ಗತಕಾಲದ ವೈಭವ ನೆನಪಿಸುವ ಜಾವಾ ಬೈಕ್ ಮತ್ತೆ ಮಾರುಕಟ್ಟೆಗೆ ಲಗ್ಗೆ; ಮೊತ್ತ, ವಿಶೇಷತೆಗಳೇನು?
ಪಡ್ಡೆ ಹುಡುಗರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ್ದ ಗತಕಾಲದ ವೈಭವವನ್ನು ಮತ್ತೆ ನೆನಪಿಸುವ ಜಾವಾ ಬೈಕ್ ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ...

Published On :
ಮುಂಬೈ: ಪಡ್ಡೆ ಹುಡುಗರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ್ದ ಗತಕಾಲದ ವೈಭವವನ್ನು ಮತ್ತೆ ನೆನಪಿಸುವ ಜಾವಾ ಬೈಕ್ ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ಮಹೀಂದ್ರಾ ಸಂಸ್ಥೆ ಬೈಕ್ ಪ್ರಿಯರ ಕನಸು ನನಸಾಗಿಸಿದ್ದು ಜಾವಾ ಬ್ರಾಂಡ್ ನ ಮೂರು ಬೈಕ್ ಗಳನ್ನು ಮಾರುಗಟ್ಟೆಗೆ ಬಿಡುಗಡೆ ಮಾಡಿದೆ. ಇನ್ನು ಜಾವಾ ಬೈಕ್ ನ ಬ್ರಾಂಡ್ ಕಾಪಾಡುವ ನಿಟ್ಟಿನಲ್ಲಿ ಸಂಸ್ಥೆಯ ಅದೇ ಲುಕ್ ಕಾಪಾಡಿಕೊಂಡಿದೆ. ಸ್ಪೀಡಾ ಮೀಟರ್, ಡೂಮ್ ನ ಕ್ಲಾಸಿಕ್ ಲುಕ್ ಹಾಗೇ ಉಳಿಸಲಾಗಿದೆ. ಟೂಲ್ ಬಾಕ್ಸ್ ಅನ್ನು ಹೊಸದಾಗಿ ಸೇರಿಸಿ ಅದರ ಅಂದ ಹೆಚ್ಚಿಸಲಾಗಿದೆ.
ನೂತನ ಜಾವಾ ಬೈಕ್ ಗಳು ಆರು ಗೇರ್ ಗಳನ್ನು ಹೊಂದಿದ್ದು 293ಸಿಸಿ ಎಂಜಿನ್ ಹೊಂದಿದೆ. 14 ಲೀಟರ್ ಪೆಟ್ರೋಲ್ ಟ್ಯಾಂಕ್ ಇದೆ. ಜಾವಾ 42 ಮತ್ತು ಪೆರಾಕ್ ನಲ್ಲಿ ಒಂದೇ ಎಂಜಿನ್ ಬಳಕೆಯಾಗಿದ್ದರೂ, ಪೆರಾಕ್ ವೇರಿಯಂಟ್ ನಲ್ಲಿ ದೊಡ್ಡ ಬೋರ್ ಗಳನ್ನು ಬಳಸಲಾಗಿದೆ. ಈ ಬೈಕ್ 332ಸಿಸಿ ಎಂಜಿನ್ ಹೊಂದಿದೆ.
ನೂತನ ಜಾವಾ ಬೈಕ್ ಬೆಲೆ
ಜಾವಾ -1,64 ಲಕ್ಷ ರುಪಾಯಿ
ಜಾವಾ 42 - 1.55 ಲಕ್ಷ ರುಪಾಯಿ
ಜಾವಾ ಪೆರಾಕ್ - 1.89 ಲಕ್ಷ ರುಪಾಯಿ
(ಎಕ್ಸ್ ಶೋ ರೂಂ ಬೆಲೆ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
MumbaiಮುಂಬೈPriceRoyal Enfieldವಿಶೇಷತೆರಾಯಲ್ ಎನ್ ಫೀಲ್ಡ್ಮೊತ್ತಜಾವಾ ಬೈಕ್Jawa BikeSpecificiationsMahindra Companyಮಹೀಂದ್ರ ಸಂಸ್ಧೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


