ವಾಹನ

ಐಶಾರಾಮಿ ಎಲೈಟ್

ಐಶಾರಾಮಿ ಎಲೈಟ್
Published On :

ತೀವ್ರ ಪೈಪೋಟಿಯ ಹ್ಯಾಚ್‌ಬ್ಯಾಕ್‌ಗಳು ಈಗ (ಸಣ್ಣ ಕಾರುಗಳು) ಹೆಚ್ಚು ಆಕರ್ಷಕ ಮತ್ತು ಐಶಾರಾಮಿ. ಈ ನಿಟ್ಟಿನಲ್ಲಿ ಹುಂಡೈ ಮೊದಲ ದಾಪುಗಾಲಿಟ್ಟಿದೆ. ಎಲೈಟ್ ಐ20 ಕಾರನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಸಣ್ಣ ಕಾರುಗಳಲ್ಲೂ ಐಶಾರಾಮಿ ಸೌಲಭ್ಯಗಳನ್ನು ಮತ್ತು ಆಕರ್ಷಕ ವಿನ್ಯಾಸ ಅಳವಡಿಸಿದೆ. ಇದರೊಂದಿಗೆ ಐ20 ಕಾರು 4ನೇ ಬಾರಿಗೆ ಬದಲಾಗಿದೆ. ಹಿಂದಿನ ಮಾದರಿಗಿಂತ ಎಲೈಟ್ ಐ20 ಅತ್ಯಾಕರ್ಷಕ. ಹಿಂದಿನ ಮಾದರಿಯಲ್ಲಿದ್ದ ಡೇ ರನಿಂಗ್ ಎಲ್‌ಇಡಿ ಲೈಟ್ ಒಂದಿಲ್ಲ ಎಂಬುದನ್ನು ಬಿಟ್ಟರೆ ಇನ್ಯಾವುದೇ ನ್ಯೂನತೆ ಹುಡುಕಲು ಸಾಧ್ಯವಿಲ್ಲ.

ಕತ್ತಲಾಗುತ್ತಿದ್ದಂತೆ ಹೊತ್ತಿಕೊಳ್ಳುವ ಹೆಡ್‌ಲೈಟ್‌ಗಳು, ಆಕರ್ಷಕ 16 ಇಂಚು ಅಲಾಯ್‌ವೀಲ್‌ಗಳು, ಐಯೊನಾಯ್ಸರ್ ಹೊಂದಿರುವ ಎಸಿ ವೆಂಟ್‌ಗಳ, ಟಿಲ್ಟ್(ಮೇಲೆ, ಕೆಳಗೆ) ಮತ್ತು ಟೆಲಿಸ್ಕೋಪಿಕ್(ಮುಂದೆ ಹಿಂದೆ) ಸ್ಟೇರಿಂಗ್ ವೀಲ್, ಹಿಂಭಾಗದ ಗಾಜಿನ ಇಕ್ಕೆಲಗಳಲ್ಲಿ ಕಪ್ಪು ಬಣ್ಣ, ಅತ್ಯಂತ ಆಕರ್ಷಕ ವಿನ್ಯಾಸದ ಬ್ರೇಕ್‌ಲೈಟ್, ಡ್ಯುಯಲ್ ಟೋನ್‌ನ ಒಳ ವಿನ್ಯಾಸ, ಪಾರ್ಕಿಂಗ್‌ಗೆ ಸಹಕರಿಸಲು ಹಿಂಬದಿ ಕ್ಯಾಮೆರಾ ಮತ್ತು ಸ್ಟೇರಿಂಗ್ ಅನುಸರಿಸಿ ಸೂಚನೆ ನೀಡುವ ಪಾರ್ಕಿಂಗ್ ಅಸಿಸ್ಟ್, ಪ್ರಯಾಣಿಕರ ರಕ್ಷಣೆಗಾಗಿ ಎಬಿಎಸ್ ಮತ್ತು ಏರ್‌ಬ್ಯಾಗ್, ಮಿರರ್‌ಗೆ ಎಲ್‌ಇಡಿ ಟರ್ನ್ ಇಂಡಿಕೇಟರ್ಸ್, ಸನ್‌ಗ್ಲಾಸ್ ಹೋಲ್ಡರ್, ಕೀಲೆಸ್ ಎಂಟ್ರಿ, ಪುಶ್ ಬಟನ್ ಸ್ಟಾರ್ಟ್, ಎಲೆಕ್ಟ್ರಿಕಲಿ ಆಪರೇಟೆಡ್ ಮಿರರ್ಸ್ ಹೀಗೆ ಹೇಳಿದಷ್ಟೂ ಮುಗಿಯದಷ್ಟು ಸೌಲಭ್ಯಗಳು.

ಅದೆಲ್ಲಕ್ಕಿಂತ ಹೆಚ್ಚಾಗಿ ಕಾರು ಹೊರಗಿನಿಂದ ನೋಡಲು ಅತ್ಯಂತ ಆಕರ್ಷಕವಾಗಿದೆ. ಈ ಸೌಂದರ್ಯವೇ ಸಾಕು ನಿಮ್ಮನ್ನು ಚುಂಬಕದಂತೆ ಸೆಳೆಯಲು. ಒಂಥರಾ ಲವ್ ಅಟ್ ಫಸ್ಟ್‌ಸೈಟ್ ಅಂತಾರಲ್ಲಾ... ಅದು ಪಕ್ಕಾ. ಇದು ಇತರ ಕಾರುಗಳ ಶೈಲಿ ಮತ್ತು ವಿನ್ಯಾಸದಲ್ಲೂ ಬದಲಾವಣೆ ತರುವ ಅನಿವಾರ್ಯತೆ ಸೃಷ್ಟಿಸಿದೆ.

ಈ ಕಾರು ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್ ಎರಡರಲ್ಲೂ ಲಭ್ಯವಿದೆ. ಪೆಟ್ರೋಲ್ ಎಂಜಿನ್‌ನ ಎರ್ರಾ ಮಾದರಿಗೆ 4.98 ಲಕ್ಷ, ಮಗ್ನಾ ಮಾದರಿಗೆ 5.51 ಲಕ್ಷ, ಸ್ಪೋರ್ಟ್ಸ್‌ಗೆ 6.04 ಲಕ್ಷ ರುಪಾಯಿ. ಇನ್ನು ಡಿಸೇಲ್‌ನ ಎರ್ರಾ ಮಾದರಿಗೆ 6.02 ಲಕ್ಷ, ಮಗ್ನಾಗೆ 6.73 ಲಕ್ಷ, ಸ್ಪೋರ್ಟ್ಸ್ ಮಾದರಿಗೆ 7.26ಲಕ್ಷ ಬೆಲೆಗೆ ಬೆಂಗಳೂರಿನಲ್ಲಿ ಲಭ್ಯವಿದೆ. ಡಿಸೇಲ್ ಎಂಜಿನ್ ಪ್ರತಿ ಲೀಟರ್‌ಗೆ 22.54 ಕಿ.ಮೀ ಹಾಗೂ ಪೆಟ್ರೋಲ್ ಎಂಜಿನ್ ಹೊಂದಿರುವ ಕಾರು ಪ್ರತಿ ಲೀಟರ್ 18.60 ಕಿ.ಮೀ ಸಂಚರಿಸಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.