ವಾಹನ

BMW 1 ಸೀರೀಸ್

ದೊಡ್ಡ ದೊಡ್ಡ ಕಾರು ಕಂಪನಿಗಳು ಭಾರತೀಯ ಮಾರುಕಟ್ಟೆಯತ್ತ ದೃಷ್ಟಿ ನೆಟ್ಟಿದ್ದಾರೆ....

BMW 1 ಸೀರೀಸ್
Published On :

ದೊಡ್ಡ ದೊಡ್ಡ ಕಾರು ಕಂಪನಿಗಳು ಭಾರತೀಯ ಮಾರುಕಟ್ಟೆಯತ್ತ ದೃಷ್ಟಿ ನೆಟ್ಟಿದ್ದಾರೆ. ಬೆನ್ಝ್, ಬಿಎಂಡಬ್ಲ್ಯು, ವೊಲ್ವೊ ಮುಂತಾದ ಐಷಾರಾಮಿ ಕಾರು ಕಂಪನಿಗಳು ಭಾರತೀಯ ಮಾರುಕಟ್ಟೆಯಲ್ಲಿ ಹಿಡಿತ ಸ್ಥಾಪಿಸಲು ಬರ್ಜರಿ ಪೈಪೋಟಿಗಿಳಿದಿವೆ.

ಬೆನ್ಝ್ ಎ ಮತ್ತು ಬಿ ಸಿರೀಸ್ ಮೂಲಕ ಭಾರತೀಯ ಗ್ರಾಹಕರನ್ನು ಸೆಳೆಯಲು ರು. 25-30 ಲಕ್ಷ ದರದಲ್ಲಿ ಕಾರುಗಳನ್ನು ಬಿಟ್ಟರೆ, ಈಗ ಬಿಎಂಡಬ್ಲ್ಯು ಸಂಸ್ಥೆ ಬಿಎಂಡಬ್ಲ್ಯು-1 ಸೀರೀಸ್ ಕಾರುಗಳ ಮೂಲಕ ರು. 21-30 ಲಕ್ಷ ದರದಲ್ಲಿ ಕಾರುಗಳನ್ನು ಮಾರುಕಟ್ಟೆಗೆ ಬಿಟ್ಟಿದೆ.

ಬಿಎಂಡಬ್ಲ್ಯು ಚೆನ್ನೈನಲ್ಲಿರುವ ಕಾರು ತಯಾರಿಕಾ ಘಟಕದ ಜತೆಗೆ ಮುಂಬೈನಲ್ಲೂ ಇನ್ನೊಂದು ಉತ್ಪಾದನಾ ಘಟಕ ಆರಂಭಿಸಲು ಉದ್ದೇಶಿಸಿದೆ. ವೊಲ್ವೊ ಕಂಪನಿ ಕೂಡ ಭಾರತದಲ್ಲಿ ಕಾರು ತಯಾರಿಕಾ ಘಟಕ ಆರಂಭಿಸಲು ನಿರ್ಧರಿಸಿದೆ. ಇದನ್ನೆಲ್ಲ ಗಮನಿಸಿದರೆ ವಿದೇಶಗಳ ಪ್ರಸಿದ್ಧ ಕಾರು ಕಂಪನಿಗಳು ಭಾರತೀಯ ಕಾರು ಗ್ರಾಹಕರ ಮೇಲೆ ಕಣ್ಣಿಟ್ಟಿವೆ ಎಂಬುದು ಸ್ಪಷ್ಟವಾಗುತ್ತದೆ.

ವಿದೇಶಿ ಕಂಪನಿಗಳ ಈ ದುಬಾರಿ ಅಥವಾ ಐಷಾರಾಮಿ ಕಾರುಗಳು ಸೌಲಭ್ಯಗಳ ಮತ್ತು ಆಧುನಿಕ ತಂತ್ರಜ್ಞಾನದ ಅಪಾರ ಅಳವಡಿಕೆ ಹೊಂದಿರುವುದರಿಂದ ಭಾರತೀಯ ಕಾರು ಗ್ರಾಹಕರಿಗಿದು ಉತ್ತಮ ಅವಕಾಶ. ಇದರ ಜತೆಗೆ ಈ ಕಂಪನಿಯ ಕಾರುಗಳ ಪೈಪೋಟಿ ಎದುರಿಸಲು ಇತರೆ ಕಾರು ಕಂಪನಿಗಳೂ ಅವರ ಕಾರುಗಳನ್ನು ಇನ್ನಷ್ಟು ಉತ್ತಮಪಡಿಸುವುದು ಅನಿವಾರ್ಯವಾಗುತ್ತದೆ.

