ಅಂತು ರೋಡಿಗಿಳಿದ ಸ್ವಯಂಚಾಲಿತ ಗೂಗಲ್ ಕಾರು
ಗೂಗಲ್ ನ ಸ್ವಯಂಚಾಲಿತ ಕಾರು ಹಲವು ಪರೀಕ್ಷೆಗಳ ನಂತರ ಕೊನೆಗೂ ರಸ್ತೆಗಿಳಿದಿದೆ...

ಗೂಗಲ್ ನ ಸ್ವಯಂಚಾಲಿತ ಕಾರು ಹಲವು ಪರೀಕ್ಷೆಗಳ ನಂತರ ಕೊನೆಗೂ ರಸ್ತೆಗಿಳಿದಿದೆ.
ನ್ಯಾನೋ ಥರ ಕಾಣುವ ಬಸವನ ಹುಳು ಆಕಾರದ ಈ ಚಿಕ್ಕ ಕಾರು ಸೆನ್ಸಾರ್ ಮತ್ತು ಇತರೆ ಗಣಕೀಕೃತ ಗ್ಯಾಡ್ಜೆಟ್‍ಗಳನ್ನು ಅವಲಂಬಿಸಿಯೇ ಕಾರ್ಯ ನಿರ್ವಹಿಸುವಂತಿದ್ದು, ತೀರ ಅಗತ್ಯದ ಸಂದರ್ಭಗಳಲ್ಲಿ ಅದನ್ನು ಮನುಷ್ಯ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಅವಕಾಶವನ್ನೂ ನೀಡಲಾಗಿದೆ.
ಸುಮಾರು 20ಕ್ಕೂ ಹೆಚ್ಚು ಗೂಗಲ್ ನ ಲೆಕ್ಸಸ್ ಕಾರುಗಳು ಈಗಾಗಲೇ ಓಡಾಡುತ್ತಿವೆಯಾದರೂ, ಸ್ವಯಂಚಾಲಿತ ಕಾರುಗಳ ಪರಿಚಯ ಈ ರಸ್ತೆಗಳಿಗೆ ಹೊಸತು ಎಂದು ಗೂಗಲ್ ಹೇಳಿದೆ. ಇದರ ಗರಿಷ್ಠ ವೇಗ ಗಂಟೆಗೆ 40ಕಿಮೀ ಇದ್ದು, ತುರ್ತು ಸಮಯದಲ್ಲಿ ಡ್ರೈವರ್‍ಗೆ ಜಾಗ, ಬೇರ್ಪಡಿಸಬಲ್ಲ ಸ್ಟೀಯರಿಂಗ್ ವೀಲ್, ಆಕ್ಸಿಲರೇಟರ್ ಪೆಡಲ್ ಮತ್ತು ಬ್ರೇಕ್ ಪೆಡಲ್ ಗಳು ಕೂಡ ಇದರಲ್ಲಿವೆ. ಅಪಘಾತದ ಸಾಧ್ಯತೆಗಳು ಅತ್ಯಂತ ಕಡಿಮೆ ಇದ್ದು, ಹಿಂದಿನಿಂದ ಬೇರೆ ವಾಹನ ಗುದ್ದಿದರೆ ಮಾತ್ರ ಅಪಘಾತವಾಗುವ ಸಂಭವವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


