ವಾಹನ

ಕಾರು ಕೊಳ್ಳುವಾಗ ಹೆಚ್ಚು ರಿಯಾಯಿತಿ ಪಡೆಯುವ ಕುರಿತು ಸಲಹೆಗಳು

ಕಾರು ಕೊಳ್ಳುವಾಗ ನೀವು ಹೇಗೆ ಹೆಚ್ಚು ರಿಯಾಯಿತಿ ಪಡೆಯಬಹುದು ಮತ್ತು ಹೇಗೆ ಒಳ್ಳೆಯ ವ್ಯಾಪಾರ...

ಕಾರು ಕೊಳ್ಳುವಾಗ ಹೆಚ್ಚು ರಿಯಾಯಿತಿ ಪಡೆಯುವ ಕುರಿತು ಸಲಹೆಗಳು
Published On :

ಮಿತವ್ಯಯ ಮತ್ತು ಖರ್ಚು ಮಾಡುವಿಕೆಯ ಅಂಶಗಳು ಹೆಚ್ಚು ಪ್ರಾಧಾನ್ಯತೆ ಹೊಂದಿದ ಸಂದರ್ಭಗಳಲ್ಲಿ, ಹೊಸ ಕಾರು ಕೊಳ್ಳುವಾಗ ಪಡೆಯುವ ರಿಯಾಯಿತಿಗಳು ಸಹ ಅಷ್ಟೇ ಮುಖ್ಯವಾಗುತ್ತದೆ. ಆದರೆ ಸಾಮಾನ್ಯ ಪರಿಭಾಷೆಯ ಮೂಲಕ ಗ್ರಾಹಕರ ಮೇಲೆ ಸ್ವಲ್ಪ ಒತ್ತಡ ಹೇರಿ ಅತ್ಯಲ್ಪ ರಿಯಾಯಿತಿಗೆ ಅವರನ್ನು ಒಪ್ಪಿಸಬಹುದು. ಕಾರು ಕೊಳ್ಳುವಾಗ ನೀವು ಹೇಗೆ ಹೆಚ್ಚು ರಿಯಾಯಿತಿ ಪಡೆಯಬಹುದು ಮತ್ತು ಹೇಗೆ ಒಂದು ಒಳ್ಳೆಯ ವ್ಯಾಪಾರ ಕುದುರಿಸಬಹುದು ಎಂಬುದನ್ನು ನಾವು ಇಲ್ಲಿ ನೋಡೋಣ.

ನಾವು ಸಾಧ್ಯತೆಯ ರಿಯಾಯಿತಿಗಳ ಬಗ್ಗೆ ತ್ವರಿತವಾಗಿ ಸ್ವಲ್ಪ ತಿಳಿದುಕೊಳ್ಳೋಣ; ಕಾರ್ಪೊರೇಟ್ ರಿಯಾಯಿತಿಗಳಿಂದ ಹಿಡಿದು ಲಾಯಲ್ಟಿ ಬೋನಸ್ ವರೆಗು ಕೆಲವೇ ಕೆಲವು ರಿಯಾಯಿತಿಗಳು ಇವೆ, ಆದರೆ ಅದರ ಪರಿಭಾಷೆ ನಿಮ್ಮ ಮೇಲೆ ಒತ್ತಡ ಹೇರಲು ಬಿಡಬೇಡಿ. ಆರಂಭಕ್ಕೆ ಮುನ್ನ, ವರ್ಷಾಂತ್ಯದಲ್ಲಿ ಕಾರುಗಳು ಅಗ್ಗವಾಗುತ್ತವೆ ಎಂಬುದು ನಿಮ್ಮ ಮನದಲ್ಲಿರಲಿ. ಇದಕ್ಕೆ ಕಾರಣ, ಸ್ಟಾಕ್ ನಲ್ಲಿ ಉಳಿದಿರುವ ಕಾರುಗಳ ಮಾರಾಟ ಮುಗಿಸಬೇಕಿರುತ್ತದೆ ಮತ್ತು ಸಾಮಾನ್ಯವಾಗಿ ಜನರು ಕಾರುಗಳನ್ನು ಮುಂದಿನ ವರ್ಷಾರಂಭದಲ್ಲಿ ಕೊಳ್ಳುತ್ತಾರೆ ಏಕೆಂದರೆ ಮುಂದಿನ ವರ್ಷಗಳಲ್ಲಿ ಒಳ್ಳೆಯ ಮರುಮಾರಾಟದ ಬೆಲೆ ಪಡೆಯಲು; ಆದರೆ ನೀವು ಕಾರನ್ನು ತುಂಬಾ ವರ್ಷಗಳವರಗೆ ಉಳಿಸಿಕೊಳ್ಳುವ ಯೋಚನೆ ಇದ್ದರೆ, ಆಗ ವರ್ಷಾಂತ್ಯದಲ್ಲಿ ಹೆಚ್ಚಿನ ರಿಯಾಯಿತಿಯೊಂದಿಗೆ ಕಾರು ಕೊಳ್ಳುವುದು ಹೆಚ್ಚು ಅರ್ಥಪೂರ್ಣ.

