ವಾಹನ

ಮಹೀಂದ್ರಾ ಕೊಡುಗೆ

ನೀವು ಮಹೀಂದ್ರಾ ಮತ್ತು ಮಹೀಂದ್ರಾ ಗ್ರಾಹಕರಾಗಿದ್ದರೆ ಮಾರ್ಚ್ ಮೊದಲ ವಾರದಲ್ಲಿ ಉಚಿತವಾಗಿ ಗಾಡಿ ತಪಾಸಣೆ ಮಾಡಿಸಿಕೊಳ್ಳಬಹುದು...

ಮಹೀಂದ್ರಾ ಕೊಡುಗೆ
Published On :

ನೀವು ಮಹೀಂದ್ರಾ ಮತ್ತು ಮಹೀಂದ್ರಾ ಗ್ರಾಹಕರಾಗಿದ್ದರೆ ಮಾರ್ಚ್ ಮೊದಲ ವಾರದಲ್ಲಿ ಉಚಿತವಾಗಿ ಗಾಡಿ ತಪಾಸಣೆ ಮಾಡಿಸಿಕೊಳ್ಳಬಹುದು.
ದೇಶದ ಯಾವುದೇ ಭಾಗದಲ್ಲಿರುವ ಮಹೀಂದ್ರಾ ಸರ್ವೀಸ್ ಕೇಂದ್ರಗಳಲ್ಲಿ ನುರಿತ ತಂತ್ರಜ್ಞರಿಂದ ಗಾಡಿಯ ತಪಾಸಣೆ ನಡೆಸಲಾಗುತ್ತದೆ. ಮಾರ್ಚ್ 3ರಿಂದ 9ರವರೆಗೆ ಈ ಸೌಲಭ್ಯ ಲಭ್ಯವಿದ್ದು, ಸ್ಕಾರ್ಪಿಯೋ, ಬೊಲೆರೊ, ಕ್ಸೈಲೋ, ಕ್ವಾಂಟೋ, ಎಕ್ಸ್‌ಯುವಿ500, ರೆಕ್ಸ್ಟಾನ್, ವಿರೆಟೋ, ವೈಬ್, ಲೋಗಾನ್ ಹಾಗೂ ಥಾರ್ ವಾಹನಗಳ ಮಾಲೀಕರು ಗಾಡಿಯ ಎಂಜಿನ್, ಸಸ್ಪೆನ್ಷನ್, ಬ್ಯಾಟರಿ ಸೇರಿದಂತೆ ಇತರ ಭಾಗಗಳ ತಪಾಸಣೆ ಮಾಡಿಸಬಹುದು. ಈ ಸಂದರ್ಭದಲ್ಲಿ ಬಿಡಿಭಾಗಗಳನ್ನು ರಿಯಾಯಿತಿ ದರದಲ್ಲಿ ನೀಡಲು ಸಂಸ್ಥೆ ನಿರ್ಧರಿಸಿದೆ. ಇದಲ್ಲದೇ ಮಾಲೀಕರಿಗೆ ಆಕರ್ಷಕ ಉಡುಗೊರೆಗಳನ್ನು ಸಂಸ್ಥೆ ನೀಡುತ್ತಿದೆ.
ಇದೇ ರೀತಿ ಹುಂಡೈ ಸಂಸ್ಥೆಯು ದೇಶದ 1000ಕ್ಕೂ ಅಧಿಕ ಔಟ್‌ಲೆಟ್‌ಗಳಲ್ಲಿ ಉಚಿತ ತಪಾಸಣೆ ಶಿಬಿರ ನಡೆಸುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.