ವಾಹನ

ರು. 4 ಲಕ್ಷಕ್ಕಿಂತ ಕಡಿಮೆ ಬೆಲೆಯ ಬೆಸ್ಟ್ ಕಾರುಗಳು

ರು.4 ಲಕ್ಷಕ್ಕಿಂತ ಕಡಿಮೆ ಬಜೆಟ್‌ನಲ್ಲಿ ಸಿಗುವ ಬೆಸ್ಟ್ ಕಾರು ಯಾವುದು? ಇಲ್ಲಿದೆ ಉತ್ತರ...

ರು. 4 ಲಕ್ಷಕ್ಕಿಂತ ಕಡಿಮೆ ಬೆಲೆಯ ಬೆಸ್ಟ್ ಕಾರುಗಳು
ಮಾರುತಿ ಸುಜುಕಿ ಆಲ್ಟೋ ಕೆ 10
Published On :

ಒಂದು ಕಾರು ಖರೀದಿ ಮಾಡುವ ಮುನ್ನ ನಾವು ಅದೆಷ್ಟು ಯೋಚಿಸುತ್ತೇವೆ ಅಲ್ವಾ? ಇಂಜಿನ್ ಕಾರ್ಯಕ್ಷಮತೆ, ಕಂಫರ್ಟ್ ಜತೆಗೆ ನಮ್ಮ ಬಜೆಟ್‌ಗೆ ಹೊಂದುವಂಥ ಕಾರುಗಳನ್ನು ನಾವು ಖರೀದಿಸಲು ಮುಂದಾಗುತ್ತೇವೆ. 4 ಲಕ್ಷಕ್ಕಿಂತ ಕಡಿಮೆ ಬಜೆಟ್‌ನಲ್ಲಿ ಸಿಗುವ ಬೆಸ್ಟ್ ಕಾರು ಯಾವುದು? ಇಲ್ಲಿದೆ ಉತ್ತರ

ಮಾರುತಿ ಸುಜುಕಿ ಆಲ್ಟೋ ಕೆ 10

ಆಲ್ಟೋ ಕಾರಿನ ಹೊಸ ಆವೃತ್ತಿಯೆಂದೇ ಇದನ್ನು ಹೇಳಬಹುದು. 998 ಸಿಸಿ ಇಂಜಿನ್, 24.07 ಕಿಮೀ ಮೈಲೇಜ್.  ಆಟೋಮ್ಯಾಟಿಕ್ ಮಾಡೆಲ್ ಕೂಡಾ ಲಭ್ಯ. ಡೀಸೆಲ್ ಇಂಜಿನ್ ಅಲ್ಲದೆ ಸಿಎನ್‌ಜಿ ಲಭ್ಯ.

ದಾಟ್ಸನ್ ಗೋ ಮತ್ತು ಗೋ ಪ್ಲಸ್

Story image


ದಾಟ್ಸನ್ ಗೋ ಎಂಬ ಹ್ಯಾಚ್‌ಬ್ಯಾಕ್ ಮತ್ತು  ಗೋ ಪ್ಲಸ್ ಸಾಮಾನ್ಯ ಜನರ ಬಜೆಟ್ ಗೆ ಅನುಕೂಲವಾದ ಕಾರಾಗಿದೆ. 1.2 ಲೀಟರ್ ಪೆಟ್ರೋಲ್ ಇಂಜಿನ್ ಕಾರ್ಯಕ್ಷಮತೆಯಿರುವ ಈ ಕಾರಿಗೆ 20.62 ಕಿಮೀ ಮೈಲೇಜ್ ಇದೆ.

ಹುಂಡೈ ಇಯೋನ್

Story image



ಫ್ಯೂಡಿಕ್ ಡಿಸೈನ್ ಹೊಂದಿರುವ ಈ ಕಾರಿನ ವಿಶೇಷತೆ ಎಂದರೆ 1 ಲೀಟರ್ 3 ಸಿಲಿಂಡರ್ 814 ಸಿಸಿ ಇಂಜಿನ್. ಮೈಲೇಜ್ 20.3 ಕಿಮೀ.

ಮಾರುತಿ ಸುಜುಕಿ ಸೆಲಾರಿಯೋ

Story image


ಸುಜುಕಿ ಎ ಸ್ಟಾರ್ ಮತ್ತು  ಎಸ್ಟಿಲೋ ಕಾರಿನ ಬದಲಿಗೆ ಬಂದ ಸೆಲಾರಿಯೋ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಇರುವ ಕಾರಾಗಿದೆ. ಮೈಲೇಜ್ 23.1 ಕಿಮೀ. ಈಗ ಡೀಸೆಲ್ ಕಾರುಗಳೂ ಲಭ್ಯ.

ಹುಂಡೈ ಐ 10

Story image



2007ರಲ್ಲಿ ಮಾರುಕಟ್ಟೆಗೆ ಬಂದ ಈ ಕಾರು ಹೆಚ್ಚಿನ ಜನಪ್ರಿಯತೆ ಗಳಿಸಿದೆ. 1.1 ಲೀಟರ್, 4 ಸಿಲಿಂಡರ್, ಪೆಟ್ರೋಲ್ ಇಂಜಿನ್, 19 ಕಿಮೀ ಮೈಲೇಜ್ ನೀಡುವ ಹುಂಡೈ ಐ 10 ಬೆಲೆ ನಾಲ್ಕು ಲಕ್ಷ ರು. ಗಿಂತ ಅಧಿಕವಾಗಿದ್ದರೂ ಸಾಮಾನ್ಯರ ಬಜೆಟ್‌ಗೆ ಹೊಂದುವ ಕಾರು ಎಂದು ಹೇಳಲ್ಪಡುತ್ತದೆ .

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.