ಏರ್‌ಬ್ಯಾಗ್ಸ್ ದೋಷ: ಭಾರತದಾದ್ಯಂತ 41,580 ಕಾರುಗಳನ್ನು ಹಿಂಪಡೆಯಲಿರುವ ಹೊಂಡಾ
ದೋಷಯುಕ್ತ ಗಾಳಿಚೀಲ ಬಳಕೆ ಹಿನ್ನೆಲೆಯಲ್ಲಿ ಜಪಾನಿನ ಆಟೋ ಮೊಬೈಲ್ ನಲ್ಲಿ ಅಗ್ರಮಾನ್ಯ ಸ್ಥಾನದಲ್ಲಿರುವ ಹೊಂಡಾ ಭಾರತದಾದ್ಯಂತ ಹೊಂಡಾ ಸಂಸ್ಥೆಯ ಹಲವು...

Published On :
ನವದೆಹಲಿ: ದೋಷಯುಕ್ತ ಗಾಳಿಚೀಲ ಬಳಕೆ ಹಿನ್ನೆಲೆಯಲ್ಲಿ ಜಪಾನಿನ ಆಟೋ ಮೊಬೈಲ್ ನಲ್ಲಿ ಅಗ್ರಮಾನ್ಯ ಸ್ಥಾನದಲ್ಲಿರುವ ಹೊಂಡಾ ಭಾರತದಾದ್ಯಂತ ಹೊಂಡಾ ಸಂಸ್ಥೆಯ ಹಲವು ಮಾಡೆಲ್ ಕಾರುಗಳನ್ನು ಹಿಂಪಡೆಯಲಿದೆ.
ಹೊಂಡಾ ಕಾರ್ ಭಾರತ ಲಿಮಿಟೆಡ್(ಎಚ್‌ಸಿಐಎಲ್) ಮೂಲಕ ಹೊಂಡಾ ಸಂಸ್ಥೆ ಭಾರತದಲ್ಲಿ ಮಾರಾಟ ಮಾಡುತ್ತಿದೆ. 2012ರಲ್ಲಿ ತಯಾರಿಸ್ಪಟ್ಟಿದ್ದ ಜಾಸ್, ಸಿಟಿ, ಸಿವಿಕ್ ಮತ್ತು ಅಕಾರ್ಡ್ ಮಾಡೆಲ್ ಗಳಲ್ಲಿ ದೋಷಯುಕ್ತ ಗಾಳಿಚೀಲಗಳನ್ನು ಅಳವಡಿಸಲಾಗಿದ್ದು ಈ ಹಿನ್ನೆಲೆ 41,580 ಕಾರುಗಳನ್ನು ಹಿಂಪಡೆದು ಪುನಃ ಗಾಳಿಚೀಲಗಳನ್ನು ಅಳವಡಿಸಲಾಗುವುದು ಎಂದು ಎಚ್‌ಸಿಐಎಲ್ ಹೇಳಿದೆ.
ಸಂಸ್ಥೆ ಪ್ರಕಾರ, ಸೆಡಾನ್ ಅಕಾರ್ಡ್ ಸಂಸ್ಥೆಯ 659 ಕಾರು, ಹೊಂಡಾ ಸಿಟಿ ಯುನಿಟ್ ನ 32,456 ಕಾರು, ಜಾಸ್ ಯುನಿಟ್ ನ 7,265 ಕಾರು, ಸಿವಿಕ್ ನ 1,200 ಕಾರನ್ನು ಸಂಸ್ಥೆ ಹಿಂಪಡೆಯಲಿದ್ದು, ಬದಲಿ ಗಾಳಿ ಚೀಲಗಳನ್ನು ಅಳವಡಿಸಲಿದೆ.
ಕಳೆದ ವರ್ಷ ಜುಲೈನಲ್ಲಿ ಎಚ್‌ಸಿಐಎಲ್ ಸಂಸ್ಧೆ ಗಾಳಿಚೀಲ ದೋಷ ಹಿನ್ನೆಲೆ 1,90,578 ಕಾರುಗಳನ್ನು ಹಿಂಪಡೆದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


