ವಾಹನ

ಮಳೆ-ಚಳಿಯಿಂದ ಸೇಫ್ ಆಗಿರಿ...

ಕೊಡಗಿನ ಚಿಟಪಟ ಮಳೆ, ಚುಮುಚುಮು ಚಳಿ, ಮಂಜು ಕವಿದ ವಾತಾವರಣ. ನೆನಪಿಸಿಕೊಂಡರೇ ಅದೇನೋ ಉಲ್ಲಾಸ. ಮಳೆಗಾಲದಲ್ಲಿ ಕೊಡಗಿನ...

ಮಳೆ-ಚಳಿಯಿಂದ ಸೇಫ್ ಆಗಿರಿ...
Published On :

ಕೊಡಗಿನ ಚಿಟಪಟ ಮಳೆ, ಚುಮುಚುಮು ಚಳಿ, ಮಂಜು ಕವಿದ ವಾತಾವರಣ. ನೆನಪಿಸಿಕೊಂಡರೇ ಅದೇನೋ ಉಲ್ಲಾಸ. ಮಳೆಗಾಲದಲ್ಲಿ ಕೊಡಗಿನ ಪ್ರವಾಸ ಅದ್ಭುತ ಅನುಭವ. ಮಡಿಕೇರಿಯಷ್ಟೇ ಅಲ್ಲದೆ ದುಬಾರೆ, ನಿಸರ್ಗಧಾಮ, ಭಾಗಮಂಡಲ, ತಲಕಾವೇರಿ, ಅಬ್ಬಿಫಾಲ್ಸ್ ಇನ್ನೂ ಅನೇಕ ತಾಣಗಳನ್ನು ವೀಕ್ಷಿಸಬಹುದು.
ಹ್ಞಾಂ, ಕೊಡಗಿನ ಪ್ರವಾಸಕ್ಕೆ ಹೊರಡುವ ಮುನ್ನ ಒಂದಷ್ಟು ವಸ್ತುಗಳನ್ನು ನೀವು ಜತೆಗಿಟ್ಟುಕೊಳ್ಳಲೇಬೇಕು. ಛತ್ರಿಯಂತೂ ಇದ್ದೇ ಇರುತ್ತೆ ಅಲ್ವಾ?

ಮಂಕಿ ಕ್ಯಾಪ್

ತಲೆ, ಕೊರಳು ಎರಡನ್ನೂ ಮುಚ್ಚುವ ಮಂಕಿ ಕ್ಯಾಪ್ ನಿಮ್ಮನ್ನು ಬೆಚ್ಚಗಿಡುತ್ತದೆ. ತಲೆ ಮಾತ್ರ ಕವರ್ ಆಗಬೇಕು ಎಂದರೆ ಉಲ್ಲನ್ ಟೋಪಿಯಾದರೂ ಆದೀತು. ಶೀತದಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಇವೆರಡರಲ್ಲಿ ಏನಾದರೊಂದು ಜತೆಗಿರಲೇಬೇಕು.

ಸ್ಕಾರ್ಫ್
ಮಹಿಳೆಯರು ಉಲ್ಲನ್ ಅಥವಾ ಶಿಫಾನ್ ಸ್ಕಾರ್ಫ್  ಅನ್ನು ಇಟ್ಟುಕೊಳ್ಳಬೇಕು. ಕಿವಿ, ತಲೆ ಕವರ್ ಆಗಿ ಇಡೀ ಮೈ ಬೆಚ್ಚಗಿರುತ್ತದೆ. ಖರಿದಿಸುವಾಗ ಸ್ಪಲ್ಪ ದೊಡ್ಡದೇ ಕೊಂಡರೆ ಒಳ್ಳೆಯದು.

ಸ್ವೆಟರ್
ಮಳೆಗಾಲ, ಚಳಿಗಾಲದಲ್ಲಿ ಕೊಡಗು ಪ್ರವಾಸ ವಮಾಡುವುದಿದ್ದರೆ ಅತ್ಯಗತ್ಯವಾಗಿ ಸ್ವೆಟರ್ ಅನ್ನು ಇಟ್ಟುಕೊಳ್ಳಲೇಬೇಕು. ಇದು ಶರೀರವನ್ನು ಬೆಚ್ಚಗಿಡುತ್ತದೆ.

ಇವಲ್ಲದೆ...
ಮಳೆಗೆ ಬಾತ್ ಟವೆಲ್ ಬೇಗ ಒಣಗುವುದಿಲ್ಲ. ಹೀಗಾಗಿ ಎರಡು ಟವೆಲ್ ಇಟ್ಟುಕೊಳ್ಳಿ. ಕಾಲಿಗೆ ದಪ್ಪಗಿನ ಸಾಕ್ಸ್  ಇದ್ದರೆ ಚಳಿಯ ಕಷ್ಟ ಕಡಿಮೆ ಆಗಿ ಹಿತ ಅನುಭವವಿರುತ್ತದೆ. ಆದರೆ ತಿರುಗಾಡಲು ಹೋಗುವಾಗ 2 ಜೊತೆ ಇರಲಿ, ಒದ್ದೆಯಾದಾಗ ಬದಲಿಸಬೇಕಲ್ಲವೇ? ಪುಟ್ಟ ಮಕ್ಕಳಿಗೆ ಕಾಲುಚೀಲ ಹಾಕಿ ಮಲಗಿಸಿದರೆ ರಾತ್ರಿ ಚೆನ್ನಾಗಿ ನಿದ್ದೆ ಮಾಡುತ್ತಾರೆ. ಹಾಸಿಗೆಯಲ್ಲಿ ಮೂತ್ರ ಮಾಡಿಕೊಳ್ಳುವುದಿಲ್ಲ. ಅಬ್ಬಿಫಾಲ್ಸ್ ಮತ್ತಿತರ ಕಾಡು ಪ್ರದೇಶಗಳಿಗೆ ಹೋಗುವಾಗ ಗಂಬೂಟ್‌ಗಳನ್ನು ಬಳಸಿ. ಜಿಗಣೆ ಕಾಟದಿಂದ ತಪ್ಪಿಸಬಹುದು. ಇನ್ನು ವಸತಿ ತಾಣದಲ್ಲಿ ಬರಿಗಾಲಲ್ಲಿ ಓಡಾಡದೆ ಚಪ್ಪಲಿ ಧರಿಸಿ. ಸೆಲ್ಫ್ ಅಪಾರ್ಟ್‌ಮೆಂಟ್ ಅಥವಾ ಸ್ಟೇ ಹೋಮ್‌ಗಳಲ್ಲಿ ಉಳಿದರೆ ಮನೆಯ ರೂಮಿನ ಒಳಗೆ ಬೆಂಕಿ ಉರಿಸಲೆಂದೇ ಕಬ್ಬಿಣದ ಬಾಕ್ಸ್ ಇಟ್ಟಿರುತ್ತಾರೆ. ಅಲ್ಲಿ ಬೆಂಕಿ ಹಾಕಿಕೊಂಡು ರೂಮು ಬೆಚ್ಚಗಿಟ್ಟುಕೊಳ್ಳುವುದಲ್ಲದೆ ಮೈಯನ್ನೂ ಕಾಯಿಸಿಕೊಳ್ಳಬಹುದು.

- ಕೃಷ್ಣವೇಣಿ ಪ್ರಸಾದ್ ಮುಳಿಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.