ವಾಹನ

ಕಾರೊಳಗೆ ಕಾಲಿಟ್ಟ ಆ್ಯಂಡ್ರಾಯ್ಡ್

ಕಾರೊಳಗೆ ಕಾಲಿಟ್ಟ ಆ್ಯಂಡ್ರಾಯ್ಡ್
Published On :

ಕಾರಿನ ನೆವಿಗೇಷನ್‌ಗೆ ಆ್ಯಂಡ್ರಾಯ್ಡ್ ಸಣ್ಣ ಪ್ರಮಾಣದಲ್ಲಿ ಪ್ರವೇಶ ಮಾಡಿದ್ದು ಹಳೇಕತೆ. ಕೆಲ ತಿಂಗಳ ಹಿಂದೆ ನೆವಿಗೇಷನ್‌ಗೆ ಆ್ಯಪಲ್ ಕೂಡ ನೂತನ ಸಿಸ್ಟಮ್ ಬಿಡುಗಡೆ ಮಾಡಿತ್ತು. ಈಗ ಆ್ಯಂಡ್ರಾಯ್ಡ್ ಇನ್ನು ಕೆಲ ಹೊಸತನಗಳೊಂದಿಗೆ ಕಾರಿನ ಬಾಗಿಲು ತೆಗೆದು ಒಳಹೊಕ್ಕಲು ತಯಾರಿ ನಡೆಸಿದೆ. ಇತ್ತೀಚೆಗೆ ನಡೆದ ಗೂಗಲ್ ಡೆವಲಪರ್ಸ್ ಸಮಾವೇಶದಲ್ಲಿ ಈ ಕುರಿತ ಪ್ರಾತ್ಯಕ್ಷಿಕೆಯನ್ನು ಸ್ವತಃ ಗೂಗಲ್ ತೋರಿಸಿದೆ. ಅಲ್ಲಿ ಭಾಗವಹಿಸಿದ್ದ ಡೆವಲಪರ್ಸ್‌ಗಳು ಸಿಸ್ಟಮ್‌ನ ಸೌಕರ್ಯ ನೋಡಿ ಅಚ್ಚರಿಪಟ್ಟಿದ್ದರಂತೆ.
ನೆವಿಗೇಷನ್, ಮ್ಯೂಸಿಕ್, ಮೆಸೇಜಿಂಗ್, ವೈಸ್ ಕಂಟ್ರೋಲ್ ಅನ್ನು ನೂತನ ಆ್ಯಂಡ್ರಾಯ್ಡ್ ಆಟೋದಲ್ಲಿ ಸೇರಿಸಲಾಗಿದೆ. ಇದು ನಿಮ್ಮ ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನೊಂದಿಗೆ ಇಂಟಿಗ್ರೇಟ್ ಆಗಿರುತ್ತದೆ. ಡ್ಯಾಶ್‌ಬೋರ್ಡ್‌ನಲ್ಲಿರುವ ಯುಎಸ್‌ಬಿ ಪೋರ್ಟ್‌ಗೆ ಸ್ಮಾರ್ಟಿಯನ್ನು ಸಂಪರ್ಕಿಸಿ ಮ್ಯೂಸಿಕ್, ನೆವಿಗೇಷನ್, ವೈಸ್ ಕಂಟ್ರೋಲ್, ಮೆಸೇಜಿಂಗ್ ಆಪ್ಷನ್ ಪಡೆಯಬಹುದು. ಕರೆ ಸ್ವೀಕಾರ ಹಾಗೂ ತಿರಸ್ಕಾರಕ್ಕೂ ಅವಕಾಶವಿದೆ. ಗೂಗಲ್ ವೈಸ್ ಕಂಟ್ರೋಲ್ ಮೂಲಕ ಫೋನ್ ಕಾಂಟಾಕ್ಟ್‌ನಲ್ಲಿರುವ ಸ್ನೇಹಿತರ ಹೆಸರು ಹೇಳಿದರೆ ಮ್ಯಾಪ್‌ನಲ್ಲಿ ಮಾರ್ಗ ತೋರಿಸುತ್ತದೆ. ಮೊಬೈಲ್‌ನಲ್ಲಿರುವ ವೈಸ್ ಕಂಟ್ರೋಲ್ ಆಪ್ಷನ್ ಇಲ್ಲಿ ನೆರವಿಗೆ ಬರಲಿದೆ.
ಮ್ಯೂಸಿಕ್‌ಗಾಗಿ ಮೊಬೈಲ್‌ನಲ್ಲಿ ಸೇವ್ ಆಗಿರುವುದನ್ನು ಬಳಸಿಕೊಳ್ಳಬಹುದು, ಜತೆಗೆ ಆ್ಯಂಡ್ರಾಯ್ಡ್ ಆಟೋಗೆ ಮ್ಯೂಸಿಕ್‌ಗಾಗಿಯೇ ಮತ್ತೊಂದು ಅಪ್ಲಿಕೇಷನ್ ಬರಲಿದೆ. ಇಲ್ಲಿ ಲೈವ್ ಆಗಿ ಸಂಗೀತವನ್ನು ಸ್ಟ್ರೀಮ್ ಮಾಡಬಹುದು. ಥರ್ಡ್ ಪಾರ್ಟಿ ಡೆವಲಪರ್ಸ್‌ಗೆ ಅವಕಾಶ ನೀಡುತ್ತಿರುವ ಹಿನ್ನೆಲೆಯಲ್ಲಿ ಆ್ಯಂಡ್ರಾಯ್ಡ್ ಆಟೋ ಬಳಸಿಕೊಂಡು ಇತರ ಡೆವಲಪರ್ಸ್‌ಗಳು ತಮಗೆ ಇಷ್ಟವಾದ ಮಾದರಿಯಲ್ಲಿ ಆ್ಯಪ್ ರೂಪಿಸಬಹುದಾಗಿದೆ.
ಗೂಗಲ್ ತಂತ್ರಜ್ಞರ ಪ್ರಕಾರ, ಆ್ಯಂಡ್ರಾಯ್ಡ್ ಆಟೋ ಮೂಲಕ ಭವಿಷ್ಯದಲ್ಲಿ ಕಾರು ನಿಯಂತ್ರಿಸಬಹುದು. ಇದೇ ಕಾರಣದಿಂದ ಚಾಲಕರ ವೈಯಕ್ತಿಕ ಫೋನ್‌ನಿಂದ ಇದನ್ನು ಹೈ ಸೆಕ್ಯುರಿಟಿ ಮೂಲಕ ಇಂಟಿಗ್ರೇಟ್ ಮಾಡುವ ಸಾಧ್ಯತೆಯಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.