ಮಾರುತಿ ಸುಜುಕಿ ಸಂಸ್ಥೆ ವಾಹನಗಳ ಮಾರಾಟ ಶೇ.9.7 ರಷ್ಟು ಏರಿಕೆ
ಕಳೆದ ತಿಂಗಳಲ್ಲಿ ಮಾರುತಿ ಸುಜುಕಿ ಸಂಸ್ಥೆಯ ವಾಹನಗಳ ಮಾರಾಟ ಶೇ.9.7 ರಷ್ಟು ಏರಿಕೆಯಾಗಿದೆ.

ಮುಂಬೈ: ಕಳೆದ ತಿಂಗಳಲ್ಲಿ ಮಾರುತಿ ಸುಜೂಕಿ ಸಂಸ್ಥೆಯ ವಾಹನಗಳ ಮಾರಾಟ ಶೇ.9.7 ರಷ್ಟು ಏರಿಕೆಯಾಗಿದೆ. ಪರಿಶೀಲನೆಯಲ್ಲಿರುವ ಪ್ರಸಕ್ತ ತಿಂಗಳಲ್ಲಿ ಮಾರುತಿ ಸುಜೂಕಿಯ 120 ,824 ಯುನಿಟ್ ವಾಹನಗಳು ಮಾರಾಟವಾಗಿದೆ.
2014 ರ ನವೆಂಬರ್ ನಲ್ಲಿ ಸಂಸ್ಥೆ 110 ,147 ಯುನಿಟ್ ವಾಹನಗಳನ್ನು ಮಾರಾಟ ಮಾಡಿತ್ತು. ಅಕ್ಟೋಬರ್ ತಿಂಗಳಲ್ಲಿ ಮಾರುತಿ ಸಂಸ್ಥೆಯ ವಾಹನಗಳ ಒಟ್ಟು ಮಾರಾಟ ಶೇ.29 ರಷ್ಟು ಏರಿಕೆಯಾಗಿದ್ದರೆ ದೇಶೀಯ ಮಾರುಕಟ್ಟೆಯಲ್ಲಿನ ಮಾರಾಟ ಶೇ.10 .6 ರಷ್ಟು ಹೆಚ್ಚಾಗಿದೆ.
ರಫ್ತು ಪ್ರಮಾಣವೂ ಏರಿಕೆಯಾಗಿದ್ದು ಪರಿಶೀಲನೆಯಲ್ಲಿರುವ ಪ್ರಸಕ್ತ ತಿಂಗಳಲ್ಲಿ 10 ,225 ಯುನಿಟ್ ವಾಹನಗಳು ಹೊರದೇಶಗಳಿಗೆ ರಫ್ತಾಗಿದೆ. 2015 ಕ್ಕೆ ಹೋಲಿಸಿದರೆ 2014 ರಲ್ಲಿ 10 ,123 ಯುನಿಟ್ ಗಳು ಹೊರದೇಶಗಳಿಗೆ ರಫ್ತಾಗಿತ್ತು.
ಪ್ರಯಾಣಿಕ ಕಾರು ವಿಭಾಗದಲ್ಲೂ ಮಾರುತಿ ಸಂಸ್ಥೆಯ ವಾಹನಗಳ ಮಾರಾಟ ಗಮನಾರ್ಹ ಏರಿಕೆ ಕಂಡಿದ್ದು, ಕಳೆದ ವರ್ಶಕ್ಕಿಂತಲೂ ಈ ವರ್ಷ ಶೇ.8 .7 ರಷ್ಟು ಏರಿಕೆಯಾಗಿದೆ. ಯುಟಿಲಿಟಿ ವಿಭಾಗದ ಜಿಪ್ಸಿ, ಎರ್ಟಿಗಾ ಮತ್ತು ಎಸ್-ಕ್ರಾಸ್ ಕಾರುಗಳ ಮಾರಾಟದಲ್ಲಿ ಸಂಸ್ಥೆ 57.5 ರಷ್ಟು ಏರಿಕೆ ಕಂಡಿದೆ. ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಹೊಂದಿರುವುದರಿಂದ ಬಾಂಬೆ ಶೇರು ವಿನಿಮಯ ಕೇಂದ್ರದಲ್ಲೂ ಮಾರುತಿ ಸಂಸ್ಥೆಯ ಷೇರುಗಳು ಶೇ.೦.31 ರಷ್ಟು ಏರಿಕೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


