ವಾಹನ

ಅಪಘಾತ ಪರೀಕ್ಷೆಯಲ್ಲಿ ಸ್ವಿಫ್ಟ್ ಮತ್ತು ಡ್ಯಾಟ್ ಸನ್ ಫೇಲ್

ಜಾಗತಿಕ ಎನ್ ಸಿ ಎ ಪಿ (ನ್ಯೂ ಕಾರ್ ಅಸೆಸ್ ಮೆಂಟ್ ಪ್ರೋಗ್ರಾಮ್) ನಡೆಸಿದ ಅಪಘಾತ ಪರೀಕ್ಷೆಯಲ್ಲಿ,...

ಅಪಘಾತ ಪರೀಕ್ಷೆಯಲ್ಲಿ ಸ್ವಿಫ್ಟ್ ಮತ್ತು ಡ್ಯಾಟ್ ಸನ್ ಫೇಲ್
Published On :

ನವದೆಹಲಿ: ಜಾಗತಿಕ ಎನ್ ಸಿ ಎ ಪಿ (ನ್ಯೂ ಕಾರ್ ಅಸೆಸ್ ಮೆಂಟ್ ಪ್ರೋಗ್ರಾಮ್) ನಡೆಸಿದ ಅಪಘಾತ ಪರೀಕ್ಷೆಯಲ್ಲಿ, ಭಾರತದಲ್ಲಿ ಹೆಚ್ಚು ಮಾರಾಟವಾಗುವ ಮಾರುತಿ-ಸುಜುಕಿ ಸಂಸ್ಥೆಯ ದುಬಾರಿ ಕಾರುಗಳಾದ ಸ್ವಿಫ್ಟ್ ಮತ್ತು ಡ್ಯಾತ್ ಸನ್ ದಯನೀಯವಾಗಿ ವಿಫಲವಾಗಿವೆ.

ಜಾಗತಿಕ ಎನ್ ಸಿ ಎ ಪಿ - ಇಂಗ್ಲೆಂಡಿನ ಈ ಜಾಗತಿಕ ಚಾರಿಟಿ ಸ್ವಾವಲಂಬಿ ಸಂಸ್ಥೆ, ಬಳಕೆದಾರರ ಸುರಕ್ಷತಾ ಮಾಪನಕ್ಕಾಗಿ ಮಾಡುವ ಈ ಪರೀಕ್ಷೆಗಳಲ್ಲಿ, ಘಂಟೆಗೆ ೬೪ ಕಿ ಮೀ ಚಲಿಸುವ ಈ ಗಾಡಿಗಳೇನಾದರು ಮುಂಭಾಗದಲ್ಲಿ ಢಿಕ್ಕಿ ಹೊಡೆದರೆ, ಒಳಗೆ ಕುಳಿತಿರುವವರ ಸುರಕ್ಷತೆ "ಸೊನ್ನೆ"  ಎಂದಿದೆ.

ಸ್ವಿಫ್ಟ್ ನ ಎರಡು ಭಿನ್ನ ಮಾಡೆಲ್ ಗಳು ಈ ಪರೀಕ್ಷೆಗೆ ಒಳಪಟ್ಟಿದ್ದವು. ಒಂದು ಲ್ಯಾಟಿನ್ ಅಮೇರಿಕಾಗೆ ರಫ್ತಾಗುವ ಮಾಡೆಲ್ ಇನ್ನೊಂದು ಭಾರತದಲ್ಲಿ ಮಾರಾಟವಾಗುವ ಸ್ವಿಫ್ಟ್ ಮಾಡೆಲ್ .

ಭಾರತದಲ್ಲಿ ಮಾರಾಟವಾಗುವ ಬಹುತೇಕ ಸಣ್ಣ ಕಾರುಗಳಾದ ಮಾರುತಿ ಆಲ್ಟೊ ೮೦೦, ಟಾಟಾ ನ್ಯಾನೋ, ಫೋರ್ಡ್ ಫಿಗೋ, ಹುಂಡೈ ಐ೧೦ ಮತ್ತು ವೋಕ್ಸ್ ವ್ಯಾಗನ್ ಪೋಲೊ ಕಾರುಗಳು ಕೂಡ ಜನವರಿಯಲ್ಲಿ ನಡೆದ ಈ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿವೆ ಮತ್ತು ಜಾಗತಿಕ ಎನ್ ಸಿ ಎ ಪಿ ಪ್ರಕಾರ ಈ ಕಾರುಗಳು ಅಪಘಾತದಲ್ಲಿ ಬಳಕೆದಾರರಿಗೆ ಜೀವ ಹೋಗುವಂತಹ ತೊಂದರೆಗಳಾಗಳಿವೆ ಎಂದಿದೆ.

ಜಾಗತಿಕ ಎನ್ ಸಿ ಎ ಪಿ ಪ್ರಕಾರ ಭಾರತದಲ್ಲಿ ಮಾರಾಟವಾಗುವ ಹೊಸ ಕಾರುಗಳ ಸಂಖ್ಯೆಯಲ್ಲಿ ಮೇಲಿನ ಕಾರುಗಳ ಕಾರೋಬಾರು ೨೦%.

ಇಂದು ಬಹುತೇಕ ರಾಷ್ಟ್ರಗಳಲ್ಲಿ ಅಂದರೆ ಆಸ್ಟ್ರೇಲಿಯಾ, ಜಪಾನ್, ಚೈನಾ, ಮಲೇಶಿಯಾ, ಯೂರೋಪಿಯನ್ ಸಂಘಟನೆ ಒಳಗೊಂಡಂತೆ ಮುಂತಾದ ದೇಶಗಳಲ್ಲಿ ಜಾರಿಗೆ ತಂದಿರುವ ಪ್ರಾಥಮಿಕ ಸುರಕ್ಷತೆಯ ಕ್ರಮಗಳು ಕೂಡ ಮೇಲಿನ ಕಾರುಗಳು ಒಳಗೊಂಡಿಲ್ಲ ಎಂದು ಜಾಗತಿಕ ಎನ್ ಸಿ ಎ ಪಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.