ಡ್ರೈವರ್ ಇಲ್ಲದ ಗೂಗಲ್ ಕಾರು!
ಚಾಲಕ ರಹಿತ ಕಾರುಗಳ ಸಾಧ್ಯತೆ ಬಗ್ಗೆ ವರ್ಷಗಟ್ಟಲೇ ದೊಡ್ಡ ಚರ್ಚೆಯಾಗಿದೆ. ಆದರೆ ಗೂಗಲ್ ಕಂಪನಿಯು ಸುಮಾರು ಒಂದು ಸಾವಿರ ಕಿ.ಮೀ..

ಚಾಲಕ ರಹಿತ ಕಾರುಗಳ ಸಾಧ್ಯತೆ ಬಗ್ಗೆ ವರ್ಷಗಟ್ಟಲೇ ದೊಡ್ಡ ಚರ್ಚೆಯಾಗಿದೆ. ಆದರೆ ಗೂಗಲ್ ಕಂಪನಿಯು ಸುಮಾರು ಒಂದು ಸಾವಿರ ಕಿ.ಮೀ. ದೂರವನ್ನು ಚಾಲಕ ರಹಿತ ಕಾರನ್ನು ಪರೀಕ್ಷಾರ್ಥವಾಗಿ ಓಡಿಸಿದೆ. ತಂತ್ರಜ್ಞಾನದ ನಾನಾ ಮಜಲುಗಳನ್ನು ಇನ್ನು ಅಭ್ಯಸಿಸುತ್ತಿರುವ ಗೂಗಲ್, ಚಾಲಕ ರಹಿತ ಕಾರಿನ ಸಾಧ್ಯಾಸಾಧ್ಯತೆ ಹಾಗೂ ಸವಾಲಿನ ಬಗ್ಗೆ ಇನ್ನೂ ಸಂಶೋಧನೆ ನಡೆಸುತ್ತಿದೆ. ಕ್ಯಾಲಿಫೋರ್ನಿಯಾದಲ್ಲಿ ಇತ್ತೀಚೆಗೆ ನಡೆಸಿದ ಪರೀಕ್ಷೆಯಲ್ಲಿ ಕಾರಿನ ಆಸುಪಾಸಿನಲ್ಲಿರುವ ವಸ್ತು ಹಾಗೂ ಸಂವೇದನೆಗಳನ್ನು ಅರ್ಥೈಸಿಕೊಳ್ಳಲು ಸಫಲವಾಗಿದೆ ಎಂದು ಗೂಗಲ್ ಹೇಳಿಕೊಂಡಿದೆ. ಆದರೆ ರಸ್ತೆಯ ಎಲ್ಲ ನಿಯಮಗಳನ್ನು ಅರ್ಥೈಸಿಕೊಂಡು ಸ್ವಯಂ ಚಾಲನೆ ಮಾಡಲು ಕಾರು ವಿಫಲವಾಗುತ್ತಿದೆ. ಅಮೆರಿಕದಂಥ ದೇಶದ ಇಂಟರ್ನೆಟ್ ವ್ಯವಸ್ಥೆಯಲ್ಲಿಯೇ ಜಿಪಿಎಸ್ ಆಧರಿಸಿ ಎಲ್ಲ ಸಂದೇಶಗಳನ್ನು ಗ್ರಹಿಸಿ ಚಾಲಕ ರಹಿತ ವ್ಯವಸ್ಥೆ ರೂಪಿಸುವುದು ಗೂಗಲ್‌ಗೆ ತುಸು ಕಷ್ಟವೇ ಆಗುತ್ತಿದೆ. ಆದರೆ ಇನ್ನೆರಡು ವರ್ಷದೊಳಗೆ ರಸ್ತೆಗೆ ಬರಲಿದೆ ಎಂಬ ವಿಶ್ವಾಸವನ್ನು ಗೂಗಲ್ ವ್ಯಕ್ತಪಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