ತಯಾರಕರ ರಿಯಾಯಿತಿಗಳು
ಮೊದಲಿಗೆ, ಕಾರು ತಯಾರಕರು ತಮ್ಮ ಕಡೆಯಿಂದ ನೀಡುವ ರಿಯಾಯಿತಿ. ತಯಾರಕರು ನೀಡುವ ಈ ರಿಯಾಯಿತಿ ಸಾಮಾನ್ಯವಾಗಿ ಅಲ್ಪ ಅವಧಿಯವರಗೆ ಇರುತ್ತದೆ. ವಿಶೇಷವಾಗಿ ಅವರು ಮಾರಾಟವನ್ನು ಹೆಚ್ಚಿಸಬೇಕಾದ ಸಂದರ್ಭದಲ್ಲಿ ರಿಯಾಯಿತಿ ನೀಡುತ್ತಾರೆ. ಆಗ, ಉದಾಹರಣೆಗೆ, ಒಂದು ಕಾರಿಗೆ ಸಾಧಾರಣ ಬೇಡಿಕೆ ಇದ್ದು ಸ್ಪರ್ಧೆ ತೀವ್ರವಾಗಿದ್ದರೆ, ಆಗ ಕಾರು ತಯಾರಕರು ಗ್ರಾಹಕರನ್ನು ಸೆಳೆಯಲು ಅತಿಹೆಚ್ಚಿನ ರಿಯಾಯಿತಿ ನೀಡುತ್ತಾರೆ. ಮಾರಾಟವನ್ನು ಇನ್ನಷ್ಟು ಹೆಚ್ಚಿಸಲು ಹಬ್ಬಗಳ ಸಂದರ್ಭದಲ್ಲಿ ಇಂತಹದೇ ರಿಯಾಯಿತಿಗಳು ದೊರೆಯುತ್ತವೆ, ಏಕೆಂದರೆ ನಮ್ಮ ನಿಮ್ಮಂತಹ ಗ್ರಾಹಕರು ಮಾರುಕಟ್ಟೆಯಲ್ಲಿ ಒಳ್ಳೆಯ ವ್ಯಾಪಾರ ಮಾಡಲು ನೋಡುತ್ತಿರುತ್ತೇವೆ. ಅತಿಹೆಚ್ಚು ಮಾರಾಟವಾಗುವ ಮಾಡಲ್ ಗಳು ರಿಯಾಯಿತಿ ಪಡೆಯುವುದು ವಿರಳ, ಕಡಿಮೆ ಮಾರಾಟವಾಗುವ ಕಾರುಗಳು ಮಾತ್ರ ರಿಯಾಯಿತಿ ಪಡೆಯುತ್ತವೆ.

ರಿಯಾಯಿತಿಗಳು ಅಥವಾ ಸರ್ಕಾರಿ ಮತ್ತು ಕಾರ್ಪೊರೇಟ್ ನೌಕರರು
ತಯಾರಕರು ಸರ್ಕಾರಿ ವಲಯದ ಮತ್ತು ಕಾರ್ಪೊರೇಟ್ ವಲಯದ ನೌಕರರಿಗೆ ರಿಯಾಯಿತಿಗಳನ್ನು ಕೊಡುತ್ತಾರೆ. ರಿಯಾಯಿತಿ ಮೊತ್ತವು ಸುಮಾರು 20,000-30,000 ರೂಪಾಯಿ ಆಗಿರುತ್ತದೆ. ಈ ರೀತಿಯಲ್ಲಿ, ಕಾರು ತಯಾರಕರು ಹೆಚ್ಚು ಗ್ರಾಹಕರನ್ನು ಸೆಳೆಯುತ್ತಾರೆ (ಬಾಯ್ಮಾತಿನ ಪ್ರಚಾರ ಕೆಲಸ ಮಾಡುತ್ತದೆ, ಯಾವಾಗಲು!) ಹಾಗು ಹೊಸ ಗ್ರಾಹಕರು ರಿಯಾಯಿತಿಯ ಲಾಭ ಪಡೆಯುತ್ತಾರೆ.

