ಕಾರು ಬಲು ಜೋರು
ಒಂದು ಗಂಟೆಗೆ 435 ಕಿ.ಮೀ. ವೇಗದಲ್ಲಿ ಕಾರು ಚಲಿಸಲಿದೆ! ವ್ಹಾವ್.... ಇದಪ್ಪಾ ಸ್ಪೀಡ್ ಅಂದ್ರೆ. ಬೆಂಗಳೂರಿನಿಂದ ಧಾರವಾಡಕ್ಕೆ ಕೇವಲ ...

ಒಂದು ಗಂಟೆಗೆ 435 ಕಿ.ಮೀ. ವೇಗದಲ್ಲಿ ಕಾರು ಚಲಿಸಲಿದೆ!
ವ್ಹಾವ್.... ಇದಪ್ಪಾ ಸ್ಪೀಡ್ ಅಂದ್ರೆ. ಬೆಂಗಳೂರಿನಿಂದ ಧಾರವಾಡಕ್ಕೆ ಕೇವಲ ಒಂದು ಗಂಟೆಯಲ್ಲಿ ತಲುಪಬಹುದು, ಅಲ್ಲಿ ಸ್ವಲ್ಪ ಮಂಡಕ್ಕಿ ಮೆಣಸಿನಕಾಯಿ ತಿಂದು ಪುಣೆಗೆ ಇನ್ನೊಂದು ಗಂಟೆಯಲ್ಲಿ ತಲುಪಬಹುದು ಎಂದೆಲ್ಲ ಕನಸು ಕಾಣುವುದಿದ್ದರೆ ಕೊಂಚ ತಾಳಿ.
ಮೊನ್ನೆ ತಾನೇ ಹೆನೆಸ್ಸಿ ವೆನಮ್ ಜಿಟಿ ಎಂಬ ಕಾರು ಗಂಟೆಗೆ 435 ಕಿ.ಮೀ ವೇಗದಲ್ಲಿ ಚಲಿಸುತ್ತದೆ ಎಂಬ ಸುದ್ದಿ ಓದಿದ್ದೇವೆ. ಆದರೆ ವಿತ್ರವೆಂದರೆ ಇಂತಹ ಕಾರುಗಳನ್ನು ಆ ಗರಿಷ್ಠ ವೇಗದಲ್ಲಿ 10 ನಿಮಿಷ ಚಲಿಸಿದರೆ ಇಂಧನ ಟ್ಯಾಂಕ್ ಬರಿದಾಗಿಬಿಡುತ್ತದೆ! ಆ ವೇಗದಲ್ಲಿ ಕ್ರಮಿಸಬಹುದಾದ ರಸ್ತೆ ಕೂಡ ಜಗತ್ತಿನಲ್ಲೆಲ್ಲೂ ಇಲ್ಲ!
ಬುಗಾಟಿ ಅಥವಾ ವೆನಮ್ ಕಾರುಗಳು ಈ ವೇಗವನ್ನು ಕ್ರಮಿಸಿದ್ದು ವಿಮಾನ ನಿಲ್ದಾಣಗಳ ರನ್‌ವೇನಲ್ಲಿ!
ಭಾರತದ ಹೈವೆಗಳಲ್ಲಿ ಕಾರಿನ ವೇಗವನ್ನು ಸ್ಪೀಡೋ ಮೀಟರ್‌ನಲ್ಲಿ 150 ದಾಟಿಸುತ್ತಿದ್ದಂತೆ 'ಏಯ್ ಹುಷಾರು...' ಎಂದು ಪಕ್ಕಕ್ಕೆ ಕುಳಿತವರು ತಲೆಗೆ ಕುಟುಕುತ್ತಾರೆ. ವೆನಮ್ ಜಿಟಿ ಅಥವಾ ಬುಗಾಟಿಯ ಗರಿಷ್ಠ ವೇಗವನ್ನು ನಮ್ಮಲ್ಲಿ ಕನಸಿನಲ್ಲಿಯೂ ತಲುಪುವುದು ಕಷ್ಟವಾಗುತ್ತದೆ. ಈ ವೇಗಗಳೆಲ್ಲ ಕೇವಲ ಫ್ಯಾನ್ಸಿ ಸಂಖ್ಯೆಗಳಷ್ಟೆ. ಲಿಮ್ಕಾ ಅಥವಾ ಗಿನ್ನೀಸ್ ದಾಖಲೆಗಳಿಗೆ ಈ ಸಂಖ್ಯೆಗಳ ಆಟ ನಡೆಯುತ್ತದೆ.
ವಿಮಾನ ನಿಲ್ದಾಣಗಳ ರನ್‌ವೇ ಹೊರತುಪಡಿಸಿದರೆ ಉತ್ತಮ ರಸ್ತೆಗಳು ಎಂದಿದ್ದರೆ ಅದು ಫಾರ್ಮುಲಾ-1 ರೇಸ್‌ಗಳಿಗೆ ಬಳಸುವ ಟ್ರ್ಯಾಕ್ ಆಗಿದೆ. ಅಲ್ಲಿಯೇ ಇವತ್ತಿನವರೆಗೆ ದಾಖಲಾದ ಅತಿ ವೇಗದ ಚಾಲನೆ ಎಂದರೆ 360 ಕಿ.ಮೀ ಪ್ರತಿ ಗಂಟೆಗೆ. ಇದರರ್ಥ ಬುಗಾಟಿ ಅಥವಾ ವೆನಮ್ ಜಿಟಿಯಂತಹ ಗಾಡಿಗಳನ್ನು ಓಡಿಸಲು ಬಳಸುವುದಕ್ಕಿಂತ ಕೇವಲ ಪ್ರತಿಷ್ಠೆಗೆ ಬಳಸಿಕೊಳ್ಳಬಹುದು. ಗಾಡಿಗೆ ನಂಬರ್ ಪ್ಲೇಟ್ ಹಾಕುವ ಬದಲು ಇದು ಜಗತ್ತಿನಲ್ಲಿ ಅತಿ ವೇಗವಾಗಿ ಓಡುವ ಕಾರೆಂದು ಬರೆಯಿಸಿಕೊಳ್ಳಬಹುದು. ಏಕೆಂದರೆ ಅಷ್ಟೊಂದು ವೇಗದಲ್ಲಿ ಚಾಲನೆ ಮಾಡಲಂತೂ ಸಾಧ್ಯವೇ ಇಲ್ಲ. ಅಧಿಕೃತ ದಾಖಲೆಗಳ ಪ್ರಕಾರ ಗಂಟೆಗೆ 360 ಕಿ.ಮೀಗಿಂತಲೂ ಅಧಿಕ ವೇಗದಲ್ಲಿ ಚಲಿಸುವ 10 ಕಾರುಗಳು ವಿಶ್ವ ಮಾರುಕಟ್ಟೆಯಲ್ಲಿವೆ. ಕಳೆದ ಪ್ರೇಮಿಗಳ ದಿನದಂದು ವೆನಮ್ ಟಿ 435ಕಿ.ಮೀ/ಗಂಟೆ ವೇಗವನ್ನು ತಲುಪುವ ಮುಂಚೆ ಬುಗಾಟಿಯು 431ಕಿ.ಮೀ/ಗಂಟೆ ವೇಗವನ್ನು ತಲುಪಿ ಸುಮಾರು 4 ವರ್ಷಗಳ ಕಾಲ ಗಿನ್ನೆಸ್ ದಾಖಲೆಯನ್ನು ತನ್ನ ಬಳಿಯೇ ಇರಿಸಿಕೊಂಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


