ಕರಾವಳಿ ಜಿಲ್ಲೆಗಳ ಸೌಂದರ್ಯಕ್ಕೆ ಮುಕುಟವಾದ ಮ್ಯಾಂಗ್ರೋವ್ ಅರಣ್ಯ
ಕರಾವಳಿ ಜಿಲ್ಲೆ ಮಂಗಳೂರಿಗೆ ಪ್ರವಾಸಕ್ಕೆ ಹೋಗುವವರಿಗೆ ಅಲ್ಲಿ ವೀಕ್ಷಣೆಗೆ ಎಲ್ಲಾ ರೀತಿಯ ಸ್ಥಳಗಳು...

Published On :
ಮಂಗಳೂರು: ಕರಾವಳಿ ಜಿಲ್ಲೆ ಮಂಗಳೂರಿಗೆ ಪ್ರವಾಸಕ್ಕೆ ಹೋಗುವವರಿಗೆ ಅಲ್ಲಿ ವೀಕ್ಷಣೆಗೆ ಎಲ್ಲಾ ರೀತಿಯ ಸ್ಥಳಗಳು ಸಿಗುತ್ತವೆ. ಹಲವು ಪ್ರಸಿದ್ಧ ಧಾರ್ಮಿಕ ಸ್ಥಳಗಳು, ಐತಿಹಾಸಿಕ ಕೇಂದ್ರಗಳು, ಸಮುದ್ರ ಕಿನಾರೆ, ಪಕ್ಷಿಧಾಮ, ವನ್ಯಮೃಗ ಕೇಂದ್ರ ಹೀಗೆ ವೈವಿಧ್ಯಮಯ ಸ್ಥಳಗಳು ನೋಡಲು ಸಿಗುತ್ತವೆ. ಇದರ ಜೊತೆಗೆ ಮತ್ತೊಂದು ಆಕರ್ಷಣೆ ಮ್ಯಾಂಗ್ರೋವ್ ಪ್ರವಾಸೋದ್ಯಮ.
ಮಂಗಳೂರಿನಿಂದ ಕಾರವಾರದ ಮಜಾಲಿವರೆಗೆ 306 ಕಿಲೋ ಮೀಟರ್ ದೂರದವರೆಗೆ ಮ್ಯಾಂಗ್ರೋವ್ ಗಳನ್ನು ಮರು ಸ್ಥಾಪಿಸಲು 2011ರಲ್ಲಿ ರಾಜ್ಯ ಸರ್ಕಾರದ ಅರಣ್ಯ ಇಲಾಖೆ ಹಸಿರು ಗೋಡೆ ಯೋಜನೆಯನ್ನು ಆರಂಭಿಸಿತ್ತು. ಸಮುದ್ರದ ದಡದಲ್ಲಿ ಮಣ್ಣಿನ ಸವಕಳಿ ಮತ್ತು ಸುನಾಮಿಯನ್ನು ತಡೆಗಟ್ಟುವುದು ಈ ಯೋಜನೆಯ ಉದ್ದೇಶ. ಇದು ಪಶ್ಚಿಮ ಕರಾವಳಿಯಲ್ಲಿ ಅತಿ ದೊಡ್ಡದಾದ ಮ್ಯಾಂಗ್ರೋವ್ ಅರಣ್ಯವಾಗಿದ್ದು ಮುಂದಿನ ತಿಂಗಳುಗಳಲ್ಲಿ ಇದನ್ನು ವಿಸ್ತರಿಸಲು ಅರಣ್ಯ ಇಲಾಖೆ ಕಾರ್ಯನಿರ್ವಹಿಸುತ್ತಿದೆ. ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳ ಅರಣ್ಯಾಧಿಕಾರಿಗಳು ಕೂಡ ಮ್ಯಾಂಗ್ರೋವ್ ಯೋಜನೆಯನ್ನು ತಮ್ಮ ರಾಜ್ಯಗಳಲ್ಲಿ ಜಾರಿಗೆ ತರಲು ನೋಡುತ್ತಿವೆ.
ಯೋಜನೆ ಆರಂಭಗೊಂಡಲ್ಲಿಂದ ಇಲ್ಲಿಯವರೆಗೆ ಮ್ಯಾಂಗ್ರೋವ್ ಅರಣ್ಯ ರಾಜ್ಯದ ಕರಾವಳಿ ಜಿಲ್ಲೆಯಲ್ಲಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಗೋವಾಕ್ಕೆ ಬರುವ ದೇಶ, ವಿದೇಶಗಳ ಪ್ರವಾಸಿಗರು ಇದೀಗ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಉಡುಪಿಯ ಬೈಂದೂರು, ದಕ್ಷಿಣ ಕನ್ನಡದ ಶಾಂಭವಿ ಮತ್ತು ಉಲ್ಲಾಳ ನದಿಗಳತ್ತಲೂ ಆಗಮಿಸುತ್ತಿದ್ದಾರೆ. ಇಲ್ಲಿ ದೋಣಿಗಳಲ್ಲಿ ಸವಾರಿ ಮಾಡಿ ಮ್ಯಾಂಗ್ರೋವ್ ಅರಣ್ಯಗಳ ಸೌಂದರ್ಯವನ್ನು ಸವಿಯುತ್ತಾರೆ. ಇದಿನ್ನೂ ಪ್ರವಾಸೋದ್ಯಮದ ಮುಖ್ಯವಾಹಿನಿಗೆ ಬರಬೇಕಷ್ಟೆ. ಆದರೆ ಅದು ಉತ್ತಮ ಪ್ರೇಕ್ಷಣೀಯ ಸ್ಥಳವಾಗುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ ಅಧಿಕಾರಿಗಳು ಮತ್ತು ಸುತ್ತಮುತ್ತಲ ಪ್ರಮುಖರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


