ವಾಹನ

ಬೆಟ್ಟಹಳ್ಳಿಯ ದಿಟ್ಟ ಮಕ್ಕಳು

ಈ ಶಾಲೆ ಕಡಿಮೆ ಮಕ್ಕಳಿರುವ ಶಾಲೆಯಾದರೂ ಸಾಧಿಸಿರುವ ಕೀರ್ತಿ ಮಾತ್ರ ಬಹಳ ದೊಡ್ಡದು. ಪರಿಸರ ಕಾಳಜಿ, ಸಾಹಸ ಕ್ರೀಡೆ...

ಬೆಟ್ಟಹಳ್ಳಿಯ ದಿಟ್ಟ ಮಕ್ಕಳು
Published On :

ಈ ಶಾಲೆ ಕಡಿಮೆ ಮಕ್ಕಳಿರುವ ಶಾಲೆಯಾದರೂ ಸಾಧಿಸಿರುವ ಕೀರ್ತಿ ಮಾತ್ರ ಬಹಳ ದೊಡ್ಡದು. ಪರಿಸರ ಕಾಳಜಿ, ಸಾಹಸ ಕ್ರೀಡೆ, ಗ್ರಾಮ ನೈರ್ಮಲ್ಯ, ಮಿಲಿಟರಿ ತರಬೇತಿ, ಸುಂದರ ರಾಕ್ ಮಾದರಿಗಳನ್ನು ತಯಾರಿಸುವ ಕಲೆ, ಬಿದಿರಿನ ಮಾದರಿಗಳ ತಯಾರಿಕೆ, ಉದ್ಯಾನವನ ನಿರ್ವಹಣೆ, ಪ್ಲಾಸ್ಟಿಕ್ ನಿರ್ಮೂಲನೆಗಾಗಿ ಪೇಪರ್ ಕವರ್, ಪೇಪರ್ ಬ್ಯಾಗ್ ತಯಾರಿಕೆ ಹೀಗೆ ಹತ್ತು ಹಲವು ಪ್ರಯೋಗ ನಡೆಸಿ ಅನೇಕ ವಿನೂತನ ಕಲಿಕಾ ವಿಧಾನಗಳನ್ನು ಪರಿಚಯಿಸಿರುವ ಬೆಟ್ಟಹಳ್ಳಿ ಕಾಲೋನಿ ಶಾಲಾ ಪುಟಾಣಿಗಳು ಈಗ ತಮ್ಮ ವಯಸ್ಸಿಗೂ ಮೀರಿದ ಡ್ರಮ್‌ಸೆಟ್ ಕಲೆ ಮೈಗೂಡಿಸಿಕೊಂಡು ಸುದ್ದಿಯಲ್ಲಿದ್ದಾರೆ.
ಶಾಲೆಯಲ್ಲಿ 1ರಿಂದ 5ನೇ ತರಗತಿಯ ಕೇವಲ ಹದಿನಾರು ಮಕ್ಕಳಿದ್ದು ಆರು ಗಂಡು ಮತ್ತು ಹತ್ತು ಹೆಣ್ಣು ಮಕ್ಕಳಿದ್ದಾರೆ. ಈ ಪುಟ್ಟ ಮಕ್ಕಳಿಗೆ ಸಾಧಿಸುವ ಛಲವನ್ನು ಈ ಶಾಲೆಯ ಪ್ರತಿಭಾವಂತ ಶಿಕ್ಷಕ ರಘುಪತಿ ಕಲಿಸಿದ್ದಾರೆ. ಪ್ರತಿ ಭಾನುವಾರ ಎರಡು ಗಂಟೆ ಡ್ರಮ್‌ಸೆಟ್ ತರಬೇತಿ. ಗಂಡು ಮತ್ತು ಹೆಣ್ಣು ಮಕ್ಕಳ ಪ್ರತ್ಯೇಕ ತಂಡ ರಚಿಸಿಕೊಂಡು ಡ್ರಮ್‌ಸೆಟ್ ಕಲೆ ಕರಗತ ಮಾಡಿಕೊಂಡಿದ್ದಾರೆ.  