ಡೀಲರ್ ಆಧಾರಿತ ರಿಯಾಯಿತಿಗಳು
ಈಗ ಡೀಲರ್ ಆಧಾರಿತ ರಿಯಾಯಿತಿಯನ್ನು ನೋಡೋಣ. ತಯಾರಕರು ನೀಡುವ ರಿಯಾಯಿತಿಯನ್ನು ಹೊರತುಪಡಿಸಿ, ಹಲವಾರು ಡೀಲರ್ ಗಳು ಬೇರೆ ಬ್ರ್ಯಾಂಡ್/ಡೀಲರ್ ಗಳಿಗಿಂತ ತಮ್ಮ ಮಾರಾಟವನ್ನು ಹೆಚ್ಚಾಗಿಸಲು ತಮ್ಮ ಲಾಭದ ಪಾಲನ್ನು ಕಡಿತಗೊಳಿಸುವ ಮೂಲಕ ರಿಯಾಯಿತಿ ನೀಡುತ್ತಾರೆ. ಕಾರಿನ ಬೆಲೆಯ ಮೇಲೆ ಶೇ.1 ರಿಂದ ಶೇ.10 ರಷ್ಟು ರಿಯಾಯಿತಿಯೊಂದಿಗೆ, ಡೀಲರ್ ಮತ್ತು ತಯಾರಕರು ನೀಡುವ ರಿಯಾಯಿತಿಗಳು, ಮಾರುಕಟ್ಟೆಯಲ್ಲಿ ಸ್ವಲ್ಪ ಕಡಿಮೆ ಬೇಡಿಕೆ ಇರುವ ಉತ್ಪನ್ನಗಳ ಮಾರಾಟ ಹೆಚ್ಚಿಸುವ ಗುರಿ ಹೊಂದಿರುತ್ತವೆ. ಈ ನಗದು ರಿಯಾಯಿತಿಗಳನ್ನು ಹೊರತುಪಡಿಸಿ, ಕಾರು ಡೀಲರ್ ಗಳು ಕಾರಿನ ಉಪಕರಣಗಳು/ಸರ್ವೀಸ್ ಗಳನ್ನು ಉಚಿತವಾಗಿ ಕೊಡುವ ರಿಯಾಯಿತಿಗಳನ್ನು ಸಹ ನೀಡುತ್ತಾರೆ. ಇವುಗಳನ್ನು ತಪ್ಪಿಸಬಾರದು. ಇವು ಭಾರಿ ನಗದು ರಿಯಾಯಿತಿಯಷ್ಟು ಆಕರ್ಷಕವಾಗಿಲ್ಲವಾದರು, ಉಚಿತ ಉಪಕರಣಗಳು ಹೊಸ ಕಾರುಗಳಿಗೆ ಒಳ್ಳೆಯ ಅರ್ಥ ಕೊಡುತ್ತವೆ.
ಇಲ್ಲಿಯವರಗೆ ನಾವು ತಯಾರಕರು ಮತ್ತು ಡೀಲರ್ ಗಳು ಕೊಡಬಹುದಾದ ಸಮನಾದ ರಿಯಾಯಿತಿಗಳ ಬಗ್ಗೆ ತಿಳಿದುಕೊಂಡೆವು. ಈಗ ಪಟ್ಟಿಯಲ್ಲಿರುವ ಮುಂದಿನ ರಿಯಾಯಿತಿಗಳ ಬಗ್ಗೆ ತಿಳಿದುಕೊಳ್ಳೋಣ.

