ಮಸ್ತಾಗಿದೆ ಯುಟಿಲಿಟಿ ಫೆಸಿಲಿಟಿ
ವಿನೂತನ ಮಾದರಿಯ ಯುಟಿಲಿಟಿ ವಾಹನ ಮೋವಸ್ ಅನ್ನು ಟಾಟಾ ಸಂಸ್ಥೆಯು ಮಾರುಕಟ್ಟೆಗೆ ತಂದಿದೆ...

ವಿನೂತನ ಮಾದರಿಯ ಯುಟಿಲಿಟಿ ವಾಹನ ಮೋವಸ್ ಅನ್ನು ಟಾಟಾ ಸಂಸ್ಥೆಯು ಮಾರುಕಟ್ಟೆಗೆ ತಂದಿದೆ. ಒಂದು ಕುಟುಂಬದ ಸದಸ್ಯರೆಲ್ಲರೂ ಆರಾಮದಾಯಕವಾಗಿ ಪ್ರಯಾಣಿಸಲು ಅವಕಾಶವಾಗುವಂತೆ ಯುಟಿಲಿಟಿ ವಾಹನ ಸ್ಥಳಾವಕಾಶ ಹೊಂದಿದೆ.
ಇದೇ ಶ್ರೇಣಿಯ ಎಲ್ಲ ವಾಹನಗಿಂತಲೂ ಗುಣಮಟ್ಟದಲ್ಲಿ ಅತ್ಯುತ್ತಮ ವಾಹನ ಎಂಬ ಖ್ಯಾತಿ ಪಡೆದಿದ್ದು ದೇಶದ ಮಹಾನಗರಗಳು ಮತ್ತು ಆಯ್ದ ಕೆಲವು ನಗರಗಳಲ್ಲಿ ಟಾಟಾ ಮೋಟಾರ್ಸ್ ವಿತರಕರಲ್ಲಿ ಲಭ್ಯವಿದೆ. ಮೋವಸ್ ಯುಟಿಲಿಟಿ ವಾಹನದ ಬೆಲೆಯು ರು. 6.99 ಲಕ್ಷದಷ್ಟಿದೆ ಹಾಗೂ ಎಂಜಿನ್‌ನ ವಾರಂಟಿ 3 ವರ್ಷಗಳು ಅಥವಾ 1.5 ಲಕ್ಷ ಕಿ.ಮೀ.ವರೆಗಿದೆ. ನೂತನ ಮೋವಸ್ ಯುಟಿಲಿಟಿ ವಾಹನ ಪೋರ್ಸಿಲಿನ್ ವೈಟ್, ಮೆಟಿಯೋರ್ ಸಿಲ್ವರ್ ಬಣ್ಣಗಳ ಆಯ್ಕೆಯಲ್ಲಿದೆ. ಮೋವಸ್ ಯುಟಿಲಿಟಿ ಸಿಎಕ್ಸ್ ಮತ್ತು ಎಲ್‌ಎಕ್ಸ್ ಮಾದರಿಗಳಲ್ಲಿ ಲಭ್ಯವಿದೆ. ಮೋವಸ್‌ನಲ್ಲಿ ಅಗತ್ಯಕ್ಕೆ ತಕ್ಕಂತೆ ಬದಲಿಸಿಕೊಳ್ಳಬಹುದಾದ ಆಸನ ವ್ಯವಸ್ಥೆ ಇದೆ. ಮುಂಬದಿಗೆ ಮತ್ತು ಪಾರ್ಶ್ವಕ್ಕೆ ಮುಖಮಾಡಿದ ಆಸನ ಮತ್ತು ಕ್ಯಾಪ್ಟನ್ ಸೀಟ್ ಸೌಕರ್ಯಗಳಿವೆ. ಸಂಪೂರ್ಣ ಸುಧಾರಿತ ವೇರಿಕೋರ್ 2.2 ಲೀ. ಎಂಜಿನ್ ಅಳವಡಿಸಲಾಗಿದ್ದು, ಇದು 120 ಪಿಎಸ್ ಶಕ್ತಿಯನ್ನು ಮತ್ತು 250 ಎನ್‌ಎಂ ಟಾರ್ಕ್ ಸಾಮರ್ಥ್ಯವನ್ನೂ ಒಳಗೊಂಡಿದೆ ಹಾಗೂ ಲೀ.ಗೆ 15.16 ಕಿ.ಮೀ. ಮೈಲೇಜ್ ನೀಡಬಲ್ಲದು. ಇಂಧನದ ಟ್ಯಾಂಕ್ 65 ಲೀಟರ್‌ಗಳಷ್ಟು ದೊಡ್ಡದಿದ್ದು, ನೂತನವಾದ 260 ಡಿಯಾ ಕಾನ್ಸೆಂಟ್ರಿಕ್ ಸ್ಲೀವ್ ಸಿಲಿಂಡರ್ ಸ್ವಯಂ ಚಾಲನೆಯ ಕ್ಲಚ್ ವ್ಯವಸ್ಥೆ ಇರುವುದರಿಂದ ಕ್ಲಚ್ ಮೇಲಿನ ಅವಲಂಬನೆಯನ್ನು ತಗ್ಗಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


