ಮಹೀಂದ್ರದಿಂದ ಹೊಸ ಟಿಯುವಿ 300 ವಾಹನ ಮಾರುಕಟ್ಟೆಗೆ
ಎಸ್‍ಯುವಿ ವಿಭಾಗದಲ್ಲಿ ಹೊಸ ಟಿಯುವಿ 300 ವಾಹನವನ್ನು ಮಹೀಂದ್ರ ಆಂಡ್ ಮಹೀಂದ್ರ ಸಮೂಹ ಶುಕ್ರವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

Published On :
ಕೊಲ್ಕತಾ: ಎಸ್‍ಯುವಿ ವಿಭಾಗದಲ್ಲಿ ಹೊಸ ಟಿಯುವಿ 300 ವಾಹನವನ್ನು ಮಹೀಂದ್ರ ಆಂಡ್ ಮಹೀಂದ್ರ ಸಮೂಹ ಶುಕ್ರವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ನೂತನ ಆಶೋತ್ತರ ವೈಶಿಷ್ಟ್ಯತೆಗಳು ಹಾಗೂ ಆಕರ್ಷಕ ವಿನ್ಯಾಸದ ಟಿಯುವಿ 300 ವಾಹನದ ಬೆಲೆ 8.38 ಲಕ್ಷ ರೂ. (ಎಕ್ಸ್ ಷೋ ರೂಂ, ಮುಂಬೈ) ನಿಗದಿ ಪಡಿಸಲಾಗಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಎಸ್‍ಯುವಿ ವಿಭಾಗದಲ್ಲಿ ಮತ್ತಷ್ಟು ಆಕರ್ಷಕ ಮತ್ತು ಸದೃಢತೆಯನ್ನು ಟಿಯುವಿ 300 ವಾಹನ ಹೊಂದಿದೆ. ಹೆಡ್ ಲ್ಯಾಂಪ್ ಸಹ ಆಕರ್ಷಕ ವಿನ್ಯಾಸ ಹೊಂದಿದ್ದು, ಸ್ಪೇರ್ ವೀಲ್‍ಗೆ ಎಕ್ಸ್ ಆಕಾರದ ಲೋಹದ ಕವರ್ ಅಳವಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ವಾಹನದ ಒಳ ಭಾಗ ಇಟಾಲಿಯನ್ ಶೈಲಿ ಮನೆಯ ವಿನ್ಯಾಸ ಹೊಂದಿದೆ. ನೂತನ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಜಿಪಿಎಸ್ ನೊಂದಿಗೆ 17.8 ಸೆಂ.ಮೀ ಇನ್‍ಫೋಟೈನ್‍ಮೆಂಟ್ ಕ್ಯಾಮೆರಾ, ಬಗ್ಗಿಸಬಹುದಾದ ಹೆಡ್ ಲ್ಯಾಂಪ್‍ಗಳು ಹಾಗೂ ಮೈಕ್ರೋ ಹೈಬ್ರಿಡ್ ತಂತ್ರಜ್ಞಾನದಿಂದ ವಾಹನ ಮಾಲೀಕರಿಗೆ ಆರಾಮದಾಯ ಪ್ರಯಾಣವನ್ನು ಈ ವಾಹನ ಒದಗಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


