ಫೋರ್ಡ್ ಕ್ಲಾಸಿಕ್ ದರ ಇಳಿಕೆ

ಭಾರತದ ಹಳೆಯ ಸೆಡಾನ್ಗಳಲ್ಲಿ ಒಂದಾದ ಫೋರ್ಡ್ ಕ್ಲಾಸಿಕ್ನ ದರವನ್ನು ಸುಮಾರು ಒಂದು ಲಕ್ಷ ರುಪಾಯಿವರೆಗೆ ಇಳಿಸಲಾಗಿದೆ. ಒಂದೆಡೆ ಫೋರ್ಡ್ ಇಕೋಸ್ಪೋರ್ಟ್ ಪ್ರವೇಶದಿಂದ ಅವರದೇ ಕಂಪನಿಯ ಇತರ ಕಾರುಗಳ ಮಾರಾಟದಲ್ಲಿ ತೀವ್ರ ಕುಸಿತವಾಗಿದೆ. ಮತ್ತೊಂದೆಡೆ ಇದಕ್ಕೆ ಪೈಪೋಟಿಯಾಗಿದ್ದ ಅಸೆಂಟ್ ಕಾರಿನ ಉತ್ಪಾದನೆಯನ್ನು ಹುಂಡೈ ಕಂಪನಿ ಸ್ಥಗಿತಗೊಳಿಸಿದೆ. ಈ ಹಿನ್ನೆಲೆಯಲ್ಲಿ ದರವನ್ನು ಇಳಿಸಿ ವಾಹನ ಪ್ರಿಯರನ್ನು ಆಕರ್ಷಿಸಲು ಫೋರ್ಡ್ ಸಂಸ್ಥೆ ನಿರ್ಧರಿಸಿದೆ. ಇದರಿಂದ ಫೋರ್ಡ್ ಕ್ಲಾಸಿಕ್ನ ದರವು ಸುಮಾರು 5 ಲಕ್ಷದಿಂದ ಪ್ರಾರಂಭವಾಗುವ ಸಾಧ್ಯತೆಯಿದೆ. 2005ರಿಂದಲೂ ಈ ಕಾರು ಮಾರುಕಟ್ಟೆಯಲ್ಲಿದೆ. ಮಾರ್ಚ್ ಪ್ರಾರಂಭದೊಳಗೆ ಹೊಸ ದರವು ಅನ್ವಯವಾಗುವ ಸಾಧ್ಯತೆಯಿದೆ. ಕಾರಿನಲ್ಲಿ ಮತ್ಯಾವುದೇ ಬದಲಾವಣೆ ಕುರಿತಂತೆ ಸಂಸ್ಥೆಯು ಇವತ್ತಿನವರೆಗೆ ಅಧಿಕೃತವಾಗಿ ಯಾವುದೇ ವಿಷಯ ತಿಳಿಸಿಲ್ಲ. ಪೆಟ್ರೋಲ್ ಮಾದರಿಯು 5 ಲಕ್ಷ ಹಾಗೂ ಡೀಸೆಲ್ ಮಾದರಿಯು 7.50ಲಕ್ಷದಿಂದ ಲಭ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


