ್ಸ್‍ಎಲ್ ಸರಣಿಯ 2020ರ ಬಿಎಸ್-4 ವಾಹನಗಳನ್ನು ಉತ್ಪಾದಿಸಿ, ಮಾರುಕಟ್ಟೆಗೆ ಪೂರೈಸುತ್ತಿದೆ.
ಕಳೆದ ಡಿಸೆಂಬರ್ ನಲ್ಲಿ ಒಟ್ಟು 215,619 ವಾಹನಗಳು ಮಾರಾಟವಾಗಿದ್ದು, 2018ರ ಇದೇ ಅವಧಿಯಲ್ಲಿ 258,709 ವಾಹನಗಳು ಮಾರಾಟವಾಗಿದ್ದವು. ಕಳೆದ ತಿಂಗಳು ದೇಶೀಯ ಮಾರುಕಟ್ಟೆಯಲ್ಲಿ 157,244 ದ್ವಿಚಕ್ರ ವಾಹನಗಳು ಮಾರಾಟವಾಗಿದ್ದವು. 2018ರ ಡಿಸೆಂಬರ್ ನಲ್ಲಿ 209,906 ವಾಹನಗಳು ಮಾರಾಟವಾಗಿದ್ದವು ಎಂದು ಕಂಪೆನಿಯ ಪ್ರಕಟಣೆ ತಿಳಿಸಿದೆ.
ಕಳೆದ ಡಿಸೆಂಬರ್‍ನಲ್ಲಿ 93,697 ಮೋಟರ್ ಸೈಕಲ್‍ಗಳು ಮಾರಾಟವಾಗಿದ್ದು, 2018ರ ಡಿಸೆಂಬರ್ ನಲ್ಲಿ 107,189 ವಾಹನಗಳು ಮಾರಾಟವಾಗಿದ್ದವು. ಕಳೆದ ಡಿಸೆಂಬರ್ ನಲ್ಲಿ 74,716 ಸ್ಕೂಟರ್‍ಗಳು ಮಾರಾಟವಾಗಿದ್ದು, 2018ರ ಡಿಸೆಂಬರ್‍ನಲ್ಲಿ 91,480 ವಾಹನಗಳು ಮಾರಾಟವಾಗಿದ್ದವು. 2018ರ ಡಿಸೆಂಬರ್ ಗೆ ಹೋಲಿಸಿದರೆ ರಫ್ತು ಪ್ರಮಾಣ ಶೇ 22ರಷ್ಟು ವೃದ್ಧಿಸಿದ್ದು, ಒಟ್ಟು 60,262 ವಾಹನಗಳು ಮಾರಾಟವಾಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


