ವಾಹನ

ನೈರೋಬಿಯಲ್ಲಿ ಸರಿಗಮ

ಕೀನ್ಯಾದ ರಾಜಧಾನಿ ನೈರೋಬಿಯ ಕನ್ನಡ ಸಂಘದ ಆಶ್ರಯದಲ್ಲಿ ನಡೆಯಲಿದ್ದ ಕನ್ನಡ ಸಮ್ಮೇಳನಕ್ಕೆ ಬರಲು...

ನೈರೋಬಿಯಲ್ಲಿ ಸರಿಗಮ
Published On :

ಕೀನ್ಯಾದ ರಾಜಧಾನಿ ನೈರೋಬಿಯ ಕನ್ನಡ ಸಂಘದ ಆಶ್ರಯದಲ್ಲಿ ನಡೆಯಲಿದ್ದ ಕನ್ನಡ ಸಮ್ಮೇಳನಕ್ಕೆ ಬರಲು ಆಹ್ವಾನ ದೊರೆತಾಗ, ಆಫ್ರಿಕದ ಕಾಡುಗಳಲ್ಲಿ ಸುತ್ತಾಡುವ ನನ್ನ ಕನಸು ನನಸಾಯಿತೆಂದುಕೊಂಡೆ. ಸುಗಮ ಸಂಗೀತ ಗಾಯನಕ್ಕಾಗಿ ನಾನು, ಕಿಕ್ಕೇರಿ ಕೃಷ್ಣಮೂರ್ತಿ ಮತ್ತು ಶಶಿಕಲಾ ಅವರನ್ನು ಕರೆದಿದ್ದರು. ಏರ್ ಅರೇಬಿಯಾ ವಿಮಾನದಲ್ಲಿ ಯಾನ. ಕೀನ್ಯಾದ ಕನ್ನಡಿಗರಿಂದ ಅಭೂತಪೂರ್ವ ಸ್ವಾಗತ.
ಸುಸಜ್ಜಿತವಾದ ಜಕರಂಡ ಹೋಟೆಲ್‌ನಲ್ಲಿ ವಸತಿ. ಸುರಕ್ಷತೆಯ ದೃಷ್ಟಿಯಿಂದ ಹೋಟೆಲ್ ಕಂಪೌಂಡ್‌ನಿಂದ ಆಚೆ ಹೋಗಬಾರದೆಂಬ ಎಚ್ಚರಿಕೆ. ಹಸಿರಿನಿಂದ ನಳನಳಿಸುವ ನಗರ. ವರ್ಷದ ಎಲ್ಲ ಕಾಲದಲ್ಲೂ ಮಾವು ದೊರೆಯುವ ದೇಶ. ಬೇಸಿಗೆಯ ಅತ್ಯಧಿಕ ತಾಪಮಾನವೆಂದರೆ 21 ಡಿಗ್ರಿ. ಎರಡು ದಿನ ಕನ್ನಡ ಸಮ್ಮೇಳನ. ಎರಡು ಗಂಟೆ ನಮ್ಮ ಸುಗಮ ಸಂಗೀತ ರಂಜಿಸಿತು. ನಾಗತಿಹಳ್ಳಿ ಚಂದ್ರಶೇಖರ್ ಅಧ್ಯಕ್ಷತೆ. ಮರುದಿನ ಅಲ್ಲಿನ ಪ್ರಸಿದ್ಧ ನ್ಯಾಷನಲ್ ಪಾರ್ಕ್‌ಗೆ ಭೇಟಿ ನೀಡಿದೆವು. ಅಲ್ಲಿ ಮುಖ್ಯವಾಗಿ ಸಿಂಹಗಳದೇ ದರಬಾರು.  

-ನಗರ ಶ್ರೀನಿವಾಸ ಉಡುಪ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.