ಯಮಹಾ ಸಾಧನೆ
ಸತತ ಮೂರು ವರ್ಷಗಳಿಂದ ಡಲ್ ಹೊಡೆದಿದ್ದ ಭಾರತೀಯ ಆಟೋಮೊಬೈಲ್ ವಲಯವು ಚೇತರಿಕೆ ಕಾಣುತ್ತಿದೆ. 2013-14ನೇ ಆರ್ಥಿಕ ವರ್ಷದ ಕೊನೆಯ ತಿಂಗಳು ವರದಿ ಬಿಡುಗಡೆ ಮಾಡಿರುವ ಯಮಹಾ ಮೋಟಾರ್ಸ್, ಶೇ.29ರ ಧನಾತ್ಮಕ ಬೆಳವಣಿಗೆ ತೋರಿಸಿದೆ. ಅಬಕಾರಿ ಸುಂಕವನ್ನು ಇಳಿಸಿ ಕೇಂದ್ರ ಸರ್ಕಾರ ಸ್ವಲ್ಪ ಕೃಪೆ ತೋರಿರುವ ಪರಿಣಾಮದಿಂದ ಕಳೆದ 2013ರ ಮಾರ್ಚ್‌ಗೆ ಹೋಲಿಸಿದರೆ 11 ಸಾವಿರದಷ್ಟು ಹೆಚ್ಚಿನ ವಾಹನ ವ್ಯಾಪಾರವಾಗಿದೆ. ಕಳೆದ ಮಾರ್ಚ್‌ನಲ್ಲಿ 35,782 ವಾಹನ ಭಾರತೀಯ ಮಾರುಕಟ್ಟೆಯಲ್ಲಿ ಬಿಕರಿಯಾಗಿತ್ತು. ಈ ಸಾಲಿನಲ್ಲಿ ಇದು 46,052ಕ್ಕೆ ತಲುಪಿದೆ. ಇನ್ನು ರಫ್ತು ಪ್ರಮಾಣ ಕೂಡ ಏರಿದ್ದು, ಸುಮಾರು 500 ವಾಹನಗಳನ್ನು ಬೇರೆ ದೇಶಕ್ಕೆ ಕಳುಹಿಸಲಾಗಿದೆ. ಒಟ್ಟಾರೆ ಯಮಹಾ ಕಂಪನಿಯು ಶೇ.21.3ರಷ್ಟು ಬೆಳವಣಿಗೆ ಕಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