ಮಕ್ಕಳ ಕಲಿಕೆ ಕಂಡು ಅಚ್ಚರಿಯಾಗಿದೆ. ಡ್ರಮ್‌ಸೆಟ್‌ನ್ನು ಮೊದಲು ಗಂಡು ಮಕ್ಕಳು ನುಡಿಸುತ್ತಿದ್ದರು. ಅದನ್ನು ನೋಡುತ್ತಾ ಕಲಿತ ಶಾಲೆಯ ಹೆಣ್ಣು ಮಕ್ಕಳೂ ನಾವೇನೂ ಕಡಿಮೆಯಿಲ್ಲ ಅನ್ನುವ ರೀತಿಯಲ್ಲಿ ನುಡಿಸಿ ಸೋಜಿಗ ಹುಟ್ಟಿಸುತ್ತಿದ್ದಾರೆ. ಈ ಪ್ರಗತಿಗೆ ಶಿಕ್ಷಕಿ ಜಯಶ್ರೀಯ ನಿರಂತರ ಸಹಕಾರ, ಸಿಆರ್‌ಪಿ ಗಂಗರಾಜು ಮಾರ್ಗದರ್ಶನ, ಮಕ್ಕಳ ಶ್ರಮ, ಪೋಷಕರ ಆಸಕ್ತಿ ಕಾರಣ ಎನ್ನುತ್ತಾರೆ ಮುಖ್ಯ ಶಿಕ್ಷಕ ರಘುಪತಿ.
ಗ್ರಾಮದಲ್ಲಿ ಪದೇ ಪದೆ ನೀರಿನ ಅಭಾವ ಕಾಡುತ್ತದೆ. ಆಗೆಲ್ಲ ದೂರದಿಂದ ನೀರು ಹೊತ್ತು ತಂದು ಪರಿಸರವನ್ನು ಹಸಿರಾಗಿ ಉಳಿಸುತ್ತಿದ್ದಾರೆ ಈ ಶಾಲೆಯ ಮಕ್ಕಳು. ಶಿಕ್ಷಕರು ಕೂಡಾ ಮೇಲಿಂದ ಮೇಲೆ ಬಂದ ಪ್ರಶಸ್ತಿಗಳ ಹಣವನ್ನೆಲ್ಲಾ ಇದಕ್ಕಾಗಿಯೇ ವಿನಿಯೋಗಿಸಿದ್ದಾರೆ. ಶಾಲೆಯಲ್ಲಿ ಬೇಸಿಗೆ ರಜೆಯಲ್ಲಿ ಬಿಸಿಯೂಟದ ಜತೆಗೆ ಮಕ್ಕಳಿಗೆ ಒಂದು ಗಂಟೆ ಡ್ರಮ್‌ಸೆಟ್ ತರಬೇತಿ ಶಿಬಿರವನ್ನೂ ಏರ್ಪಡಿಸಲಾಗಿದೆ. ರಜೆಯಾದರೂ ಎಲ್ಲ ಮಕ್ಕಳೂ ಬಂದು ಆಸಕ್ತಿಯಿಂದ ಕಲಿಯುತ್ತಿರುವುದು ವಿಶೇಷವಾಗಿದೆ.


ನಮ್ಮ ಪಂಚಾಯತಿಯ ನನಸಾದ ಕನಸು ಈ ಬೆಟ್ಟಹಳ್ಳಿ ಕಾಲೋನಿ ಶಾಲೆ. ಇಲ್ಲಿನ ಮಕ್ಕಳು ಹಾಗೂ ಶಿಕ್ಷಕರ ಸಾಧನೆ ಕಂಡು ಸಂತಸವಾಗಿದೆ.
- ಅಕ್ಕೋಜಿ,
ಕಾರ್ಯ ನಿರ್ವಹಣಾಧಿಕಾರಿ, ಮಾಗಡಿ ತಾಪಂ.

- ರಘುಪತಿ ಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.