ವಾಹನ

ಏರಿತು ಇಕೋ ರೇಟು

ಏರಿತು ಇಕೋ ರೇಟು
Published On :

ಇಕೋಸ್ಪೋರ್ಟ್‌ಗೆ ಗ್ರಾಹಕರ ಭರ್ಜರಿ ಪ್ರತಿಕ್ರಿಯೆಯಿಂದ ಉತ್ಸುಕವಾಗಿರುವ ಫೋರ್ಡ್ ಕಂಪನಿ ವಾಹನದ ದರವನ್ನು ರು. 30-40 ಸಾವಿರ ಏರಿಸಿದೆ. ಇದಕ್ಕೆ ಡಾಲರ್ ದರ ಏರಿಕೆಯ ನೆಪವನ್ನು ಮುಂದಿಡಲಾಗಿದೆ. ಆದರೆ, ಡಾಲರ್ ದರಕ್ಕಿಂತ ಮುಖ್ಯವಾಗಿ, ಇಕೋಸ್ಪೋರ್ಟ್ ವಾಹನಕ್ಕೆ ಗ್ರಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದನ್ನು ಸದುಪಯೋಗಪಡಿಸಿಕೊಳ್ಳುವ ದೃಷ್ಟಿಯಿಂದ ಕಂಪನಿ ಈ ನಿರ್ಧಾರ ಕೈಗೊಂಡಿದೆ ಎಂಬುದರಲ್ಲಿ ಅನುಮಾನವಿಲ್ಲ.

ಇಕೋಸ್ಪೋರ್ಟ್ ವಾಹನದಿಂದ ಆಕರ್ಷಿತರಾದ ದೊಡ್ಡ ಪ್ರಮಾಣದ ಗ್ರಾಹಕರು ವಾಹನವನ್ನು ಬುಕ್ ಮಾಡಿದ್ದರು. ನಿಗದಿತ ಸಮಯದಲ್ಲಿ ಅವರಿಗೆ ಕಾರು ನೀಡಲು ಫೋರ್ಡ್ ಕಂಪನಿ ವಿಫಲವಾಗಿದೆ. ಅದರ ಜತೆಗೆ ವಾಹನದ ಬೆಲೆಯನ್ನೂ ಏರಿಸಿದೆ. ವಾಹನದ ಬಿಡುಗಡೆ ಸಂದರ್ಭದಲ್ಲಿ 4-5 ತಿಂಗಳು ದರದಲ್ಲಿ ಬದಲಾವಣೆ ಇಲ್ಲ ಎಂದು ಸಂಸ್ಥೆ ಮುಖ್ಯಸ್ಥರು ಹೇಳಿದ್ದರು. ಅವರ ಮಾತಿಗೆ ಅವರೇ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಗ್ರಾಹಕರು ದೂರುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.