ಕ್ಯಾಮೆರಾ ಶಿಕಾರಿ
ಬ್ಯಾಡಗಿ ತಹಸೀಲ್ದಾರ್ ಕಾರ್ಯಾಲಯದ ಭೂಮಿ ಕೇಂದ್ರದ ಗ್ರಾಮ ಲೆಕ್ಕಾಧಿಕಾರಿ ಶಶಿಧರ್‌ಗೆ ರಜಾ ದಿನಗಳೆಂದರೆ ಎಲ್ಲಿಲ್ಲದ ಖುಷಿ. ಅಂದು ಕೊರಳಲ್ಲಿ ಕ್ಯಾಮೆರಾ, ದೊಡ್ಡ ಟೆಲಿಲೆನ್ಸ್ ...

ಬ್ಯಾಡಗಿ ತಹಸೀಲ್ದಾರ್ ಕಾರ್ಯಾಲಯದ ಭೂಮಿ ಕೇಂದ್ರದ ಗ್ರಾಮ ಲೆಕ್ಕಾಧಿಕಾರಿ ಶಶಿಧರ್‌ಗೆ ರಜಾ ದಿನಗಳೆಂದರೆ ಎಲ್ಲಿಲ್ಲದ ಖುಷಿ. ಅಂದು ಕೊರಳಲ್ಲಿ ಕ್ಯಾಮೆರಾ, ದೊಡ್ಡ ಟೆಲಿಲೆನ್ಸ್ ಹೆಗಲಿಗೇರಿಸಿಕೊಂಡು ವನ್ಯಜೀವಿಗಳ 'ಬೇಟೆ'ಗಾಗಿ ಅರಣ್ಯದತ್ತ ಪಯಣಿಸುತ್ತಾರೆ.
ಕದರಮಂಡಲಗಿ ಗ್ರಾಮದ ಶಶಿಧರಗೆ ಛಾಯಾಗ್ರಹಣ ಹವ್ಯಾಸ. ಅದರಲ್ಲೂ ವನ್ಯಜೀವಿ ಮತ್ತು ನಿಸರ್ಗ ಛಾಯಾಗ್ರಹಣ ಅಚ್ಚುಮೆಚ್ಚು. ಬಾಲ್ಯದ ದಿನಗಳಲ್ಲಿ ಹೊಲಕ್ಕೆ ಹೋದಾಗ ಅಲ್ಲಿರುವ ಪ್ರಾಣಿಪಕ್ಷಿ, ಕೀಟಗಳ ಚಲನವಲನ ನೋಡಿ ಆನಂದ ಪಡುತ್ತಿದ್ದ ಶಶಿಧರ ಮುಂದೆ ವನ್ಯಜೀವಿ ಜಗತ್ತಿನ ಬಗ್ಗೆ ಅಧ್ಯಯನ ನಡೆಸುವ ಹೆಬ್ಬಯಕೆ ಹೊಂದಿದ್ದರು. ಬಹುಶಃ ಅದೇ ತನ್ನನ್ನು ವನ್ಯಜೀವಿ ಛಾಯಾಗ್ರಾಹಕನಾಗಲು ಪ್ರೇರೇಪಿಸಿರಬಹುದು ಎಂದು ಹೇಳಿಕೊಳ್ಳುತ್ತಾರೆ. ಗಂಟೆಗಟ್ಟಲೆ ಕಾದು ಪ್ರಾಣಿ ಜಗತ್ತಿನ ಅಪರೂಪದ ಕ್ಷಣಗಳನ್ನು ಸೆರೆ ಹಿಡಿಯುವುದರಲ್ಲಿ ನಿಪುಣರು.