ಆಧುನಿಕ ತಂತ್ರಜ್ಞಾನ, ಅದ್ಭುತ ಸುರಕ್ಷಾ ವಿಧಾನಗಳು ಮತ್ತು ಐಷಾರಾಮಿ ಸೌಲಭ್ಯಗಳು ಬಿಎಂಡಬ್ಲ್ಯು-1 ಸಿರೀಸ್ ಕಾರಿನಲ್ಲೂ ಲಭ್ಯ. ಬಿಎಂಡಬ್ಲ್ಯು ಕಾರುಗಳಿಗೆ ಹೋಲಿಸಿದರೆ ಬಿಎಂಡಬ್ಲ್ಯು-1 ಸೀರೀಸ್ ಕಾರು ಅತ್ಯಂತ ಕಡಿಮೆ ದರದ್ದು. ಆದರೆ ಅದರಲ್ಲಿರುವ ಸೌಲಭ್ಯ ಮತ್ತು ತಂತ್ರಜ್ಞಾನಗಳನ್ನು ಗಮನಿಸಿದರೆ ಅಷ್ಟೇನೂ ದುಬಾರಿಯಲ್ಲ ಎಂದೇ ಹೇಳಬಹುದು. ಅತ್ಯುತ್ತಮ ಚಾಲನೆಯ ಸಾಮರ್ಥ್ಯ ಹೊಂದಿರುವ ಅದ್ಭುತ ಮತ್ತು ಡೈನಾಮಿಕ್ ಆಲ್‌ನ್ಯೂ ಬಿಎಂಡಬ್ಲ್ಯು- 1 ಸೀರೀಸ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಮಾದರಿಯಲ್ಲಿ ಲಭ್ಯವಿದೆ. ಈ ಕಾರಿನ ಕುರಿತು ಮಾತನಾಡಿರುವ ಬಿಎಂಡಬ್ಲ್ಯು ಗ್ರೂಪ್ ಇಂಡಿಯಾ ಅಧ್ಯಕ್ಷ ಪಿಲಿಪ್ ಬಿಎಂಡಬ್ಲ್ಯು -1 ಸೀರೀಸ್ ಅತ್ಯಂತ ಜನನಿಬಿಡ ರಸ್ತೆಯಲ್ಲಿ ಜನರಿಂದ ಪ್ರತ್ಯೇಕವಾಗಿ ನವನವೀನ ಸ್ವಾತಂತ್ರ್ಯ ಮತ್ತು ಆಧುನಿಕ ನೋಟ ಅಲ್ಲದೆ ಸ್ಪೋರ್ಟ್‌ತನ ಬೆರೆತು ಕಂಗೊಳಿಸುತ್ತದೆ. ಅತ್ಯಂತ ಚುರುಕುತನ ಮತ್ತು ಕುಶಲ ಕಾರ್ಯಕ್ಷಮತೆ ಇದನ್ನು ಚಾಲನೆಯ ಕುರಿತು ಅತ್ಯಂತ ಆಸಕ್ತಿಯುಳ್ಳವರಿಗೆ ಪರಿಪೂರ್ಣ ಕಾರು. ಎಲ್ಲಕ್ಕಿಂತ ಮುಖ್ಯವಾಗಿ ಇದರ ಅನನ್ಯ ಗುಣ ಇದನ್ನು ಸಮಕಾಲೀನ, ನಗರ ಜೀವನದ ಹೆಗ್ಗುರುತನ್ನಾಗಿಸಲಿದೆ ಎಂದಿದ್ದಾರೆ.

ಬಿಎಂಡಬ್ಲ್ಯು- 1 ಸೀರೀಸ್ ಪೆಟ್ರೋಲ್ ಮಾದರಿ (ಬಿಎಂಡಬ್ಲ್ಯು 116ಐ) ಮತ್ತು ಡೀಸೆಲ್ (ಬಿಎಂಡಬ್ಲ್ಯು 118ಡಿ, ಬಿಎಂಡಬ್ಲ್ಯು 118ಡಿ ಸ್ಪೋರ್ಟ್ಸ್ ಮತ್ತು ಬಿಎಂಡಬ್ಲ್ಯು 118ಡಿ ಸ್ಪೋರ್ಟ್ಸ್ ಪ್ಲಸ್ ಮಾದರಿಗಳಲ್ಲಿ ಲಭ್ಯವಿದೆ. ಸ್ಪೋರ್ಟ್ಸ್ ಮತ್ತು ಸ್ಪೋರ್ಟ್ಸ್ ಪ್ಲಸ್ ಶಕ್ತಿಯುತ ಹಾಗೂ ಆಕ್ರಮಣಶಾಲಿ ಲಕ್ಷಣಗಳನ್ನು ಹೊಂದಿದೆ.

ಬಿಎಂಡಬ್ಲ್ಯು- 1 ಸೀರೀಸ್ ಎರಡು ನಾನ್ ಮೆಟಾಲಿಕ್ ಬಣ್ಣಗಳಲ್ಲಿ (ಅಲ್ಪೈನ್ ವೈಟ್ ಮತ್ತು ಕ್ರಿಮ್ಸನ್ ರೆಡ್) ಲಭ್ಯವಿದ್ದು, ಅದರೊಂದಿಗೆ ಆರು ಮೆಟಾಲಿಕ್ ಬಣ್ಣಗಳಲ್ಲಿ (ಬ್ಲಾಕ್‌ಸಫೈರ್, ಡೀಪ್ ಬ್ಲ್ಯೂಸೀ, ಗ್ಲೇಸಿಯರ್ ಸಿಲ್ವರ್, ಮಿಡ್‌ನೈಟ್ ಬ್ಲ್ಯೂ, ಮಿನರಲ್ ಗ್ರೇ ಮತ್ತು ವೆಲೆನ್ಸಿಯಾ ಆರೇಂಜ್) ಲಭ್ಯವಿದೆ. ಆಂತರಿಕ ವಿನ್ಯಾಸಗಳಂತೂ ಅತ್ಯಾಕರ್ಷಕವಾಗಿರುತ್ತವೆ ಎಂಬುದು ಖಚಿತ.