ಎಕ್ಸ್ ಚೇಂಜ್ ಬೋನಸ್
ಎಕ್ಸ್ ಚೇಂಜ್ ಬೋನಸ್ ಎಂದು ಕರೆಯಲಾಗುವ ಇದು, ಹೊಸ ಕಾರುಗಳನ್ನು ಕೊಳ್ಳುವಾಗ ತಮ್ಮ ಕಾರುಗಳನ್ನು ಬದಲಾಯಿಸಿಕೊಳ್ಳುವವರಿಗೆ ಅನ್ವಯಿಸುತ್ತದೆ. ಇದರ ಒಂದು ತೊಂದರೆ ಎಂದರೆ, ಹೊಸ ಕಾರಿನ ಡೀಲರ್ ಗಳು, ಬಳಸಿದ ಕಾರುಗಳಿಗೆ ಕಡಿಮೆ ಬೆಲೆ ಹೇಳುತ್ತಾರಾದ್ದರಿಂದ, ಇದಕ್ಕೆ ಬೋನಸ್ ಸೇರಿಸಿದರೂ ಸಹ ಒಳ್ಳೆಯ ಬೆಲೆ ಬರುವುದಿಲ್ಲ. ಹೆಚ್ಚೆಂದರೆ ಇದು, ಇದೇ ಕಾರನ್ನು ನೇರವಾಗಿ ಒಬ್ಬ ವ್ಯಕ್ತಿಗೆ ಮಾರಾಟ ಮಾಡುವ ಮೂಲಕ ಸಿಗುವ ಹೆಚ್ಚುವರಿ ಹಣಕ್ಕೆ ಸಮನಾಗಿರುತ್ತದೆ. ಈ ಮುಂದಿನ ಬೋನಸ್ ಗೆ ಹೆಚ್ಚಿನ ಬೆಲೆ ಇದೆ.

ಲಾಯಲ್ಟಿ ಬೋನಸ್
ಲಾಯಲ್ಟಿ ಬೋನಸ್ ಎಂದು ಕರೆಯಲಾಗುವ ಇದು, ಅದರ ಹೆಸರೇ ತಿಳಿಸುವಂತೆ, ನೀವು ಯಾವ ಕಾರಿನಿಂದ ಯಾವ ಕಾರಿಗೆ ಅಪ್ ಗ್ರೇಡ್ ಆಗುತ್ತಿದ್ದೀರ ಎಂಬುದನ್ನು ಅವಲಂಬಿಸಿರುತ್ತದೆ. ಈ ಮುಂಚೆಯೆ ಕಾರನ್ನು ಹೊಂದಿರುವವರಿಗೆ ಈ ಬೋನಸ್ ಅನ್ವಯಿಸುವ ಕಾರಣ, ಮೊದಲ ಬಾರಿ ಕಾರು ಕೊಳ್ಳುವವರು ಈ ರಿಯಾಯಿತಿಗಳನ್ನು ಪಡೆಯಲು ಆಗುವುದಿಲ್ಲ. ಇನ್ನೂ ಸರಳವಾಗಿ ಹೇಳಬೇಕೆಂದರೆ, ನೀವು ಈಗ ಸದ್ಯ ಉಪಯೋಗಿಸುತ್ತಿರುವ ಕಾರಿನ ಅದೇ ಬ್ರ್ಯಾಂಡ್ ನ ಕಾರನ್ನು ಕೊಂಡರೆ, ನಿಮಗೆ ಲಾಯಲ್ಟಿ ಬೋನಸ್ ಕೊಡಬಹುದು (ಇದು ಇನ್ನೂ ತಯಾರಕರ ಅಧಿಕಾರ ವ್ಯಾಪ್ತಿಯಲ್ಲಿರುತ್ತದೆ). ಸುಮಾರು ರೂ. 5,000 – 10,000 ದಿಂದ ಬೋನಸ್ ಪ್ರಾರಂಭವಾಗುತ್ತದೆ ಮತ್ತು ವಾಹನದ ಬೇಡಿಕೆಯ ಅನುಸಾರ ಬದಲಾಗುತ್ತದೆ.