ಕನ್ನಡದಲ್ಲಿ ಪುಸ್ತಕ
ಕಾಶಿನಾಥ ನೆಗಳೂರಮಠ ಅವರಿಂದ ಬೇಸಿಕ್ ಫೋಟೊಗ್ರಫಿ ಕಲಿತರು ಶಶಿಧರ. ವನ್ಯಜೀವಿ ಛಾಯಾಗ್ರಾಹಕರಾದ ಬಿ. ಶ್ರೀನಿವಾಸ ಮತ್ತು ಕೃಪಾಕರ-ಸೇನಾನಿ ಮಾರ್ಗದರ್ಶನದಲ್ಲಿ ಇವರು ನಿರ್ಮಿಸಿರುವನ್ಯಜೀವಿಗಳ ಕುರಿತ ಸಾಕ್ಷ್ಯ ಚಿತ್ರ ಮೂಡಿ ಬರುತ್ತಿದೆ. 300ಕ್ಕೂ ಹೆಚ್ಚು ಪಕ್ಷಿಗಳನ್ನು ಗುರುತಿಸಿ ಅವುಗಳ ನಡವಳಿಕೆ ಕುರಿತು ಅಧ್ಯಯನ ನಡೆಸಿ ಕನ್ನಡದಲ್ಲಿ ಪುಸ್ತಕ ಬರೆಯುತ್ತಿದ್ದಾರೆ.
ಶಾಲಾ, ಕಾಲೇಜುಗಳಿಗೆ ತೆರಳಿ ವನ್ಯಜೀವಿಗಳ ಅವುಗಳ ಆಹಾರ, -ವಿಹಾರ, ಚಲನ-ವಲನಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸುವ ಮೂಲಕ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ವನ್ಯಜೀವಿ ಛಾಯಾಗ್ರಹಣದ ಬಗ್ಗೆ ಅವರೊಂದಿಗೆ ಸಮಾಲೋಚನೆ ನಡೆಸುವವರು (ಸಂಜೆ 6ರಿಂದ 10ರ ವರೆಗೆ) ಮೊ: 9844396360ಗೆ ಕರೆ ಮಾಡಬಹುದು.
ಪ್ರಶಸ್ತಿಗಳ ಬೇಟೆ
ಹಸಿವು ನೀರಡಿಕೆ ಲೆಕ್ಕಿಸದೇ ದಿನಗಟ್ಟಲೆ ಕಾದು ಕ್ಲಿಕ್ಕಿಸಿದ ಕೆಲವು ಛಾಯಾಚಿತ್ರಗಳಿಗೆ ಪ್ರಶಸ್ತಿಗಳು ಲಭಿಸಿದ್ದುಂಟು. ಫೆಡರೇಶನ್ ಆಫ್ ಇಂಡಿಯನ್ ಪೋಟೋಗ್ರಫಿ 2000ರಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿ; ಪೋಟೋಗ್ರಫಿಕ್ ಸೊಸೈಟಿ ಬೆಂಗಳೂರು, ಸಾಗರ ಹಾಗೂ ರಾಯಚೂರು ಸೊಸೈಟಿಗಳು ಆಯೋಜಿಸಿದ್ದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಶಸ್ತಿಗಳು ಬಂದಿವೆ. ಬೆಂಗಳೂರು ಆಕಾಶವಾಣಿ ಕೇಂದ್ರ ಹಾಗೂ ರಾಜ್ಯ ಪರಿಸರ ಜೀವಿ ಪರಿಸ್ಥಿತಿ ಶಾಸ್ತ್ರ ಇಲಾಖೆಯು ಔಷಧಿ ಸಸ್ಯ ಕುರಿತು ವಿವರಣೆ ನೀಡಿದ ಹಿನ್ನೆಲೆಯಲ್ಲಿ ಸಸ್ಯಸಿರಿ ಪ್ರಶಸ್ತಿ ನೀಡಿ ಗೌರವಿಸಿದೆ. ಕೇರಳ ಸರ್ಕಾರ 2004ರಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಫಲಪುಷ್ಪ ಸ್ಪರ್ಧೆಯಲ್ಲಿ ತೃತೀಯ; 2005ರಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಲಭಿಸಿದೆ.
- ಶಿವಾನಂದ ಮಲ್ಲನಗೌಡರ, ಬ್ಯಾಡಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


