ನೋಟು ನಿಷೇಧ ಪರಿಣಾಮ: ಕಾರುಗಳ ಮಾರಾಟದಲ್ಲಿ ಚೇತರಿಕೆ, ದ್ವಿಚಕ್ರ ವಾಹನ ಮಾರಾಟ ಕುಸಿತ!
ನೋಟು ನಿಷೇಧವಾಗಿ ನಾಲ್ಕು ತಿಂಗಳ ನಂತರ ಕಾರುಗಳ ಮಾರಾಟದಲ್ಲಿ ಚೇತರಿಕೆ ಕಂಡಿದ್ದರೆ, ದ್ವಿಚಕ್ರ ವಾಹನಗಳ ಮಾರಾಟ ಇನ್ನೂ ಚೇತರಿಕೆ ಕಂಡಿಲ್ಲ

Published On :
ಚೆನ್ನೈ: 500, 1000 ರೂ ಮುಖಬೆಲೆಯ ನೋಟು ನಿಷೇಧದ ನಂತರ ದ್ವಿಚಕ್ರ ವಾಹನ, ಕಾರುಗಳ ಮಾರಾಟ ಕುಸಿದಿತ್ತು. ನೋಟು ನಿಷೇಧವಾಗಿ ನಾಲ್ಕು ತಿಂಗಳ ನಂತರ ಕಾರುಗಳ ಮಾರಾಟದಲ್ಲಿ ಚೇತರಿಕೆ ಕಂಡಿದ್ದರೆ, ದ್ವಿಚಕ್ರ ವಾಹನಗಳ ಮಾರಾಟ ಇನ್ನೂ ಚೇತರಿಕೆ ಕಂಡಿಲ್ಲ ಎಂದು ಇಂಡಿಯನ್ ಆಟೋಮೊಬೈಲ್ ಉತ್ಪಾದಕರ ಸೊಸೈಟಿ ಮಾಹಿತಿ ನೀಡಿದೆ.
ಫೆಬ್ರವರಿ ತಿಂಗಳಲ್ಲಿ ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಶೇ.9.01 ರಷ್ಟು ಏರಿಕೆಯಾಗಿದ್ದು ಕಳೆದ ವರ್ಷ ಇದೇ ತಿಂಗಳಲ್ಲಿ 2,34,244 ಯುನಿಟ್ ನಷ್ಟು ವಾಹನಗಳು ಮಾರಾಟವಾಗಿದ್ದರೆ ಈ ವರ್ಷದ ಫೆಬ್ರವರಿಯಲ್ಲಿ 2,55,359 ಯುನಿಟ್ ನಷ್ಟು ವಾಹನಗಳು ಮಾರಾಟವಾಗಿವೆ ಎಂದು ಎಸ್ಐಎಎಂ ಹೇಳಿದೆ.
ದೇಶೀಯ ಕಾರು ಮಾರಾಟ ವ್ಯಾಪರದಲ್ಲಿ ಶೇ.4.9 ರಷ್ಟು ಏರಿಕೆಯಾಗಿದ್ದು ಕಳೆದ ವರ್ಷ 1,64,559 ಯುನಿಟ್ ನಷ್ಟು ವಾಹನಗಳು ಮಾರಾಟವಾಗಿದ್ದರೆ, ಈ ವರ್ಷದ ಫೆಬ್ರವರಿಯಲ್ಲಿ 1,72,623 ಯುನಿಟ್ ನಷ್ಟು ವಾಹನಗಳು ಮಾರಾಟವಾಗಿದೆ. ನೋಟು ನಿಷೇಧದ ನಂತರದ ತಿಂಗಳಲ್ಲಿ ಅಂದರೆ 2016 ರ ಡಿಸೆಂಬರ್ ನಲ್ಲಿ ಶೇ.4.4 ರಷ್ಟು ಕುಸಿತ ಕಂಡಿತ್ತು. ಆದರೆ ಜನವರಿಯಲ್ಲಿ ಶೇ.14.4 ರಷ್ಟು ಏರಿಕೆಯಾಗುವ ಮೂಲಕ ಚೇತರಿಕೆ ಕಂಡಿತ್ತು. ನೋಟು ನಿಷೇಧದ ಪರಿಣಾಮದಿಂದ ಕಾರುಗಳ ಮಾರಾಟ ಚೇತರಿಕೆ ಕಂಡಿದೆಯಾದರೂ ದ್ವಿಚಕ್ರ ವಾಹನ, ಬೈಕ್ ಗಳ ಮಾರಾಟ ಇನ್ನೂ ಚೇತರಿಕೆ ಕಂಡಿಲ್ಲ. ಕಳೆದ ವರ್ಷದ ಫೆಬ್ರವರಿಯಲ್ಲಿ 8,59,582 ಯುನಿಟ್ ನಷ್ಟು ಮಾರಾಟವಾಗಿದ್ದ ದ್ವಿಚಕ್ರವಾಹನಗಳು ಈ ವರ್ಷದ ಫೆಬ್ರವರಿಯಲ್ಲಿ ಕೇವಲ 8,32,697 ಯುನಿಟ್ ಗಳಿಗಷ್ಟೇ ಸೀಮಿತವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Note-ban impactCars salesSociety of Indian Automobile Manufacturersನೋಟು ನಿಷೇಧ ಪರಿಣಾಮಕಾರು ಮಾರಾಟಇಂಡಿಯನ್ ಆಟೋಮೊಬೈಲ್ ಉತ್ಪಾದಕರ ಸೊಸೈಟಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