ಇನ್ಶೂರೆನ್ಸ್ ಪ್ರೀಮಿಯಂನಲ್ಲಿ ಇಳಿಕೆ
ಕಾರು ಕೊಳ್ಳುವುದೆಂದರೆ ಬರೀ ಡೀಲರ್ ಬಳಿ ಹೋಗುವುದು (ಅಥವಾ ಆನ್ ಲೈನ್ ಪೋರ್ಟಲ್ ಭೇಟಿ) ಎಂದಷ್ಟೇ ಅಲ್ಲ. ಇದರಲ್ಲಿ ಇನ್ಶೂರೆನ್ಸ್ ಇತ್ಯಾದಿಯಂತಹ ವಿಷಯಗಳನ್ನು ನೋಡಿಕೊಳ್ಳುವುದು ಸಹ ಒಳಗೊಂಡಿದೆ. ಪ್ರತಿಯೊಂದು ಹೊಸ ಕಾರನ್ನು ಡೀಲರ್ ಇನ್ಶೂರ್ ಮಾಡಬೇಕು. ಇದು ರಿಯಾಯಿತಿ ಪಡೆಯಲು ನಿಮಗೆ ಮತ್ತೊಂದು ಅವಕಾಶ ಸೃಷ್ಟಿಸುತ್ತದೆ. ಇದು ಪುನಃ, ಡೀಲರ್ ನಿಮಗೆ ಏನು ಕೊಡುತ್ತಾರೆ ಎಂಬ ಲೆಕ್ಕಕ್ಕೆ ಸೇರ್ಪಡೆಯಾಗುತ್ತದೆ. ಆದರೆ ಇನ್ಶೂರೆನ್ಸ್ ಪ್ರೀಮಿಯಂನಲ್ಲಿನ ಅತ್ಯಲ್ಪ ಇಳಿಕೆ ಹೊರೆಯಲ್ಲ, ಅಲ್ಲವೆ?

ಇದು ಸಾಲದ ಆಯ್ಕೆಗೂ ಅನ್ವಯಿಸುತ್ತದೆ. ನೀವು ಡೀಲರ್ ಬಳಿಯೇ ಎಲ್ಲಾ ವ್ಯವಹಾರ ಮಾಡುವ ಹಾಗಿದ್ದರೆ, ದೊಡ್ಡ ಮೊತ್ತದ ರಿಯಾಯಿತಿ ನೀಡುವಂತೆ ನೀವು ಡೀಲರ್ ಕೇಳಬಹುದು (ಮತ್ತು ಮನವೊಲಿಸಬಹುದು).

ಈ ಮುಂಚೆ ತಿಳಿಸಿದಂತೆ, ಇವು ನಿಮ್ಮ ಹಣಕ್ಕೆ ಹೆಚ್ಚಿನ ಮೌಲ್ಯ ಪಡೆಯುವ ಸರಳ ವಿಧಾನಗಳು. ತಯಾರಕರು ತಮ್ಮ ಉತ್ಪನ್ನಗಳತ್ತ ನಿಮ್ಮ ಆಕರ್ಷಣೆ ಬಯಸುತ್ತಾರೆ, ಡೀಲರ್ ಗಳು ಉತ್ಪನ್ನಗಳನ್ನು ಮಾರಾಟ ಮಾಡಬೇಕು, ಮತ್ತು ನೀವು ಈ ಉತ್ಪನ್ನಗಳನ್ನು ಕೊಳ್ಳಲು ಮುಂದಾಗಿದ್ದೀರಿ. ಇದು ಎಲ್ಲರಿಗೂ ಗೆಲ್ಲು-ಗೆಲ್ಲು ಎನ್ನುವಂತಹ ಸನ್ನಿವೇಶವಾದ್ದರಿಂದ, ಅದರಿಂದ ಹೆಚ್ಚು ಲಾಭ ಮಾಡಿಕೊಳ್ಳಿ. ರಿಯಾಯಿತಿಗಳನ್ನು ಕೇಳಲು ಸಂಕೋಚ ಪಡಬೇಡಿ, ಹಾಗು ಅಂತಿಮವಾಗಿ ಹಣ ಸಂದಾಯ ಮಾಡುವುದಕ್ಕೆ ಮುಂಚೆ ನೀವು ಬೇರೆ ಬೇರೆ ವೆಬ್ ಸೈಟ್ ಗಳಿಂದ ಮತ್ತು ಡೀಲರ್ ಗಳಿಂದ ಕಡೇಯದಾದ ಬೆಲೆಗಳನ್ನು ಪಡೆದುಕೊಳ್ಳುವಿರೆಂಬುದನ್ನು ಖಚಿತಪಡಿಸಿಕೊಳ್ಳಿ.

ಕಾರು ಕೊಳ್ಳುವಿಕೆಗೆ ಶುಭವಾಗಲಿ!

ಮೂಲ : http://autoportal.com/

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.