ಬೋನ್ಸಾಯ್ ಸ್ವಾಮಿ
ಚಿಕ್ಕೋಡಿ ತಾಲ್ಲೂಕಿನ ಚಿಂಚಣಿ ಮಠ ಬೋನ್ಸಾಯ್ ಮಠ ಎಂದೇ ಖ್ಯಾತಿ. ನೀವೂ ಇಲ್ಲಿಗೆ ಭೇಟಿ ಕೊಟ್ಟರೆ ಅಚ್ಚರಿಪಡುತ್ತೀರಿ. ಮಠದ ಆವರ...

ಚಿಕ್ಕೋಡಿ ತಾಲ್ಲೂಕಿನ ಚಿಂಚಣಿ ಮಠ ಬೋನ್ಸಾಯ್ ಮಠ ಎಂದೇ ಖ್ಯಾತಿ. ನೀವೂ ಇಲ್ಲಿಗೆ ಭೇಟಿ ಕೊಟ್ಟರೆ ಅಚ್ಚರಿಪಡುತ್ತೀರಿ. ಮಠದ ಆವರಣದಲ್ಲೆಲ್ಲ ಬೊನ್ಸಾಯ್ ಮರಗಳು ಕಂಗೊಳಿಸುತ್ತಿವೆ. ಖುದ್ದು ಸ್ವಾಮೀಜಿಯವರೇ ಅವುಗಳ ಆರೈಕೆಗೆ ನಿಲ್ಲುವ ಪರಿ ನಿಮ್ಮಲ್ಲಿ ಇನ್ನೂ ಆಶ್ಚರ್ಯ ಹುಟ್ಟಿಸುತ್ತದೆ.
ಮಠದ ಅಲ್ಲಮಪ್ರಭು ಸ್ವಾಮೀಜಿ 15 ವರ್ಷಗಳಿಂದ ಬೋನ್ಸಾಯ್ ಮರಗಳನ್ನು ಬೆಳೆಸುತ್ತಿದ್ದಾರೆ. ಇದು ಅವರ ಹವ್ಯಾಸ. ಅರವತ್ತಕ್ಕೂ ಹೆಚ್ಚು ಬೋನ್ಸಾಯ್ ಮರಗಳು ಇಲ್ಲಿವೆ. ಅವನ್ನು ತಮ್ಮ ಮಕ್ಕಳಂತೆ ಪೋಷಿಸುತ್ತಿದ್ದಾರೆ. ತಮ್ಮಲ್ಲಿನ ಈ ಕಲೆಯನ್ನು ಆಸಕ್ತಿಯಿರುವ ಭಕ್ತರಿಗೆ ಕಲಿಸಿಕೊಡುತ್ತಿದ್ದಾರೆ.
ಬೆಳೆಯುವುದು ಹೇಗೆ?
ಗೋಡೆಗಳ ಮೇಲೆ ಬೆಳೆದ ಕುಬ್ಜ ಗಿಡಗಳನ್ನು ಬೇರು ಸಹಿತ ಕಿತ್ತು ತಂದು ತಾಯಿ ಬೇರನ್ನು ಕತ್ತರಿಸಿ ಕುಂಡದಲ್ಲಿ ನೆಟ್ಟು ತಂತಿ ಅಥವಾ ದಾರದಿಂದ ಬೇಕಾದ ಆಕೃತಿಯಲ್ಲಿ ಬಾಗಿಸಿ ಕಟ್ಟಬೇಕು. ಹೆಚ್ಚು ನೀರು ಮತ್ತು ಗೊಬ್ಬರ ಹಾಕಬಾರದು. ವರ್ಷಕ್ಕೊಮ್ಮೆ ತಾಯಿ ಬೇರನ್ನು ಕತ್ತರಿಸಿ ಸಶಕ್ತವಾಗಿಸಬೇಕು. ಬೋನ್ಸಾಯ್ ಸಸ್ಯಗಳನ್ನು ಬೆಳೆಸುವವರಿಗೆ ಸಹನೆ ಮುಖ್ಯ. ಹಲವು ವರ್ಷ ಬದುಕುವ ಈ ಮರಗಳು ಬದೂಕಿದಷ್ಟೂ ವರ್ಷ ಅಷ್ಟೇ ಎತ್ತರವಿರುತ್ತವೆ. ಅತ್ತಿ, ಆಲ, ಅರಳಿ ಮುಂತಾದವನ್ನೂ ಬೋನ್ಸಾಯ್ ಸಸ್ಯಗಳಾಗಿ ಬೆಳೆಯಬಹುದು ಎನ್ನುತ್ತಾರೆ ಸ್ವಾಮೀಜಿ. ಅವರ ಸಂಪರ್ಕಕ್ಕೆ- 9741266454.
ಭಾರಿ ಬೆಲೆ
ಬಾನ್ ಅಂದರೆ ಕುಂಡ. ಸಾಯ್ ಅಂದರೆ ಗಿಡ. ಬೋನ್ಸಾಯ್ ಎಂದರೆ ಕುಂಡದಲ್ಲಿ ಬೆಳೆದ ಗಿಡ. ಪುರಾತನ ಕಾಲದ ಋಷಿ-ಮುನಿಗಳು ಔಷಧಕ್ಕಾಗಿ ಬೋನ್ಸಾಯ್ ಮರಗಳನ್ನು ತಮ್ಮ ಮಠ ಮಂದಿರಗಳಲ್ಲಿ ಬೆಳೆಯುತ್ತಿದ್ದರು. ಮೂಲತಃ ಭಾರತದ ಕಲೆಯಾದ ಬೋನ್ಸಾಯ್ ಈಗ ವಿದೇಶಿಯರ ಹವ್ಯಾಸಿ ಕ್ಷೇತ್ರವಾಗಿ ಬೆಳೆಯುತ್ತಿದೆ. ಬೋನ್ಸಾಯ್ ಮರಗಳಿಗೆ 25 ಸಾವಿರ ರುಪಾಯಿವರೆಗೂ ಮಾರುಕಟ್ಟೆಯಲ್ಲಿ ಬೆಲೆ ಇದೆ.
- ಚಿತ್ರ-ಲೇಖನ: ಮಲ್ಲಿಕಾರ್ಜುನ ದಾನನ್ನವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


