ವಾಹನ

ಕಾಶಿ ಕ್ಯೋಟೋ ಆಗಲು ಸಾಧ್ಯವೇ?

ಕ್ಯೋಟೋದಲ್ಲಿ ಜಪಾನ್ ಮಾಡಿರುವ ಕ್ರಾಂತಿ ವಾರಣಾಸಿಯಲ್ಲಿ ಆಗಲಿದೆಯೇ?..

ಕಾಶಿ ಕ್ಯೋಟೋ ಆಗಲು ಸಾಧ್ಯವೇ?
Published On :

ಜಪಾನ್ ಮತ್ತು ಭಾರತದ ಹೊಸ ಮೈತ್ರಿಗೆ ಈಗಾಗಲೇ ಹೊಸ ಭಾಷ್ಯ ಬರೆದದ್ದಾಗಿದೆ. ನಮ್ಮ ವಾರಣಾಸಿಯನ್ನು ಜಪಾನ್‌ನ ಕ್ಯೋಟೋ ರೀತಿ ಮಾಡಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಕನಸು. ತಮ್ಮ ಸ್ವಕ್ಷೇತ್ರವೂ ಆಗಿರುವ ಇದ, ಪೌರಾಣಿಕ ಹಿನ್ನಲೆ ಹೊಂದಿರುವ ಸ್ಥಳ. ಕ್ಯೋಟೋ ಕೂಡ ಅಷ್ಟೇ. ಜಪಾನ್‌ನ ಹಲವಾರು ಮಂದಿರಗಳು ಇಲ್ಲಿವೆ. ಹೀಗಾಗಿ ಈ ಎರಡೂ ಊರಿಗೆ ಸಾಮ್ಯತೆ ಹೆಚ್ಚು. ಹಾಗಾದರೆ ಕ್ಯೋಟೋದಲ್ಲಿ ಜಪಾನ್ ಮಾಡಿರುವ ಕ್ರಾಂತಿ ವಾರಣಾಸಿಯಲ್ಲಿ ಆಗಲಿದೆಯೇ? ಇಂಥ ಒಂದು ಕೌತಕ ಎಲ್ಲರಲ್ಲೂ ಇದೆ.

ವಾರಣಾಸಿ ವೈಶಿಷ್ಟ್ಯ
ದೇಗುಲ ಮತ್ತು ಘಾಟ್‌ಗಳ ನಗರಿ, ಭಾರಿ ಜನಜಂಗುಳಿ ಇರುವ ಅತ್ಯಂತ ಪುರಾತನ ನಗರ

ಪ್ರದೇಶ 1550 ಚದರ ಕಿ.ಮೀ
ಜನಸಂಖ್ಯೆ 1.2 ದಶಲಕ್ಷ
ಪ್ರತಿ ಚದರ ಕಿ.ಮೀ.ಗೆ 380 ಮಂದಿ ಜನಸಾಂಧ್ರತೆ

ಸಂಪರ್ಕ
ಬಸ್ ಮತ್ತು ರೈಲುಗಳನ್ನೇ ಅವಲಂಭಿಸಬೇಕು.

ರಸ್ತೆಗಳು
ಕಿರಿದಾಗಿವೆ, ಇಲ್ಲಿ ಟ್ರಾಫಿಕ್ ಸಮಸ್ಯೆ ಬಹಳ.

ಸ್ವಚ್ಛತೆ
ಇಲ್ಲಿನ ಘಾಟ್‌ಗಳು, ರಸ್ತೆಗಳು ಕೆಟ್ಟದಾಗಿವೆ. ಸ್ವಚ್ಛತೆ ಎಂಬುದೇ ಇಲ್ಲ.

ಆರ್ಥಿಕತೆ
ಪ್ರಮುಖವಾಗಿ ಪ್ರವಾಸೋಧ್ಯಮವನ್ನೇ ಅವಲಂಭಿಸಿದೆ. ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳಿವೆ.

ಕ್ಯೋಟೋ ವೈಶಿಷ್ಟ್ಯ
ಇಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿರಗಳಿವೆ. ಇದು ಕಳೆದ ಒಂದು ಸಾವಿರ ವರ್ಷಗಳಿಂದ ಜಪಾನ್ ಸಾಮ್ರಾಜ್ಯದ ರಾಜಧಾನಿಯೂ ಹೌದು.

ಪ್ರದೇಶ 827.9 ಚದರ ಕಿ.ಮೀ
ಜನಸಂಖ್ಯೆ 1.47 ದಶಲಕ್ಷ
ಪ್ರತಿ ಚ.ಕಿ.ಮೀಗೆ 1,800 ಮಂದಿ ಜನಸಾಂಧ್ರತೆ

ಸಂಪರ್ಕ
ಇಲ್ಲಿ ಹೈಸ್ಪೀಡ್ ರೈಲು ಸಂಪರ್ಕವಿದೆ, ರಸ್ತೆಗಳು ಯೋಚಿತ ರೀತಿಯಲ್ಲಿವೆ, ರಸ್ತೆಯ ಅಕ್ಕಪಕ್ಕ ಮರಗಳಿವೆ.

ಸ್ವಚ್ಛತೆ
ತುಂಬಾ ಸುಂದರವಾಗಿದೆ.

ಆರ್ಥಿಕತೆ
ಇಲ್ಲಿ ಬಹಳಷ್ಟು ಐಟಿ ಕಂಪನಿಗಳಿವೆ, ಪ್ರವಾಸೋಧ್ಯಮ ಕೂಡ ಚೆನ್ನಾಗಿದೆ.

ಹಾಗಾದರೆ ವಾರಣಾಸಿ ಕ್ಯೋಟೋದಂತಾಗಲು ಏನು ಮಾಡಬೇಕು?
1.ಭಾರತೀಯರು ಮೊದಲು ಜಪಾನಿಯರಂತೆ ವರ್ತಿಸಲು ಕಲಿಯಬೇಕು.

2.ಕ್ಯೋಟೋದ ಸ್ವಚ್ಛತೆಗೆ ಕಾರಣ, ಅಲ್ಲಿನ ಜನರೇ. ಅವರೇ ತಮ್ಮ ಸುತ್ತಲಿನ ಪರಿಸರ ಚೆನ್ನಾಗಿರಿಸಿಕೊಳ್ಳುತ್ತಾರೆ.

3.ಆದರೆ ವಾರಣಾಸಿ ಕೆಟ್ಟದಾಗಿರಲು ಕಾರಣ ಅಲ್ಲಿನ ಜನರೇ. ಸ್ವಚ್ಛತೆ ಬಗ್ಗೆ ಅರಿವಿಲ್ಲದಿರುವುದೇ ಅದಕ್ಕೆ ಕಾರಣ.

4.ಜಪಾನಿಯರು ಬೇರೆಯವರು ಕಸ ಮಾಡಿದರೂ ಸ್ವಚ್ಛಗೊಳಿಸುತ್ತಾರೆ. ಆದರೆ ಭಾರತೀಯರು ತಾವು ಮಾಡಿದ ಕಸವನ್ನೇ ಎತ್ತಿ ಹಾಕುವುದಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.