ಏಷ್ಯಾದ ಟಾಪ್ ಟೆನ್ ಬೀಚ್ ಗಳಲ್ಲಿ ಭಾರತದ್ದು ಮೂರು: ಆದರೆ ಯಾವುದೂ ವಿಶ್ವದರ್ಜೆಯಲ್ಲಿಲ್ಲ
ಏಷ್ಯಾದ 10 ಪ್ರಮುಖ ಬೀಚ್ ಗಳಲ್ಲಿ ಭಾರತದ ಮೂರು ಕಡಲ ತೀರಗಳು ಸ್ಥಾನ ಪಡೆದಿವೆ. ಆದರೆ ಅವುಗಳಲ್ಲಿ ಒಂದು ಕೂಡ ವಿಶ್ವ ದರ್ಜೆಯ ಮಾನ್ಯತೆ ಪಡೆದಿಲ್ಲ.

ನವದೆಹಲಿ: ಏಷ್ಯಾದ 10 ಪ್ರಮುಖ ಬೀಚ್ ಗಳಲ್ಲಿ ಭಾರತದ ಮೂರು ಕಡಲ ತೀರಗಳು ಸ್ಥಾನ ಪಡೆದಿವೆ. ಆದರೆ ಅವುಗಳಲ್ಲಿ ಒಂದು ಕೂಡ ವಿಶ್ವ ದರ್ಜೆಯ ಮಾನ್ಯತೆ ಪಡೆದಿಲ್ಲ.
ಗೋವಾದ ಅಗೊಂಡಾ, ಪಲೋಲೆಮ್, ಅಂಡಮಾನ್ ನ ಹಾವ್ಲಾಕ್ ದ್ವೀಪದ ರಾಧಾನಗರ್ ಬೀಚ್ ಗಳು ಏಷ್ಯಾದ 10 ಟಾಪ್ ಟೆನ್ ಬೀಚ್ ಗಳಲ್ಲಿ ಪ್ರಮುಖವಾಗಿವೆ. ಆದರೆ ಜಾಗತಿಕವಾಗಿ ಇವುಗಳಿಗೆ ಸ್ಥಾನ ಸಿಕ್ಕಿಲ್ಲ ಎಂದು ಟ್ರಿಪ್ ಅಡ್ವೆಸರ್ ಇಂಡಿಯಾ ಹೇಳಿದೆ.
ಪ್ರಯಾಣಿಕರು ಉತ್ತಮ ಗುಣಮಟ್ಟ, ಗಾತ್ರ, ಸೇರಿದಂತೆ ಹಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು, ಆಯ್ಕೆಯಾದ ಬೀಚ್ ಗಳಿಗೆ ಪ್ರಶಸ್ತಿ ನೀಡಲಾಗುತ್ತದೆ ಎಂದು ಟ್ರಿಪ್ ಅಡ್ವೈಸರ್ ಇಂಡಿಯಾ ಮ್ಯಾನೇಜರ್ ನಿಖಿಲ್ ಸಂಜು ಹೇಳಿದ್ದಾರೆ.
ಏಷ್ಯಾ, ಆಫ್ರಿಕಾ, ಕೆರಿಬಿಯನ್ ಮಧ್ಯ ಅಮೆರಿಕಾ, ಯುರೋಪ್, ದಕ್ಷಿಣ ಅಮೆರಿಕಾ, ಸೌತ್ ಪೆಸಿಫಿಕ್ ಇಂಗ್ಲೆಂಡ್ ಮತ್ತು ಅಮೆರಿಕಾ ದೇಶಗಳ ಸುಮಾರು 343 ಬೀಚ್ ಗಳು ಪ್ರಶಸ್ತಿಗೆ ಭಾಜನವಾಗಿವೆ.
ಇನ್ನೂ ಏಷ್ಯಾದ ಟಾಪ್ 10 ಬೀಚ್ ಗಳಲ್ಲಿ ಗೋವಾದ ಅಗೊಂಡಾ 4ನೇ ಸ್ಥಾನ ಪಡೆದಿದೆ. ಈ ಬೀಚ್, ತುಂಬಾ ವಿಸ್ತಾರವಾಗಿದ್ದು, ಆಕರ್ಷಕವಾಗಿದೆ. ಕೆಲವೇ ಜನ ಪ್ರವಾಸಿಗರು ಆಗಮಿಸುವುದರಿಂದ ತುಂಬಾ ಫೋಟೋ ತೆಗೆಯುವವರು ನೆಚ್ಚಿನ ಸ್ಪಾಟ್ ಆಗಿದೆ. ಇನ್ನೂ ಗೋವಾದ ಮತ್ತೊಂದು ಪಲೋಲೆಮ್ ಬೀಚ್ಮೊದಲ 10 ರಲ್ಲಿ 8ನೇ ಸ್ಥಾನ ಪಡೆದಿದೆ.
ತೆಂಗಿನ ಕಾಯಿ ಗರಿಗಳಿಂದ ಮಾಡಿರುವ ಗುಡಿಸಲು ವಸತಿಗಳು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ರಾಧಾ ನಗರ ಬೀಚ್ ನಲ್ಲಿ ಬಿಳಿ ಮರಳು ಇರುವುದು ಪ್ರಮುಖ ಆಕರ್ಷಣೆಯಾಗಿದೆ. ಹೀಗಾಗಿ ಹೆಚ್ಚು ಪ್ರವಾಸಿಗರು ಇದೇ ಸ್ಥಳಕ್ಕೆ ಭೇಟಿ ನೀಡುತ್ತಾರೆ.
ಏಷ್ಯಾದ ಟಾಪ್ ಟೆನ್ ಬೀಚ್ ಗಳಿವು
- ನಾಗ್ಪಾಲಿ ಬೀಚ್, ಮಯನ್ಮಾರ್
- ನಾಗ್ ಪಾನ್ ಬೀಚ್. ಫಿಲಿಪ್ಪೀನ್ಸ್
- ಕಟಾನೋಯ್ ಬೀಚ್, ಥೈಲ್ಯಾಂಡ್
- ಅಗೊಂಡಾ ಬೀಚ್, ಗೋವಾ
- ಯಪಾಕ್ ಬೀಚ್ ಫಿಲಿಪ್ಪೀನ್ಸ್
- ನರಿಹರ್ನ್ ಬೀಚ್ ಥೈಲ್ಯಾಂಡ್
- ಸನ್ ರೈಸ್ ಬೀಚ್, ಥಾಯ್ಲೆಂಡ್,
- ಪಲೊಮೆಮ್ ಬೀಚ್, ಗೋವಾ
- ಓಟ್ರೆಸ್ ಬೀಚ್ ಕಾಂಬೋಡಿಯಾ
- ರಾಧಾನಗರ ಬೀಚ್, ಅಂಡಮಾನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


