ವಾಹನ

ಬಿಎಂಡಬ್ಲ್ಯು ನಿಂದ ವಿಷನ್ ನೆಕ್ಸ್ಟ್ 100 ಕಾನ್ಸೆಪ್ಟ್ ಕಾರು

ನೂರನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಬಿಎಂಡಬ್ಸ್ಯು, ವಿಷನ್ ನೆಕ್ಸ್ಟ್ 100 ಎಂಬ ಹೆಸರಿನ ನೂತನ ಕಾನ್‌ಸೆಪ್ಟ್ ಕಾರೊಂದನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ...

ಬಿಎಂಡಬ್ಲ್ಯು ನಿಂದ ವಿಷನ್ ನೆಕ್ಸ್ಟ್ 100 ಕಾನ್ಸೆಪ್ಟ್  ಕಾರು
ಬಿಎಂಡಬ್ಸ್ಯು ವಿಷನ್ ನೆಕ್ಸ್ಟ್ 100 ಕಾನ್ಸೆಪ್ಟ್ ಕಾರು
Published On :
ಮುನಿಚ್: ನೂರನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಜರ್ಮನಿಯ ಐಷಾರಾಮಿ ಕಾರು ಕಂಪನಿ ಬಿಎಂಡಬ್ಸ್ಯು, ವಿಷನ್ ನೆಕ್ಸ್ಟ್ 100 ಎಂಬ ಹೆಸರಿನ ನೂತನ ಕಾನ್‌ಸೆಪ್ಟ್ ಕಾರೊಂದನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ.
ಹೆಸರೇ ಹೇಳುವಂತೆ 100 ವರುಷದ ನಂತರ ಆಟೋ ಮೊಬೈಲ್ ಇಂಡಸ್ಟ್ರಿ ಹೇಗಿರಬಹುದು ಎಂಬ ಸೂಚನೆ ನೀಡುವ ರೀತಿಯಲ್ಲಿ ಕಾನ್‌ಸೆಪ್ಟ್ ಕಾರನ್ನು ತಯಾರಿಸಲಾಗಿದೆ ಎಂದು ಕಂಪನಿ ಹೇಳಿದೆ. ಈ ಹಿಂದೆ ಬಂದ ಎಲ್ಲ ಮಾಡೆಲ್‌ಗಳಿಂದ ವಿಶಿಷ್ಟವಾಗಿ ಈ ಕಾನ್‌ಸೆಪ್ಟ್ ಮಾಡೆಲ್ ಸಿದ್ಧಪಡಿಸಲಾಗುತ್ತಿದೆ.
ಇಲ್ಲಿ ಹೆಡ್‌ಲೈಟ್‌ಗಳ ಬದಲಿಗೆ  ಎರಡು  ಹೆಡ್‌ಲ್ಯಾಂಪ್ ಗಳನ್ನು ಬಳಸಲಾಗಿದ್ದು, ಭವಿಷ್ಯದ ಕಾರುಗಳು ಸ್ವಯಂ ನಿಯಂತ್ರಿತ ಕಾರುಗಳಾಗಲಿವೆ. ಇವುಗಳಿಗೆ ಮುನ್ನುಡಿ ಬರೆಯುವಂತಿದೆ ಬಿಎಂಡಬ್ಲ್ಯು ವಿಷನ್ ನೆಕ್ಸ್ಟ್ 100 ಕಾನ್ಸೆಪ್ಟ್  ಕಾರಿನ ಸ್ಟಿಯರಿಂಗ್ ವ್ಯವಸ್ಥೆ. ಸ್ಟಿಯರಿಂಗ್ ವೀಲ್ ಮತ್ತು ಪೆಡಲ್ ವ್ಯವಸ್ಥೆ ಇಲ್ಲಿದೆ. ನಾವು ಕಾರು ಚಲಾಯಿಸದೇ ಇದ್ದಾಗ ಈ ಸ್ಟಿಯರಿಂಗ್ ವೀಲ್‌ನ್ನು  ಡ್ಯಾಶ್ ಬೋರ್ಡ್‌ನಲ್ಲಿಟ್ಟರೆ, ಕಾರು ತನ್ನಿಂದತಾನೇ ಚಲಿಸುತ್ತದೆ. ಸಾಹಸ ಇಷ್ಟ ಪಡುವವರಿಗೆ ಬೂಸ್ಟ್ ಮೋಡ್ ಎಂಬ ಹೆಸರಿನ ಸ್ಫೋರ್ಟ್ಸ್ ಡ್ರೈವ್ ಮೋಡ್ ಕೂಡಾ ಇಲ್ಲಿದೆ.
ದೊಡ್ಡದಾದ ವಿಂಡ್ ಸ್ಕ್ರೀನ್, ಹೆಡ್ ಅಪ್ ಡಿಸ್‌ಪ್ಲೇ ಉತ್ಕೃಷ್ಟವಾಗಿದೆ. ಇದರ ಇಂಜಿನ್ ಯಾವುದೆಂದು ಬಿಎಂಡಬ್ಲ್ಯು ಬಹಿರಂಗ ಪಡಿಸಿಲ್ಲ. ಆದರೆ ಇದು ಪರಿಸರ ಸ್ನೇಹಿ ಕಾರು ಆಗಲಿದೆ ಎಂದು ಹೇಳಲಾಗುತ್ತಿದೆ. ಮುಂದಿನ ವರ್ಷ ಈ ಮಾಡೆಲ್ ನ ಕಾರು ನಿರ್ಮಾಣ ಆರಂಭವಾಗಲಿದೆ ಎಂದು ಬಲ್ಲಮೂಲಗಳು ಹೇಳಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.