ವಾಹನ

'ನಿರ್ಭಯಾ' ಸ್ಕೂಟ್ರು ಬಂತು...

'ನಿರ್ಭಯಾ' ಸ್ಕೂಟ್ರು ಬಂತು...
Published On :

ಭಾರತದಲ್ಲೇನೇ ಬೆಳವಣಿಗೆ ಆದರೂ ಅದನ್ನು ಮಾರುಕಟ್ಟೆ ಮಾಡುವ ಜಾಣ್ಮೆ ನಮಗಿಂತ ವಿದೇಶಿಯರಿಗೇ ಹೆಚ್ಚು ಕರಗತ. ಅದಕ್ಕಾಗಿಯೇ ಇಲ್ಲಿನ ಬಡತನ, ಹಸಿವು, ನಿರುದ್ಯೋಗ ಬೇರೆ ದೇಶಗಳ ನಿರ್ದೇಶಕರಿಗೆ ಸಿನಿಮಾ ಆಗುತ್ತದೆ. ಕಾದಂಬರಿಗಳಾಗುತ್ತವೆ. ಕೆಲ ಸಮಯದ ಹಿಂದೆ ದೆಹಲಿಯಲ್ಲಿ ನಡೆದ ಗ್ಯಾಂಗ್ರೇಪ್ ಪ್ರಕರಣ ಇಂದೀಗ ಒಂದು ಸ್ಕೂಟರ್ ಜನ್ಮಕ್ಕೆ ಸ್ಫೂರ್ತಿ ಆಗಿದೆ!

ಜಪಾನ್ ಮೂಲದ ಮಾರೆಲೊ ಯಮಸಕಿ ಎಂಬ ಸಂಸ್ಥೆ ಭಾರತದ ಆರ್ಯ ಎಂಬ ಸಂಸ್ಥೆಯ ಜೊತೆಗೂಡಿ 'ನಿರ್ಭಯಾ' ಎಂಬ ಹೆಸರಿನಲ್ಲಿ ಸ್ಕೂಟರ್ ತರುತ್ತಿದೆ. ದ್ವಿಚಕ್ರ ವಾಹನಲೋಕಕ್ಕೆ ಇವೆರಡೂ ಸಂಸ್ಥೆಯ ಹೆಸರು ತೀರಾ ಹೊಸದಾಗಿದ್ದರೂ ಮಾರುಕಟ್ಟೆಯಲ್ಲಿ ಈ ಸ್ಕೂಟರ್ ಭಾರಿ ಡಿಮ್ಯಾಂಡ್ ಸೃಷ್ಟಿಸಲಿದೆ ಎಂಬ ವಿಶ್ವಾಸ ವಾಹನತಜ್ಞರದ್ದು. ಅಷ್ಟಕ್ಕೂ ಈ ಸ್ಕೂಟರ್ ಕೇವಲ ಮಹಿಳೆಯರಿಗಂತಲೇ ವಿನ್ಯಾಸಗೊಳಿಸಲಾಗಿದೆ. 35,000 ರುಪಾಯಿ ಇದರ ಆರಂಭಿಕ ಬೆಲೆ. 40 ಸಾವಿರ ರುಪಾಯಿಗಳ ವರೆಗಿನ ಮಾದರಿಯಲ್ಲಿ ವಿವಿಧ ಸೌಲಭ್ಯಗಳನ್ನು ಪಡೆಯಬಹುದು. ಅಲ್ಲದೆ, ಮಹಿಳೆಯರಿಗೆ ಶೇ.10ರಷ್ಟು ರಿಯಾಯಿತಿಯನ್ನೂ ಇಡಲಾಗಿದೆ ಎನ್ನುತ್ತವೆ ಕಂಪನಿ ಮೂಲಗಳು. ಆದರೆ, ಈ ಸ್ಕೂಟರಿನ ವೇಗ ಮಾತ್ರ ದೇವತೆಗಳಿಗೇ ಪ್ರೀತಿ. ಮಾಮೂಲಿ ಲೂನಾ, ಸ್ಕೂಟಿಗಳಂತೆ ಇದರಲ್ಲಿ ಯರ್ರಾ ಬಿರ್ರಿ ಸ್ಪೀಡಿನಲ್ಲಿ ಹೋಗಲಾಗದು. ಗರಿಷ್ಟ ವೇಗದ ಮಿತಿ 25 ಕಿ.ಮೀ.ಗೆ ಅಡ್ಜೆಸ್ಟೆಬಲ್. ಜಿಪಿಆರ್ಎಸ್ ಕನೆಕ್ಟಿವಿಟಿ, ಎಸ್ಒಎಸ್ ಸಿಸ್ಟಂಗಳನ್ನೊಳಗೊಂಡಿರುವ ಈ ಸ್ಕೂಟರ್ ಒಂದೆರಡು ತಿಂಗಳಲ್ಲಿ ಭಾರತೀಯ ಮಾರುಕಟ್ಟೆ ಪ್ರವೇಶಿಸಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.