ಶ್ರೀಲಂಕಾದಲ್ಲಿ ಜೆಸ್ಟ್, ಬೋಲ್ಟ್ ಅನಾವರಣ ಮಾಡಿದ ಟಾಟಾ ಮೋಟಾರ್ಸ್
ಭಾರತೀಯ ವಾಹನ ಉತ್ಪಾದನಾ ಸಂಸ್ಥೆ ಟಾಟಾ ಮೋಟಾರ್ಸ್ ಮಂಗಳವಾರ ಶ್ರೀಲಂಕಾದಲ್ಲಿ ಎರಡು ನೂತನ ಕಾರುಗಳು- ಸೆಡಾನ್ ಜೆಸ್ಟ್ ಮತ್ತು ಬೋಲ್ಟ್

ಕೊಲಂಬೊ: ಭಾರತೀಯ ವಾಹನ ಉತ್ಪಾದನಾ ಸಂಸ್ಥೆ ಟಾಟಾ ಮೋಟಾರ್ಸ್ ಮಂಗಳವಾರ ಶ್ರೀಲಂಕಾದಲ್ಲಿ ಎರಡು ನೂತನ ಕಾರುಗಳು- ಸೆಡಾನ್ ಜೆಸ್ಟ್ ಮತ್ತು ಬೋಲ್ಟ್ ಬಿಡುಗಡೆ ಮಾಡಿದೆ.
"ಆಯಾ ವಿಭಾಗದಲ್ಲಿ ಉನ್ನತ ಸೌಕರ್ಯಗಳನ್ನೊಳಗೊಂಡ ಈ ಎರಡೂ ಕಾರುಗಳನ್ನು ಜಾಗತಿಕ ಗುಣಮಟ್ಟದಲ್ಲಿ ವಿನ್ಯಾಸ-ಅಭಿವೃದ್ಧಿ ಮಾಡಲಾಗಿದ್ದು ಮೊದಲ ಬಾರಿ ಕಾರು ಕೊಳ್ಳುವವರಿಗೂ ಹಾಗೂ ಈಗಾಗಲೇ ಕಾರು ಉಳ್ಳವರಿಗೂ ಸಮನಾಗಿ ಆಕರ್ಷಿಸಲಿವೆ" ಎಂದು ಟಾಟಾ ಮೋಟಾರ್ಸ್ ನ ಪ್ರಯಾಣಿಕ ವಾಹನಗಳ ಅಂತರಾಷ್ಟ್ರೀಯ ವ್ಯವಹಾರಗಳ ಮುಖ್ಯಸ್ಥ ಜಾನಿ ಊಮ್ಮನ್ ತಿಳಿಸಿದ್ದಾರೆ.
"ಪ್ರಾದೇಶಿಕ ಮಾರುಕಟ್ಟೆಯಲ್ಲಿ ನಮ್ಮ ಸಂಸ್ಥೆಯ ಹೆಚ್ಚಿನ ಪ್ರಗತಿಗೆ ಬೋಲ್ಟ್ ಮತ್ತು ಜೆಸ್ಟ್ ಸಹಕಾರಿಯಗಲಿವೆ" ಎಂದು ಊಮ್ಮನ್ ತಿಳಿಸಿದ್ದಾರೆ.
ಸಂಸ್ಥೆಯೇ ತಿಳಿಸಿರುವಂತೆ ಈ ನೂತನ ವಿನ್ಯಾಸದ ಕಾರುಗಳನ್ನು ಭಾರತ, ಬ್ರಿಟನ್ ಮತ್ತು ಇಟಲಿಯಲ್ಲಿ ವಿನ್ಯಾಸ ಮಾಡಲಾಗಿದೆ.
ಆಗಸ್ಟ್ ೨೦೧೪ರಲ್ಲಿ ಜೆಸ್ಟ್ ಕಾರನ್ನು, ಜನವರಿಯಲ್ಲಿ ಬೋಲ್ಟ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಎರಡೂ ಕಾರುಗಳ ಉತ್ಪನ್ನ ಪುಣೆಯಲ್ಲಿ ನಡೆಯುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


