ವಾಹನ

ಬಿಎಸ್-III ನಿಷೇಧದಿಂದ ವಾಣಿಜ್ಯ ವಾಹನ ಉತ್ಪಾದನಾ ಸಂಸ್ಥೆಗಳಿಗೆ 2500 ಕೋಟಿ ರೂ ನಷ್ಟ: ಕ್ರಿಸಿಲ್

ಭಾರಿ ರಿಯಾಯಿತಿ ದರದಲ್ಲಿ ಬಿಎಸ್ 3 ವಾಹನಗಳನ್ನು ಮಾರಾಟ ಮಾಡಿದ್ದ ವಾಹನ ಉತ್ಪಾದನಾ ಸಂಸ್ಥೆಗಳಿಗೆ 2500 ಕೋಟಿ ರೂ ನಷ್ಟ ಉಂಟಾಗಲಿದೆ ಎಂದು ವರದಿಯೊಂದು ಹೇಳಿದೆ.

ಬಿಎಸ್-III ನಿಷೇಧದಿಂದ ವಾಣಿಜ್ಯ ವಾಹನ ಉತ್ಪಾದನಾ ಸಂಸ್ಥೆಗಳಿಗೆ 2500 ಕೋಟಿ ರೂ ನಷ್ಟ: ಕ್ರಿಸಿಲ್
ಬಿಎಸ್-III ನಿಷೇಧದಿಂದ ವಾಣಿಜ್ಯ ವಾಹನ ಉತ್ಪಾದನಾ ಸಂಸ್ಥೆಗಳಿಗೆ 2500 ಕೋಟಿ ರೂ ನಷ್ಟ: ಕ್ರಿಸಿಲ್
Published On :
ಮುಂಬೈ: ಏಪ್ರಿಲ್ 1 ರಿಂದ ಬಿಎಸ್ 3 ವಾಹನಗಳ ನೋಂದಣಿ ಮತ್ತು ಮಾರಾಟವನ್ನು ನಿಷೇಧ ಆದೇಶದ ನಂತರ ಭಾರಿ ರಿಯಾಯಿತಿ ದರದಲ್ಲಿ ಬಿಎಸ್ 3 ವಾಹನಗಳನ್ನು ಮಾರಾಟ ಮಾಡಿದ್ದ ವಾಹನ ಉತ್ಪಾದನಾ ಸಂಸ್ಥೆಗಳಿಗೆ 2500 ಕೋಟಿ ರೂ ನಷ್ಟ ಉಂಟಾಗಲಿದೆ ಎಂದು ವರದಿಯೊಂದು ಹೇಳಿದೆ. 
ಸಂಶೋಧನಾ ಸಂಸ್ಥೆ ಕ್ರಿಸಿಲ್ ಈ ಬಗ್ಗೆ ವರದಿ ಪ್ರಕಟಿಸಿದ್ದು, ರಿಯಾಯಿತಿ ದರದಲ್ಲಿ ಈಗಾಗಲೇ ವಾಹನಗಳನ್ನು ಮಾರಟ ಮಾಡಿರುವುದರಿಂದ 1,200 ಕೋಟಿ ನಷ್ಟವಾಗಿದೆ. ಇನ್ನು ಮಾರಾಟವಾಗದೇ ಉಳಿದಿರುವ ವಾಹನಗಳಿಂದ  1,300 ಕೋಟಿ ರೂಪಾಯಿ ನಷ್ಟ ಉಂತಾಗಲಿದ್ದು, ಒಟ್ಟು 2,500 ಕೋಟಿ ರೂ ನಷ್ಟವಾಗಲಿದೆ ಎಂದು ಕ್ರಿಸಿಲ್ ಅಂದಾಜಿಸಿದ್ದು ವಾಹನ ತಯಾರಿಕಾ ಸಂಸ್ಥೆಗಳ ಒಟ್ಟಾರೆ ಲಾಭದಲ್ಲಿ ಶೇ.2.5 ರಷ್ಟು ನಷ್ಟವಾಗಲಿದೆ. 
ಮಾರಾಟವಾಗದೇ ಉಳಿದ ವಾಹನಗಳನ್ನು ಡೀಲರ್ ಗಳಿಂದ ವಾಪಸ್ ತಂದು ನಂತರ ಅದಕ್ಕೊಂದು ವ್ಯವಸ್ಥೆ ಮಾಡಬೇಕಿರುವುದರಿಂದ  2017-18 ನೇ ಸಾಲಿನ ಆರ್ಥಿಕ ವರ್ಶದ ಮೇಲೆಯೂ ಬಿಎಸ್-III ನಿಷೇಧ ಹಾಗೂ ರಿಯಾಯಿತಿ ದರದಲ್ಲಿ ವಾಹನಗಳ ಮಾರಾಟ ಪರಿಣಾಮ ಬೀರಲಿದೆ ಎಂದು ಕ್ರಿಸಿಲ್ ವಿಶ್ಲೇಷಿಸಿದೆ.
ಈಗಷ್ಟೇ ಮುಕ್ತಾಯಗೊಂಡಿರುವ 2016-17 ಆರ್ಥಿಕ ವರ್ಷಕ್ಕೆ ಬಿಎಸ್-III ನಿಷೇಧದಿಂದ ಇಬಿಐಟಿಡಿಎ ಮಾರ್ಜಿನ್ 100 ಬಿಪಿಎಸ್ ಕಡಿಮೆಯಾಗಲಿದೆ ಎಂದು ಕ್ರಿಸಿಲ್ ಹೇಳಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.