ಬಿಎಂಡಬ್ಲ್ಯು -1 ಸೀರೀಸ್ ದೃಢವಾದ ನೋಟ ಅಲ್ಲದೆ ಆಕರ್ಷಕ ವಿನ್ಯಾಸ ಮತ್ತು ಗಮನಾರ್ಹ ಶೈಲಿ ಹೊಂದಿದೆ. ಕಾರಿನ ಮುಂಭಾಗ ಉದ್ದದ ಬಿಎಂಡಬ್ಲ್ಯು ಕಿಡ್ನಿ- ಶೇಪ್ಡ್ ರೇಡಿಯೇಟರ್ ಗ್ರಿಲ್, ಬೋಲ್ಡ್‌ಲೀ ಶೇಪ್ಡ್ ಹೆಡ್‌ಲೈಟ್‌ಗಳು, ಹೆಡ್‌ಲೈಟ್‌ಗಳನ್ನು ಸುತ್ತುವರಿದಂತಿರುವ ರನಿಂಗ್ ಡೇಲೈಟ್‌ಗಳು ಕಾರಿಗೆ ಅತ್ಯಾಕರ್ಷಣೆ ಒದಗಿಸುತ್ತವೆ. ಹಿಂದಿನ ಸೀಟುಗಳನ್ನು 60:40 ಮಾದರಿಯಲ್ಲಿ ಮಡಚಬಹುದು.

ಬಿಎಂಡಬ್ಲ್ಯು- 1 ಸಿರೀಸ್ ಡೀಸೆಲ್ ಎಂಜಿನ್ ಕಾರು 8.7 ಸೆಕೆಂಡುಗಳಲ್ಲಿ 0-100 ಕಿ.ಮೀ. ವೇಗ ಪಡೆಯಬಹುದಾಗಿದ್ದು, ಹೆಚ್ಚೆಂದರೆ 212 ಕಿ.ಮೀ. ವೇಗದಲ್ಲಿ ಚಲಿಸಬಲ್ಲದು. ಟ್ವಿನ್ ಪವರ್ ಟರ್ಬೋ ಕಾಮನ್ ರೈಲ್ ಡೀಸೆಲ್ ಎಂಜಿನ್, ವೇರಿಯೆಬಲ್ ಟರ್ಬೈನ್ ಜಿಯಾಮೆಟ್ರಿ ಹೊಂದಿದೆ. ಡೀಸೆಲ್ ಎಂಜಿನ್ ಪ್ರತಿ ಲೀಟರ್‌ಗೆ 20 ಕಿ.ಮೀ. ಚಲಿಸಬಲ್ಲದು ಎಂದು ಕಂಪನಿ ಹೇಳಿಕೊಂಡಿದೆ. ಬಿಎಂಡಬ್ಲ್ಯು-1 ಸೀರೀಸ್ ಅತ್ಯಾಧುನಿಕ ಸುರಕ್ಷಾ ಸೌಲಭ್ಯಗಳನ್ನು ಹೊಂದಿದ್ದು ಆರು ಏರ್‌ಬ್ಯಾಗ್‌ಗಳು, ಬಿಎಂಡಬ್ಲ್ಯು ರಿಸ್ಟ್ರೈಂಟ್ ಸಿಸ್ಟಂ, ಆಟೋ ಸ್ಟಾರ್ಟ್-ಸ್ಟಾಪ್, ಬ್ರೇಕ್ ಎನರ್ಜಿ ರೀಜನರೇಷನ್, ಪ್ಯಾಸೆಂಜರ್ ಸೆಲ್ ಸಿಸ್ಟಂ ಮತ್ತು ಗಾಳಿ ಹೋದರೂ ಚಲಿಸಬಹುದಾದ ಟಯರ್ ಮುಂತಾದ ವ್ಯವಸ್ಥೆಗಳನ್ನು ಹೊಂದಿದೆ.

ಎಕ್ಸ್ ಶೋ ರೂಂ ಬೆಲೆ
ಬಿಎಂಡಬ್ಲ್ಯು 116                              ರು. 20,90,000
ಬಿಎಂಡಬ್ಲ್ಯು 118ಡಿ ಸ್ಪೋರ್ಟ್ಸ್                              ರು. 25,90,000
ಬಿಎಂಡಬ್ಲ್ಯು 118ಡಿ ಸ್ಪೋರ್ಟ್ಸ್ ಪ್ಲಸ್                                ರು. 29,90,000

- ವಕ್ರದಂತ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.