೨೬ ಅಡಿ ಉದ್ದದ ಕಾರು ವಿನ್ಯಾಸ ಮಾಡಿದ ಸುಧಾಕರ್; ಮತ್ತೊಂದು ದಾಖಲೆಗೆ ಪ್ರಯತ್ನ
ಕಂಪ್ಯೂಟರ್, ಶೂ, ಫುಟ್ ಬಾಲ್, ಬದನೆ ಕಾಯಿ ಆಕಾರಗಳಲ್ಲಿ ಕಾರು ವಿನ್ಯಾಸ ಮಾಡಿ ನಿರ್ಮಿಸಿ ದಾಖಲೆ ಮಾಡಿರುವ ವಿನ್ಯಾಸಕಾರ ಕೆ ಸುಧಾಕರ್, ಈಗ ೨೬ ಅಡಿ ಉದ್ದದ

ಹೈದರಾಬಾದ್: ಕಂಪ್ಯೂಟರ್, ಶೂ, ಫುಟ್ ಬಾಲ್, ಬದನೆ ಕಾಯಿ ಆಕಾರಗಳಲ್ಲಿ ಕಾರು ವಿನ್ಯಾಸ ಮಾಡಿ ನಿರ್ಮಿಸಿ ದಾಖಲೆ ಮಾಡಿರುವ ವಿನ್ಯಾಸಕಾರ ಕೆ ಸುಧಾಕರ್, ಈಗ ೨೬ ಅಡಿ ಉದ್ದದ ಕಾರು ನಿರ್ಮಿಸಿ ಮತ್ತೊಂದು ದಾಖಲೆ ನಿರ್ಮಿಸುವತ್ತ ದಾಪುಗಾಲು ಹಾಕಿದ್ದಾರೆ.
ವಿಶ್ವದ ಅತಿ ದೊಡ್ಡ ತ್ರಿಚಕ್ರ ವಾಹನ ನಿರ್ಮಿಸಿದ್ದಕ್ಕೆ ಸುಧಾಕರ್ ಅವರು ಗಿನ್ನಿಸ್ ದಾಖಲೆ ಹೊಂದಿದ್ದಾರೆ.
೯ ಅಡಿ ತ್ರಿಜ್ಯದ ಚಕ್ರಗಳುಳ್ಳ, ೨೬ ಅಡಿ ಎತ್ತರದ, ೫೦ ಅಡಿ ಉದ್ದದ ಮತ್ತು ೧೦ ಅಡಿ ಅಗಲದ ಈ ಕಾರನ್ನು ೧೯೨೨ರ ಫೋರ್ಡ್ ಟೂರರ್ ಕಾರ್ ಮಾದರಿಯಲ್ಲಿ ವಿನ್ಯಾಸ ಮಾಡಿ ನಿರ್ಮಿಸಲಾಗಿದೆ.
ಕಳೆದ ಮೂರು ವರ್ಷಗಳ ಪರಿಶ್ರಮದಿಂದ ಈ ಕಾರನ್ನು ನಿರ್ಮಿಸಿರುವುದಾಗಿ ತಿಳಿಸಿರುವ ಸುಧಾಕರ್ ಈ ವಿನ್ಯಾಸ ಮಕ್ಕಳನ್ನು ಸೆಳೆಯಲಿದೆ ಎಂದಿದ್ದಾರೆ. ಈ ಮಾದರಿ ಕಾರು ಅವರ ಸಂಗ್ರಹಾಲಯದಲ್ಲಿ ವೀಕ್ಷಣೆಗೆ ಸಿದ್ಧವಾಗಿದೆ.
ಸ್ಟೀಲ್ ಮತ್ತು ಅಲ್ಯುಮಿನಿಯಂ ಬಳಸಿ ನಿರ್ಮಿಸಲಾಗಿರುವ ಈ ಕಾರು ಹವಾನಿಯಂತ್ರಣವನ್ನು ಒಳಗೊಂಡಿದೆ. ಎರಡು ಅಂತಸ್ತುಗಳನ್ನು ಹೊಂದಿರುವ ಈ ಕಾರಿನ ಒಳಭಾಗದ ಮೇಲ್ಭಾಗದಲ್ಲಿ ಚೆಸ್ ಬೋರ್ಡ್ ವಿನ್ಯಾಸ ಮಾಡಲಾಗಿದೆಯಂತೆ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


