ವಾಹನ

ಮರೆಯಾದ ನೆನಪುಗಳನ್ನು ಮೆಲುಕು ಹಾಕುತ್ತಿರುವ ಕೊಡಗಿನ ಅರಮನೆ

ಪ್ರಕೃತಿ ಸೌಂದರ್ಯದ ಖಜಾನೆಯನ್ನೇ ಹೊಂದಿರುವ ಮಡಿಕೇರಿಯಲ್ಲಿ ಶತಮಾನಗಳ ಕಾಲ ಅರಮನೆಯೊಂದು ಮನರೆಯಾದ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡುತ್ತಿದ್ದು...

ಮರೆಯಾದ ನೆನಪುಗಳನ್ನು ಮೆಲುಕು ಹಾಕುತ್ತಿರುವ ಕೊಡಗಿನ ಅರಮನೆ
ನಾಲ್ಕುನಾಡು ಅರಮನೆ
Published On :

ಮಡಿಕೇರಿ: ಪ್ರಕೃತಿ ಸೌಂದರ್ಯದ ಖಜಾನೆಯನ್ನೇ ಹೊಂದಿರುವ ಮಡಿಕೇರಿಯಲ್ಲಿ ಶತಮಾನಗಳ ಕಾಲ ಅರಮನೆಯೊಂದು ಮನರೆಯಾದ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡುತ್ತಿದ್ದು, ಪ್ರವಾಸಿಗರ ಗಮನ ಸೆಳೆಯುತ್ತಿದೆ.

ಮಾನ್ಸೂನ್ ಮಾಸ ಮಡಿಕೇರಿಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದ್ದು, ಇಲ್ಲಿರುವ ಆಕರ್ಷಣೀಯ ತಾಣಗಳ ಪೈಕಿ ನಾಲ್ಕುನಾಡು ಅರಮನೆ ಪ್ರವಾಸಿಗರ ಗಮನವನ್ನು ಹೆಚ್ಚು ಸೆಳೆಯುವಂತೆ ಮಾಡಿದೆ.

 18ನೇ ಶತಮಾನದಲ್ಲಿ ದೊಡ್ಡವೀರ ರಾಜೇಂದ್ರ ಅವರು ನಿರ್ಮಿಸಿರುವ ನಾಲ್ಕುನಾಡು ಅರಮನೆ ಮಡಿಕೇರಿಯಿಂದ 30 ಕಿ.ಮೀಗಳ ದೂರದ ಯುವಕಪಾಡಿ ಗ್ರಾಮದಲ್ಲಿದೆ. ಕೊಡಗಿನ ಅತ್ಯಂತ ಎತ್ತರ ಬೆಟ್ಟವಾದ ತಡಿಯಂಡಮೋಳ್ ಬೆಟ್ಟಶ್ರೇಣಿಗಳ ನಡುವೆ ಯುವಕಪಾಡಿ ಗ್ರಾಮದ ಎತ್ತರವಾದ ಗುಡ್ಡದ ಮೇಲೆ ನಾಲ್ಕುನಾಡು ಅರಮನೆ ನಿರ್ಮಾಣವಾಗಿದ್ದು, ದಟ್ಟ ಕಾನನದ ನಡುವೆ ಅಂದಿನ ರಾಜ ಅರಮನೆಯನ್ನೇಕೆ ನಿರ್ಮಾಣ ಮಾಡಿದರು ಎಂಬ ಕುತೂಹಲದ ಪ್ರಶ್ನೆಗಳಿಗೆ ಈ ಅರಮನೆ ತನ್ನದೇ ಆದ ಇತಿಹಾಸ ಕಥೆಯನ್ನು ಹೇಳುತ್ತದೆ.

ಅರಮನೆಯ ಮುಂಭಾಗದಲ್ಲಿ ಚೌಕಾಕಾರದ ಕಿರುಮಂಟಪವಿದ್ದು, ಇದಕ್ಕೆ ನಾಲ್ಕು ಪ್ರವೇಶ ದ್ವಾರಗಳಿವೆ. ಮಂಟಪದ ಮೇಲ್ಭಾಗದಲ್ಲಿ ನಾಲ್ಕು ದಿಕ್ಕಿಗೂ ಮಲಗಿರುವ ಬಸವನ ಮೂರ್ತಿಯಿದೆ. ಈ ಕಿರುಮಂಟಪವನ್ನು ವಿವಾಹಮಂಟಪವೆಂದೇ ಹೇಳಲಾಗುತ್ತದೆ. ಇದೇ ಮಂಟಪದಲ್ಲಿ 1796ರಲ್ಲಿ ದೊಡ್ಡವೀರರಾಜೇಂದ್ರ ಮತ್ತು ಮಹದೇವಮ್ಮಾಜಿಯವರ ವಿವಾಹವಾಗಿತ್ತು ಎನ್ನಲಾಗಿದೆ.

ಹೆಂಚಿನ ಹೊದಿಕೆ ಹೊಂದಿರುವ ಈ ಅರಮನೆಯ ನೆಲವನ್ನು ಮರದಲ್ಲಿ ಕಲೆಗಳ ಕೆತ್ತನೆಯೊಂದಿನ ನಿರ್ಮಾಣ ಮಾಡಲಾಗಿದೆ. ಇನ್ನು ಕೆಲ ಗೋಡೆಗಳಲ್ಲಿ ರಾಜಸ್ಥಾನ ಮತ್ತು ಮೈಸೂರು ಮೂಲದ ಕಲಾವಿದರು ಪ್ರಕೃತಿಯ ಸೌಂದರ್ಯವನ್ನು ಬಿಂಬಿಸುವ ಕಲೆಗಳನ್ನು ಸುಣ್ಣದಿಂದ ಕೆತ್ತನೆ ಮಾಡಿದ್ದು, ಚಿತ್ರಗಳಲ್ಲಿ ಪೌರಾಣಿಕ ಪಕ್ಷಿಯಾಗಿರುವ ಎರಡು ತಲೆಯ ಗಂಡಬೇರುಂಡ, ಆನೆ ಮತ್ತು ಸಿಂಹಗಳು ಕಂಡುಬಂದಿದೆ. ಇದೇ ರೀತಿಯ ವಾಸ್ತುಶಿಲ್ಪ ಮಡಿಕೇರಿಯ ಓಂಕಾರೇಶ್ವರ ದೇವಸ್ಥಾನದಲ್ಲಿಯೂ ಕಾಣಸಿಗುತ್ತದೆ. ಸುತ್ತಿಲಿನ ಹಸಿರು ಕಾನನದ ಮಧ್ಯೆ ಅರಮನೆ ಕಳಶದಂತೆ ಕೂತಿರುವುದಾಗಿ ಕಾಣುತ್ತದೆ ಎಂದು ಇಲ್ಲಿನ ಹಿರಿಯರು ಅರಮನೆಯ ಸೌಂದರ್ಯವನ್ನು ವರ್ಣನೆ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.