ಅಜ್ಞಾತ ಸುಂದರಿ
ಸುತ್ತೆಲ್ಲ ಹಚ್ಚ ಹಸಿರ ಕಾಡು, ಕಾಡಿನ ಮಧ್ಯೆ ಭೋರ್ಗರೆವ ಸದ್ಧಿನೊಂದಿಗೆ ಕಲ್ಲು ಬಂಡೆಗಳ...

ಸುತ್ತೆಲ್ಲ ಹಚ್ಚ ಹಸಿರ ಕಾಡು, ಕಾಡಿನ ಮಧ್ಯೆ ಭೋರ್ಗರೆವ ಸದ್ಧಿನೊಂದಿಗೆ ಕಲ್ಲು ಬಂಡೆಗಳ ಮಧ್ಯೆ ನಲಿದಾಡುವ ಅಜ್ಞಾತ ಸುಂದರಿ. ತನ್ನ ಮೈಮಾಟದಿಂದ ನೋಡುಗರನ್ನು ತನ್ನತ್ತ ಸೆಳೆಯುವ ಈಕೆ ಜಲಕನ್ಯೆ.
ಸಾಗುವ ದಾರಿಯುದ್ದಕ್ಕೂ ಹಾಲಿನ ಕಡಲನ್ನು ಹರಿಸುವ ಈಕೆಯ ಸೌಂದರ್ಯಕ್ಕೆ ಮಾರು ಹೋಗದವರಿಲ್ಲ. ಇದು ಕಾಡಿನ ಮಧ್ಯೆ ಇರುವ ಬಂಜಾರುಮಲೆ ಜಲಪಾತ.
ಉಜಿರೆಯಿಂದ ಚಾರ್ಮಾಡಿ ಘಾಟಿಯಲ್ಲಿ ಸುಮಾರು 10ಕಿ.ಮೀ ಚಲಿಸಿ, ಮಣ್ಣಹಾದಿಯಲ್ಲಿ ಒಂದಿಷ್ಟು ದೂರ ಸವೆಸಿದರೆ ನೆರಿಯ ಗ್ರಾಮ ಪಂಚಾಯಿತಿಗೆ ಒಳಪಟ್ಟ ಬಂಜಾರುಮಲೆ ಸಿಗುತ್ತದೆ.
ಬಂಜಾರು ಮಲೆಯ ಕೇಂದ್ರ ಭಾಗದಿಂದ ಕಾಡಿನಲ್ಲಿ ಇಳಿಮುಖವಾಗಿ ಸುಮಾರು 3 ಕಿ.ಮೀ ಈ ಜಲಪಾತದ ದರ್ಶನವಾಗುತ್ತದೆ.
ಸುಮಾರು 100 ಅಡಿ ಎತ್ತರದಿಂದ ಬಂಡೆಯ ಮುಖಾಂತರ ಧುಮ್ಮಿಕ್ಕುವ ನೀರು, ನೊರೆ ನೊರೆಯಾಗಿ ಹರಿದು ಮುಂದೆ ಸಾಗುವ ದೃಶ್ಯ ಬಲು ಚೆಂದ.
ಗಂಟಲು ಒಣಗುವ ತನಕ ಕಿರುಚಿದರೂ ಪಕ್ಕದಲ್ಲಿದ್ದವನಿಗೆ ಏನೂ ಕೇಳಿಸದಷ್ಟು ನೀರಿನ ಭೋರ್ಗರೆತ. ನೀರು ಬೀಳುವ ಸ್ಥಳದಿಂದ 50 ಅಡಿ ದೂರದಲ್ಲಿದ್ದರೂ ಬಟ್ಟೆಯನ್ನೆಲ್ಲ ಒದ್ದೆ ಮಾಡಿಯೇ ಮಜಾ ನೋಡುತ್ತಾಳೆ ಈಕೆ.
ಬಂಜಾರುಮಲೆ ಜನಸಂಚಾರವಿಲ್ಲದ ಕೇವಲ ಬೆರಳೆಣಿಕೆಯ ಬುಡಕಟ್ಟು ಕುಟುಂಬಗಳಷ್ಟೇ ವಾಸಿಸುವ ಪ್ರದೇಶ. ಹಾಗಾಗಿ ಇಲ್ಲಿ ಜಲಪಾತ ಇದೆ ಅನ್ನುವ ವಿಚಾರ ಬಹುಮಂದಿಗೆ ತಿಳಿದಿಲ್ಲ. ಅಲ್ಲದೆ, ಅಲ್ಲಿನ ಜನ ಪರಿಸರ ಪ್ರೇಮಿಗಳು ಆಗಿರುವುದರಿಂದ ವೀಕ್ಷಕರು ಹೆಚ್ಚಾದರೆ ಪರಿಸರಕ್ಕೆ ಹಾನಿ ಅನ್ನುವ ಉದ್ದೇಶವಾಗಿ ವೀಕ್ಷಣೆಗೆ ಅವಕಾಶ ನೀಡುತ್ತಿಲ್ಲ. ಇಷ್ಟೇ ಅಲ್ಲದೆ ಬಂಜಾರುಮಲೆ ಕಾಡಿನ ಸುತ್ತಮುತ್ತ ಅದೆಷ್ಟೋ ಸಣ್ಮಪುಟ್ಟ ಝರಿಗಳು ಇದ್ದು, ಇದು ಬಂಜಾರು ಮಲೆ ಕಾಡಿನ ಶೋಭೆಯನ್ನು ಹೆಚ್ಚಿಸಿದೆ.
ಗೌತಮಿ ಕೊಂಗುಳಿ, ಉಜಿರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


