ವಾಹನ

ಶಿಲ್ಪಿಯ ಕೆತ್ತನೆಯಲ್ಲಿ ಮೂಡಿದ ಕೈಲಾಸ ಕಾಂಚೀಪುರದ ಕೈಲಾಸನಾಥ ದೇವಾಲಯ

ಕಾಂಚೀಪುರ ದೇವಳಗಳ ನಗರಿ, ರೇಷ್ಮೆ ಸೀರೆಗಳಿಗೆ ಪ್ರಸಿದ್ದಿ, ತಮಿಳುನಾಡಿನ ವಿಶಿಷ್ಟ ಪೊಂಗಲ್, ಕೈ ಮುರುಕು, ತೆಂಗೋಳು, ಹಲ್ಲಿಗೆ ಷಾಕ್, ಪುಳಿಯೋಗರೆಗಳಿಗೆ ಹೆಸರುವಾಸಿ.

ಶಿಲ್ಪಿಯ ಕೆತ್ತನೆಯಲ್ಲಿ ಮೂಡಿದ ಕೈಲಾಸ ಕಾಂಚೀಪುರದ ಕೈಲಾಸನಾಥ ದೇವಾಲಯ
ಕೈಲಾಸನಾಥ ದೇವಾಲಯ
Published On :
ಕಾಂಚೀಪುರ ದೇವಳಗಳ ನಗರಿ, ರೇಷ್ಮೆ ಸೀರೆಗಳಿಗೆ ಪ್ರಸಿದ್ದಿ, ತಮಿಳುನಾಡಿನ ವಿಶಿಷ್ಟ ಪೊಂಗಲ್, ಕೈ ಮುರುಕು, ತೆಂಗೋಳು, ಹಲ್ಲಿಗೆ ಷಾಕ್, ಪುಳಿಯೋಗರೆಗಳಿಗೆ ಹೆಸರುವಾಸಿ.
ಇಲ್ಲಿನ ಏಕಾಂಬರನಾಥ, ಕಾಮಾಕ್ಷಿ, ವರದರಾಜ ಪೆರುಮಾಳ್, ಕೈಲಾಸನಾಥ ದೇವಾಲಯ ಸೇರಿ ಅನೇಕ ದೇವಾಲಯಗಳು ಜನರನ್ನು ತಮ್ಮತ್ತ ಆಕರ್ಷಿಸುತ್ತದೆ.
Story image
ಇದರಲ್ಲಿಯೂ ಕೈಲಾಸನಾಥ ದೇವಾಲಯ ಶಿಲ್ಪಕಲೆ ಕುಸುರಿ ಕೆತ್ತನೆಗಳಿಂದ ಪ್ರವಾಸಿಗರ ಮನಸೂರೆಗೊಳ್ಳುತ್ತದೆ. ಭಾರತದಲ್ಲಿನ ಮೂರು ಪ್ರಮುಖ ಕೈಲಾಸನಾಥ ಮಂದಿರಗಳಲ್ಲಿ ಇದೂ ಒಂದು (ಇನ್ನೆರಡು ದೇವಾಲಯಗಳು ಕ್ರಮವಾಗಿ ಮಹಾರಾಷ್ಟ್ರದ ಎಲ್ಲೋರಾ ಹಾಗೂ ತಮಿಳುನಾಡಿನ ಉತ್ತಿರೂರು ಎನ್ನುವಲ್ಲಿದೆ)
Story image
ಕಾಂಚೀಪುರದಲ್ಲಿ ಪಲ್ಲವರಿಂದ ನಿರ್ಮಿತವಾಗಿರುವ ಈ ದೇವಾಲಯ ಸುಮಾರು 1200 ವರ್ಷಗಳಷ್ಟು ಹಳೆಯದು. ಪಲ್ಲವ ರಾಜ 2ನೆಯ ನರಸಿಂಹ ವರ್ಮ ನಿರ್ಮಾಣ ಮಾಡಿದ್ದ ಈ ದೇವಾಲಯ ಎದುರಿನ ಗೋಪುರ ಹಾಗೂ ಬಸವ ಅತ್ಯಂತ ಆಕರ್ಷಕವಾಗಿದೆ
Story image
ಸುಂದರವಾದ ಗರ್ಭಗುಡಿಯ ಮೇಲಿರುವ ವಿಮಾನ, ಕಂಬಗಳಿಂದ ಕೂಡಿದ ಮಂಟಪ, ಮುಂಭಾಗ ಮತ್ತು ಸುತ್ತಲೂ ಪ್ರಾಕಾರದಲ್ಲಿರುವ 58 ಪುಟ್ಟ ಗುಡಿಗಳೂ ಅವುಗಳಲ್ಲಿರುವ ಮೆದುವಾದ ಮರಳುಗಲ್ಲಿನಿಂದ ಮಾಡಲ್ಪಟ್ಟಿರುವ ಶಿವ ವಿಗ್ರಹಗಳೂ ಈ ದೇವಾಲಯದ ಹಿರಿಮೆಯ ಪ್ರತೀಕಗಳು. ಮೊದಲಿಗೆ ಈ ವಿಗ್ರಹಗಳನ್ನು ಅಲಂಕರಿಸಲು ಬಳಸಿದ ಆ ಬಣ್ಣಗಳ ಚಿಹ್ನೆಗಳು ಮಾತ್ರ ಈಗ ಉಳಿದುಬಂದಿದೆ.
