ಹೊಸ ಮರ್ಸಿ ಕ್ರಿಯೇಟ್
ಮರ್ಸಿಡೆಸ್ ಬೆಂಝ್ ಇನ್ನೊಂದು ಮರಿ ಹಾಕಿದೆ! ಐಷಾರಾಮಿ ಕಾರುಗಳಿಗೆ ಹೆಸರಾದ ಮರ್ಸಿಡಿಸ್ ಬೆಂಝ್ ...

ಮರ್ಸಿಡೆಸ್ ಬೆಂಝ್ ಇನ್ನೊಂದು ಮರಿ ಹಾಕಿದೆ! ಐಷಾರಾಮಿ ಕಾರುಗಳಿಗೆ ಹೆಸರಾದ ಮರ್ಸಿಡಿಸ್ ಬೆಂಝ್ ಕಂಪನಿಯು ಭಾರತೀಯ ಮಾರುಕಟ್ಟೆಗೆ ನೂತನ ಕಾರು ಬಿಡುಗಡೆ ಮಾಡಿದೆ. ಇದೇ ಮೊದಲ ಬಾರಿಗೆ ಬೆಂಗಳೂರಿನ ಸುಂದರಂ ಮೋಟಾರ್ಸ್‌ನಲ್ಲಿ ಎಎಂಜಿ ಪರ್ಫಾಮೆನ್ಸ್ ಕೇಂದ್ರವನ್ನೂ ತೆರೆಯಲಾಗಿದೆ.
ಎಂಎಲ್-63 ಎಎಂಜಿ ಎಸ್‌ಯುವಿ ಬೆಂಝ್‌ನ ಹೊಸ ಪರಿಚಯ. ಐಷಾರಾಮಿ ಕಾರು ಪ್ರಿಯರನ್ನು ಕೂಡಲೇ ಸೆಳೆಯಬಲ್ಲ ಈ ಕಾರು, 5.5 ಲೀಟರ್ ಬಿಟರ್ಬೋ ಎಂಜಿನ್ ಹಾಗೂ 760 ಎನ್‌ಎಂ ಟೊರ್ಕ್ ಸಾಮರ್ಥ್ಯವಿದೆ. ಕಾರಿನ ಏರ್‌ಮ್ಯಾಟಿಕ್ ವ್ಯವಸ್ಥೆ ಸ್ಮೂತ್ ರೈಡಿಂಗ್ ಅನುಭವ ನೀಡಲಿದೆ. ಕೇವಲ 4.7 ಸೆಕೆಂಡುಗಳಲ್ಲಿ 100 ಕಿ.ಮೀ. ವೇಗ ಪಡೆಯಬಹುದಾದ ಈ ಕಾರಿನ ಗರಿಷ್ಠ ವೇಗವು ಗಂಟೆಗೆ 250 ಕಿ.ಮೀ.
ವಿಶೇಷ ಸ್ಟಾರ್ ಕೇರ್ ಸೌಲಭ್ಯ ನೀಡಲಾಗಿದ್ದು, 4 ವರ್ಷಗಳವರೆಗೆ ವಾರಂಟಿ ವಿಸ್ತರಿಸಲಾಗಿದೆ. ಎಂಎಲ್ 63 ಎಎಂಜಿ ಸಾಮರ್ಥ್ಯವನ್ನು ವೃದ್ಧಿಸಲು ಸ್ಪೀಡ್ ಶಿಫ್ಟ್ 7 ಜಿ ಟ್ರೋನಿಕ್ ಅಟೋಮ್ಯಾಟಿಕ್ ತಂತ್ರಜ್ಞಾನ ನೀಡಲಾಗಿದೆ. ಇದರಿಂದಾಗಿ ಇಂಧನದ ದಕ್ಷ ಬಳಕೆ ಲಭ್ಯವಾಗಲಿದ್ದು, ಶಕ್ತಿಶಾಲಿ ಡ್ರೈವಿಂಗ್‌ನ ಅನುಭವ ದೊರೆಯಲಿದೆ.
ಆಕರ್ಷಕ ವಿನ್ಯಾಸ
ಟೈಟೇನಿಯಂ ನೇರಳೆ ಬಣ್ಣದಿಂದ ಆಕರ್ಷಕ ವಿನ್ಯಾಸ ಪಡೆದಿರುವ ಎಎಂಜಿಗೆ 265/ಆರ್20 ಟಯರ್ ಹೊಂದಿದೆ. ಇದಕ್ಕೆ ಪೂರಕವಾಗಿ ಹೈ ಪರ್ಫಾರ್ಮನ್ಸ್ ಬ್ರೇಕಿಂಗ್ ಸಿಸ್ಟಮ್ ನೀಡಲಾಗಿದ್ದು, ತ್ವರಿತಗತಿಯಲ್ಲಿ ಬ್ರೇಕ್ ಬೀಳುವ ವ್ಯವಸ್ಥೆಯಿದೆ. ಮುಂಭಾಗದಲ್ಲಿ 390-36 ಹಾಗೂ ಹಿಂಭಾಗದಲ್ಲಿ 345-26 ಎಂಎಂ ಡಿಸ್ಕ್ ಬ್ರೇಕ್ ಸೌಲಭ್ಯವಿದೆ.
ಟಾಪ್ ವಿ8ನಲ್ಲಿ ನೀಡಲಾಗುವ ಸಾಧನಗಳನ್ನು ಈ ಕಾರಿನಲ್ಲೂ ಬಳಸಿಕೊಳ್ಳಲಾಗಿದೆ. ಹೊರಭಾಗದ ವಿನ್ಯಾಸ ಆಕರ್ಷಕವಾಗಿ ಕಾಣುವುದಲ್ಲದೆ ಗಾಳಿಯನ್ನು ಸೀಳಿ ಚಲಿಸಲು ಪೂರಕವಾಗಿದೆ. ಹಗಲಿನ ಸಹಜ ಬೆಳಕಿನಲ್ಲಿ ಚಾಲಕರಿಗೆ ಇದು ರೋಮಾಂಚಕ ಅನುಭವ ತರುತ್ತದೆ. ರಾತ್ರಿಯ ವೇಳೆಯೂ ಇದೇ ಅನುಭವ ದೊರೆಯಲಿದೆ. ರಾತ್ರಿಯಲ್ಲಿ ಎಲ್‌ಇಡಿ ಹೆಡ್‌ಲೈಟ್‌ಗಳು ಡ್ರೈವಿಂಗಿಗೆ ಇನ್ನಷ್ಟು ಆಹ್ಲಾದ ನೀಡುತ್ತವೆ.
ಸಂಸ್ಥೆಯ ಮಾರುಕಟ್ಟೆ ನಿರ್ದೇಶಕ ಮಾರಿಯೋ ಸ್ಪಿಟ್ಜನರ್, ಎಎಂಜಿ ಅತ್ಯುತ್ತಮ ಅನುಭವ ನೀಡುವಲ್ಲಿ ಮುಂಚೂಣಿಯಲ್ಲಿದೆ. ಈ ಮಾದರಿಯ ಉತ್ಪನ್ನಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಿ ಗ್ರಾಹಕರಿಗೆ ಉತ್ತಮ ಚಾಲನಾ ಅನುಭವ ದೊರೆಯುವಂತೆ ಮಾಡುವುದು ಸಂಸ್ಥೆಯ ಉದ್ದೇಶ ಎನ್ನುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


