ಲಾವಂಚಾವತಾರ

ನಿಸರ್ಗದ ಸಕಲ ವಸ್ತುಗಳಲ್ಲಿ ಕಲೆ ಕುಳಿತಿದೆ. ಸೌಂದರ್ಯ ಅಡಗಿದೆ. ಅಲ್ಲದೆ, ಅವು ಜನಸಾಮಾನ್ಯರನ್ನು ಆಕರ್ಷಿಸುವ ಶಕ್ತಿ, ಸಾಮರ್ಥ್ಯವನ್ನೂ ಹೊಂದಿವೆ. ಈ ಮಾತಿಗೆ ಚಿತ್ರದಲ್ಲಿ ಕಾಣುವ ಲಾವಂಚ ಕಲಾಕೃತಿಗಳೇ ಅತ್ಯುತ್ತಮ ನಿದರ್ಶನ.
ಲಾವಂಚ ಎನ್ನುವುದು ಹುಲ್ಲು ಸಸ್ಯ. ಈ ಹುಲ್ಲು ಸಸ್ಯದ ಬೇರಿನಿಂದ ಬೇರಿನಿಂದ ನಿತ್ಯ ಬಳಕೆಯ ಹಾಗೂ ಅಲಂಕಾರದ ವಸ್ತುಗಳನ್ನು ವೈವಿಧ್ಯಮಯವಾಗಿ ಸಿದ್ಧಪಡಿಸಲಾಗುತ್ತಿದೆ. ಲಾವಂಚದಿಂದ ಸಿದ್ಧಗೊಂಡ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯೂ ಇರುವುದರಿಂದ, ಲಾವಂಚ ಕಲಾಕೃತಿಗಳನ್ನು ತಯಾರಿಸುವವರಿಗೆ ಈ ಕೆಲಸವು ವರದಾನವಾಗಿದೆ.
ಉ.ಕ. ಜಿಲ್ಲೆಯ ಭಟ್ಕಳದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಲಾವಂಚದಿಂದ ವಿವಿಧ ವಸ್ತುಗಳನ್ನು ಸಿದ್ಧಪಡಿಸಲಾಗುತ್ತಿದೆ. ಆ ಪ್ರದೇಶದಲ್ಲಿ ಲಾವಂಚ ಸಸ್ಯವನ್ನು ಬೆಳೆಯಲು ಯೋಗ್ಯ ಕೃಷಿ ಭೂಮಿ ಇರುವುದರಿಂದ, ಭಟ್ಕಳ ತಾಲೂಕಿನ ಹಲವು ಪ್ರದೇಶಗಳಲ್ಲಿ ಲಾವಂಚದ ಕೃಷಿ ಮಾಡಲಾಗುತ್ತಿದೆ. ಭಟ್ಕಳವೂ ಈಗ ಲಾವಂಚದಿಂದ ಸಿದ್ಧಪಡಿಸಿದ ವೈವಿಧ್ಯಮಯವಾದ ಕಲಾಕೃತಿಗಳಿಗೆ ಸುಪ್ರಸಿದ್ಧ ತಾಣ.
ಈ ಲಾವಂಚ ಕೇವಲ ಕಲಾವಿದರನ್ನಷ್ಟೇ ಸೃಷ್ಟಿಸಿಲ್ಲ. ಆ ಮೂಲಕ ಉದ್ಯೋಗವನ್ನೂ ಸೃಷ್ಟಿಸಿದೆ. ಲಾವಂಚದ ಬೇರನ್ನು ಸೂಕ್ಷ್ಮ ಹಾಗೂ ನಾಜೂಕಾಗಿ ಹಣಿದು ಮಾಡುವ ಕೆಲಸ. ಇದಕ್ಕೆ ತಾಳ್ಮೆ, ಸಂಯಮ, ಶ್ರದ್ಧೆ ಇರಲೇಬೇಕು. ವೈವಿಧ್ಯ ಆಕಾರದ ಗಣಪತಿ, ಸ್ತ್ರೀಯ ವಿವಿಧ ಭಂಗಿಯ, ನಾನಾ ಆಕಾರದ ಮುಖಗಳು, ಟೋಪಿ, ಬೀಸಣಿಗೆ, ಹೂ ಬುಟ್ಟಿ, ಯಕ್ಷವೇಷ... ಹೀಗೆ ಹಲವು ಬಗೆಯ ಕಣ್ಮನ ಸೆಳೆಯುವ ಅಲಂಕಾರದ ಲಾವಂಚದ ಕಲಾಕೃತಿಗಳು ಜನಮನ ಸೆಳೆಯುತ್ತವೆ.ಟ
-ಚಿತ್ರ, ಲೇಖನ: ಗಣಪತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


