ಇದು ಕಾರೋ ಇಲ್ಲ ಬೈಕೋ? ಆಟೋ ಎಕ್ಸ್‌ಪೊದಲ್ಲಿ ಗಮನ ಸೆಳೆದ ಯುಡೊ!
ಗ್ರೇಟರ್ ನೋಯ್ಡಾದಲ್ಲಿ ನಡೆಯುತ್ತಿರುವ 2018 ಆಟೋ ಎಕ್ಸ್‌ಪೊದಲ್ಲಿ ದೇಶದ ಹಲವು ವಾಹನ ಸಂಸ್ಥೆಗಳು ತಯಾರಿಸಿರುವ ಮುಂದಿನ ಪೀಳಿಗೆಯ....

Published On :
ನವದೆಹಲಿ: ಗ್ರೇಟರ್ ನೋಯ್ಡಾದಲ್ಲಿ ನಡೆಯುತ್ತಿರುವ 2018 ಆಟೋ ಎಕ್ಸ್‌ಪೊದಲ್ಲಿ ದೇಶದ ಹಲವು ವಾಹನ ಸಂಸ್ಥೆಗಳು ತಯಾರಿಸಿರುವ ಮುಂದಿನ ಪೀಳಿಗೆಯ ಹೊಸ ಕಾರು ಮತ್ತು ಬೈಕ್ ಗಳು ಅನಾವರಣಗೊಂಡಿದ್ದು, ಮಹಿಂದ್ರಾ ಕಂಪನಿಯ 2- ಸೀಟರ್ ಯುಡೊ ಹೆಚ್ಚು ಗಮನ ಸೆಳೆಯಿತು.
ಯುಡೊ ನೋಡಲು ತುಂಬಾ ಆಕರ್ಷವಾಗಿದ್ದು, ದ್ವಿಚಕ್ರ ಕಾರು ಮಾದರಿಯಲ್ಲಿದೆ. ಆದರೆ ಇದು ಕಾರೋ ಅಥವಾ ಬೈಕೋ ಎಂಬ ಗುಟ್ಟನ್ನು ಮಹಿಂದ್ರಾ ಕಂಪನಿ ಇನ್ನೂ ಬಿಟ್ಟುಕೊಟ್ಟಿಲ್ಲ. ಇದನ್ನು ಅಧಿಕೃತವಾಗಿ ಮಾರುಕಟ್ಟೆಗೆ ಪರಿಚಯಿಸುವ ವೇಳೆ ಯುಡೊ ಕಾರೋ ಅಥವಾ ಬೈಕೋ ಎಂಬುದುನ್ನು ಘೋಷಿಸುವುದಾಗಿ ಕಂಪನಿ ತಿಳಿಸಿದೆ.
ಆಟೋ ಎಕ್ಸ್‌ಪೊದಲ್ಲಿ ಯಮಹಾ ಕಂಪನಿಯ ಫ್ಯೂಚರಿಸ್ಟಿಕ್ ಮೊಟೊರಾಯ್ಡ್ ಬೈಕ್ ಹಾಗೂ ಟಿವಿಎಸ್ ನ ಆರ್‌ಟಿಆರ್ 200 ಎಫ್‌ಐ ಸೇರಿದಂತೆ ಹಲವು ಬೈಕ್ ಗಳು ಗಮನ ಸೆಳೆಯುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