ಒಂದು ಐತಿಹ್ಯದ ಪ್ರಕಾರ, ರಾಜ ರಾಜ ಚೋಳ ಈ ದೇವಸ್ಥಾನಕ್ಕೆ ಭೇಟಿ ನೀಡಿದ ಮೇಲೆಯೇ ತಂಜಾವೂರಿನಲ್ಲಿ ಬೃಹದೀಶ್ವರ ದೇವಸ್ಥಾನ ಸ್ಥಾಪಿಸಲು ಸ್ಪೂರ್ತಿ ದೊರೆಯಿತು ಎನ್ನಲಾಗುತ್ತದೆ.
Story image
ದೇವಾಲಯದ ಮುಂಭಾಗದಲ್ಲಿ ಹಲವಾರು ಪುಟ್ಟ ಗುಡಿಗಳಿವೆ ಮತ್ತು ಕೋಷ್ಟಕಗಳಿದ್ದು ಅದರಲ್ಲಿ ಶಿವಲಿಂಗಗಳಿವೆ.ಒಳಾಂಗಣದ ಭಿತ್ತಿಯಲ್ಲಿ ಸಾಲು ಸಾಲು ಕಂಭಗಳು, ಎಲ್ಲೆಲ್ಲು ನೋಡಿದರೂ ಸಿಂಹಗಳ ಚಿತ್ರ! ದೊಡ್ಡ ಸಿಂಹಗಳು ಬಾಯ್ದೆರೆದು ನಮ್ಮನ್ನು ನೋಡುತ್ತದೆ!
ಮಧ್ಯದಲ್ಲಿರುವ ಕೈಲಾಸನಾಥನ ಆಲಯದ ಗೋಪುರ ಸಾಧಾರಣ ಎತ್ತರವಿದೆ. ಗರ್ಭಗೃಹದಲ್ಲಿ ಕರಿಶಿಲೆಯಲ್ಲಿ ಕೆತ್ತಿದ ದೊಡ್ಡ ಶಿವಲಿಂಗವಿದೆ. ಬಹಳ ಸುಂದರವಾಗಿದೆ. ಇಲ್ಲೇ ಪಕ್ಕದ ಗೋಡೆಗೆ ಒರಗಿಸಿರುವ ಭಿನ್ನವಾಗಿರುವ ಬಹಳ ದೊಡ್ಡ ಪಾಣಿ ಪೀಠ ಒಂದನ್ನು ಇರಿಸಿದ್ದಾರೆ. ಇದು ಮುರುಕಲು ಆದ್ದರಿಂದ ಪೂಜೆಗೆ ಯೋಗ್ಯವಲ್ಲ. ಅದರ ಗಾತ್ರ ನೋಡಿಯೇ ಅಚ್ಚರಿಪಡಬೇಕು. 
Story image
ದೇವಾಲಯ ಪ್ರಾಕಾರದಲ್ಲಿ ಶಬರ ಶಂಕರ ವಿಳಾಸದ ಚಿತ್ರಗಳು ಕಣ್ಣಿಗೆ ಕಟ್ಟಿದಂತಿದೆ ಒಟ್ಟಾರೆ ಪಲ್ಲವ ಶಿಲ್ಪಕಲಾ ವೈಭವಕ್ಕೆ ಈ ದೇವಾಲಯ ಸಾಕ್ಷಿಯಾಗಿದೆ.  ಭಾರತದಲ್ಲಿ ಬೇರಾವ ದೇವಾಲಯದಲ್ಲಿಯೂ ಸಿಕ್ಕದ ಶಿವನ 64 ಕಲಾ ವೈಭವಯುತ ರೂಪವನ್ನು ಈ ದೇವಾಲಯದಲ್ಲಿ ಮಾತ್ರ ಕಾಣಬಹುದು. 
ಇನ್ನು ಈ ದೇವಾಲಯದಲ್ಲಿ ಕಂಬವೊಂದರ ಮೇಲೆ ಚಾಲುಕ್ಯ ಅರಸ 2ನೆಯ ವಿಕ್ರಮಾದಿತ್ಯ ಕಂಚಿಯನ್ನು ಗೆದ್ದಾಗ ಕೆತ್ತಿಸಿದ ಕನ್ನಡ ಶಾಸನ ಇರುವುದು ಗಮನಾರ್ಹ ಸಂಗತಿ.
-ರಾಘವೇಂದ್ರ ಅಡಿಗ ಎಚ್ಚೆನ್.
raghavendraadiga1000@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.